newsfirstkannada.com

7 ಬೌಂಡರಿ, 3 ಸಿಕ್ಸರ್​ನಿಂದ ಸೂರ್ಯ ಭರ್ಜರಿ ಬ್ಯಾಟಿಂಗ್.. ಪಂಜಾಬ್​ಗೆ ಬಿಗ್ ಟಾರ್ಗೆಟ್ ನೀಡಿದ ಮುಂಬೈ

Share :

Published April 18, 2024 at 9:45pm

Update April 18, 2024 at 9:47pm

  ಪಂಜಾಬ್ ಪರ ಬೌಲಿಂಗ್​ನಲ್ಲಿ ಕಮಾಲ್ ಮಾಡಿದ ಕರನ್, ಪಟೇಲ್

  ಮುಂಬೈ ಪರ ಉತ್ತಮ ಆರಂಭ ಒದಗಿಸಿದ ರೋಹಿತ್- ಇಶನ್ ಕಿಶನ್

  ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕಿಂಗ್ಸ್​ ಇಲೆವೆಲ್ ಪಂಜಾಬ್​

ಐಪಿಎಲ್​ನ 33ನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್​ಗಳನ ಟಾರ್ಗೆಟ್ ನೀಡಿದೆ. ಮುಂಬೈ ಪರ ಸೂರ್ಯಕುಮಾರ್ ಯಾದವ್ ಅವರ ಅಮೋಘ ಹಾಫ್​ ಸೆಂಚುರಿಯಿಂದ ಮುಂಬೈ ಬೃಹತ್ ರನ್​ ಕಲೆಹಾಕುವಲ್ಲಿ ಯಶಸ್ವಿಯಾಯಿತು. ​

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂದು ಪಂಜಾಬ್​ ಮತ್ತು ಮುಂಬೈ ಮುಖಾಮುಖಿಯಾಗಿವೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಂಜಾಬ್​ ಎದುರಾಳಿ ಮುಂಬೈ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿತು. ಅದರಂತೆ ಮುಂಬೈ ಪರ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ರೋಹಿತ್ ಶರ್ಮಾ ಮತ್ತು ಇಶನ್ ಕಿಶನ್​ ಒಳ್ಳೆಯ ಆರಂಭ ಒದಗಿಸಲಿಲ್ಲ. ತಂಡದ ಮೊತ್ತ 18 ರನ್​ ಇರುವಾಗಲೇ ಇಶನ್​ ಔಟ್ ಆದರು.

ಇದನ್ನೂ ಓದಿ: ಮತ್ತೆ RCB ಸೇರ್ತಾರಾ ಕೆ.ಎಲ್​​ ರಾಹುಲ್​​..? ಕನ್ನಡಿಗನ ಈ ಹೇಳಿಕೆ ಹಿಂದಿನ ಮರ್ಮವೇನು?

ಇಶನ್​ ನಂತರ ಬಂದ ಸೂರ್ಯಕುಮಾರ್ ಯಾದವ್ ರೋಹಿತ್ ಶರ್ಮಾ ಜೊತೆಗೂಡಿ ಒಳ್ಳೆಯ ರನ್ ಬಾರಿಸಿದರು. 36 ರನ್ ಗಳಿಸಿ ರೋಹಿತ್ ಬ್ಯಾಟಿಂಗ್ ಮಾಡುವಾಗ ಸ್ಯಾಮ್ ಕರನ್ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಇತ್ತ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸೂರ್ಯ 7 ಫೋರ್ ಮತ್ತು 3 ಬೌಂಡರಿ ಸಮೇತ 78 ರನ್​ಗಳನ್ನು ಕಲೆ ಹಾಕಿ ತಂಡಕ್ಕೆ ನೆರವಾದರು. ತಿಲಕ್ ವರ್ಮಾ ಕೂಡ ಒಳ್ಳೆಯ ಬ್ಯಾಟಿಂಗ್ ಮಾಡಿ ಕೊನೆವರೆಗೂ ಇದ್ದು 34 ರನ್​ಗಳನ್ನು ಗಳಿಸಿ ಔಟ್ ಆಗದೇ ಉಳಿದರು. ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ ಕೇವಲ 10 ರನ್​ಗೆ ಕ್ಯಾಚ್ ನೀಡಿ ನಿರಾಶೆ ಮಾಡಿದರು. ಡೇವಿಡ್ 14, ಶೆಫಾರ್ಡ್​ 1 ರನ್​ಗೆ ಹರ್ಷಲ್ ಪಟೇಲ್​ಗೆ ವಿಕೆಟ್ ಒಪ್ಪಿಸದರು. ಹೀಗಾಗಿ ಮುಂಬೈ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್​ಗಳನ ಟಾರ್ಗೆಟ್ ಅನ್ನು ಪಂಜಾಬ್​ಗೆ ನೀಡಿದೆ.

ಪಂಜಾಬ್ ಪರ ಹರ್ಷಲ್ ಪಟೇಲ್ 3 ವಿಕೆಟ್​, ಕ್ಯಾಪ್ಟನ್ ಸ್ಯಾಮ್ ಕರನ್ 2 ಹಾಗೂ ರಬಾಡ 1 ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

7 ಬೌಂಡರಿ, 3 ಸಿಕ್ಸರ್​ನಿಂದ ಸೂರ್ಯ ಭರ್ಜರಿ ಬ್ಯಾಟಿಂಗ್.. ಪಂಜಾಬ್​ಗೆ ಬಿಗ್ ಟಾರ್ಗೆಟ್ ನೀಡಿದ ಮುಂಬೈ

https://newsfirstlive.com/wp-content/uploads/2024/04/ROHIT.jpg

Load More