newsfirstkannada.com

ಸುಪಾರಿ ಕೊಟ್ಟು ಮಾವನನ್ನೇ ಕೊಲೆ ಮಾಡಿಸಿದ ಅಳಿಯ; ಅಸಲಿಗೆ ಆಗಿದ್ದೇನು..?

Share :

Published March 20, 2024 at 5:58am

  ಮನೆಯಿಂದ ಏಕಾಏಕಿ ಕಾಣೆಯಾಗಿದ್ದ ಅಪ್ಪನ ಬಗ್ಗೆ ಮಗಳು ದೂರು

  ನಗರವನ್ನೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳು ಅರೆಸ್ಟ್

  ಸುಪಾರಿ ಪಡೆದು ಕೊಲೆ ಮಾಡಿ ಬಳಿಕ ಮೃತದೇಹ ಏನು ಮಾಡಿದ್ದರು..?

ಮುಂಬೈ: ಅಳಿಯನೊಬ್ಬ 3 ಲಕ್ಷ ರೂಪಾಯಿಗಳ ಸುಪಾರಿ ಕೊಟ್ಟು ತನ್ನ ಮಾವನನ್ನು ಕೊಲೆ ಮಾಡಿಸಿರುವ ಘಟನೆ ಮಹಾರಾಷ್ಟ್ರದ ನಂದೂರ್‌ಬಾರ್‌ ನಗರದಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ನಂದೂರ್‌ಬಾರ್‌ ನಗರದ ನಿವಾಸಿ ರಾಜೇಂದ್ರ ಉತ್ತಮರಾವ್ ಮರಾಠೆ (53) ಕೊಲೆಯಾದವರು. ಅಳಿಯ ಗೋವಿಂದ್ ಸುರೇಶ್ ಸೋನಾರ್ (35) ಸುಪಾರಿ ಕೊಟ್ಟ ಅಳಿಯ. ಇನ್ನು ಹತ್ಯೆ ಸಂಬಂಧ ಪೊಲೀಸರು ಳಿಯ ಗೋವಿಂದ್, ನಿಲೇಶ್ ಬಚ್ಚು ಪಾಟೀಲ್ (25), ಲಕ್ಕಿ ಕಿಶೋರ್ ಬಿರಾರೆ (19) ಹಾಗೂ ಇಬ್ಬರು ಅಪ್ರಾಪ್ತರನ್ನ ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಮಾವ ರಾಜೇಂದ್ರ ತನ್ನ ಪತ್ನಿಯೊಂದಿಗೆ ನಂದೂರ್‌ಬಾರ್‌ನಲ್ಲಿ ವಾಸಿಸುತ್ತಿದ್ದರು. ಆದರೆ ಇದೇ ಮಾ.14 ರಂದು ಕಾಣೆಯಾಗಿದ್ದಾರೆ ಎಂದು ಮಗಳು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಅದರಂತೆ ಮಾ. 16 ರಂದು ಅವರ ಸುಟ್ಟಂತಹ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳು ಮುಂಬೈ ಬಿಟ್ಟು ಪರಾರಿಯಾಗುವಾಗ ಅವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೌಟಂಬಿಕ ಕಲಹ ಹಿನ್ನೆಲೆಯಲ್ಲಿ ಅಳಿಯನೇ ತನ್ನ ಮಾವನನ್ನ ಕೊಲೆ ಮಾಡಿಸಲು ನಾಲ್ವರು ಆರೋಪಿಗಳಿಗೆ 3 ಲಕ್ಷ ರೂ.ಗಳನ್ನ ಕೊಟ್ಟಿದ್ದಾರೆ. ಸುಪಾರಿ ಪಡೆದ ಹಂತಕರು ಅವರ ಮಾವನನ್ನ ಕೊಂದು ಶವವನ್ನು ನಗರದ ಹೊರ ಭಾಗರದಲ್ಲಿ ಸುಟ್ಟು ಹಾಕಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೇ ಅಳಿಯ ಆರೋಪಿಗಳಿಗೆ ದುಡ್ಡು ಕೊಡುತ್ತಿರುವುದು ಹಾಗೂ ಮೊಬೈಲ್​ನಲ್ಲಿ ಮಾತನಾಡಿರುವ ಡಾಟಾವನ್ನು ಪೊಲೀಸರು ಸಂಗ್ರಹ ಮಾಡಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಪಾರಿ ಕೊಟ್ಟು ಮಾವನನ್ನೇ ಕೊಲೆ ಮಾಡಿಸಿದ ಅಳಿಯ; ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/07/Crime-News_1.jpg

Load More