newsfirstkannada.com

ಸಿಟಿಯೆಲ್ಲ ತೋರಿಸ್ತೀನೆಂದು ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ.. ಉಬರ್​ ಕ್ಯಾಬ್ ಡ್ರೈವರ್​ನಿಂದ ಕೃತ್ಯ

Share :

Published March 31, 2024 at 12:47pm

Update March 31, 2024 at 12:48pm

    ಮತ್ತೆ ಫೋನ್ ಮಾಡು ಎಂದು ಮೊಬೈಲ್​ ನಂಬರ್ ಕೊಟ್ಟಿದ್ದ ನೀಚ

    ರಾತ್ರಿ ರಸ್ತೆಯಲ್ಲಿ ನಿಂತಿದ್ದ ಬಾಲಕಿಯನ್ನು ಕೂರಿಸಿಕೊಂಡು ಹೋಗಿದ್ದ

    ನಗರದ ಸಂಬಂಧಿಕರ ಮನೆಯಲ್ಲಿ ಕೆಲ ದಿನ ಇರಲು ಬಂದಿದ್ದ ಬಾಲಕಿ

ಮುಂಬೈ: ಉಬರ್​ ಕ್ಯಾಬ್​ ಚಾಲಕನೋರ್ವ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರದ ದಾದರ್ ಪ್ರದೇಶದಲ್ಲಿ ತಡರಾತ್ರಿ ನಡೆದಿದೆ.

ಸದ್ಯ ಈ ಘಟನೆ ಸಂಬಂಧ ಕ್ಯಾಬ್​ ಚಾಲಕ ಮೊಹಮ್ಮದ್ ಜಲೀಲ್ ಖಲೀಲ್ (33)ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಾನಸಿಕ ಅಸ್ವಸ್ಥಳಾದ 15 ವರ್ಷದ ಬಾಲಕಿ ತನ್ನ ಸಂಬಂಧಿಕರ ಜೊತಗಿರಲು ದಾದರ್​ಗೆ ಬಂದಿದ್ದಳು. ಈ ವೇಳೆ ತಡರಾತ್ರಿ 1 ಗಂಟೆ ಸುಮಾರಿಗೆ ಶೌಚಕ್ಕೆ ಎಂದು ಮನೆಯಿಂದ ಹೊರ ಬಂದು ರಸ್ತೆಯಲ್ಲಿ ನಿಂತಿದ್ದಾಳೆ. ಆಗ ಬಾಲಕಿ ಒಬ್ಬಳೆ ಇರುವುದನ್ನು ಗುರುತಿಸಿದ ಆರೋಪಿ ಖಲೀಲ್​ ಕಾರಿನಲ್ಲಿ ಮುಂಬೈನೆಲ್ಲ ತೋರಿಸುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮನೆಯಲ್ಲಿ ರಾತ್ರಿ ಕಾಣಿಸಿಕೊಂಡ ಬೆಂಕಿ.. ಉಸಿರುಗಟ್ಟಿ ಮಗು ಸೇರಿ ಒಂದೇ ಕುಟುಂಬದ ನಾಲ್ವರು ದುರ್ಮರಣ

ಬಳಿಕ ದಾದರ್ ವೆಸ್ಟ್‌ನ ಫ್ಲೈಓವರ್ ಬಳಿಯ ಗಲ್ಲಿಯೊಂದಕ್ಕೆ ಬಾಲಕಿಯನ್ನು ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ಕ್ಯಾಬ್‌ನಲ್ಲಿ ಕೂರಿಸಿಕೊಂಡು ವಾಪಸ್​ ಅದೇ ಸ್ಥಳದಲ್ಲಿ ಬಿಟ್ಟು, ಮತ್ತೆ ಫೋನ್ ಮಾಡು ಎಂದು ಮೊಬೈಲ್​ ನಂಬರ್ ಬರೆದುಕೊಟ್ಟು ಹೋಗಿದ್ದಾನೆ. ಮನೆಗೆ ವಾಪಸ್ ಆದ ಬಾಲಕಿ ನಡೆದ ಘಟನೆಯನ್ನು ಮನೆಯವರಿಗೆ ತಿಳಿಸಿದ್ದಾಳೆ. ಕುಟುಂಬಸ್ಥರು ತಕ್ಷಣ ದಾದರ್​ ಪೊಲೀಸರಿಗೆ ಮಾಹಿತಿ ತಿಳಿಸಿ,​ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಸದ್ಯ ಸಿಸಿಟಿವಿ ಹಾಗೂ ಮೊಬೈಲ್​ ನಂಬರ್​ ಸಹಾಯದಿಂದ ಆರೋಪಿ ಖಲೀಲ್​ನನ್ನು ಪೊಲೀಸರು ಪತ್ತೆ ಮಾಡಿ ಅರೆಸ್ಟ್​ ಮಾಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಟಿಯೆಲ್ಲ ತೋರಿಸ್ತೀನೆಂದು ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ.. ಉಬರ್​ ಕ್ಯಾಬ್ ಡ್ರೈವರ್​ನಿಂದ ಕೃತ್ಯ

https://newsfirstlive.com/wp-content/uploads/2024/03/MUMBHAI_UBER.jpg

Load More