ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮಧ್ಯೆ ಮತ್ತೆ ಯುದ್ಧನಾ? ಮುಂಬೈ ಇಂಡಿಯನ್ಸ್‌ ಈ ಸ್ಥಿತಿಗೆ 3 ಕಾರಣ!

author-image
admin
Updated On
IPL 2025: ಮೆಗಾ ಹರಾಜಿಗೆ ಮುನ್ನವೇ ಮುಂಬೈ ಇಂಡಿಯನ್ಸ್​ ರೀಟೈನ್​ ಲಿಸ್ಟ್​ ಔಟ್​​; ಯಾರಿಗೆ ಚಾನ್ಸ್​​?
Advertisment
  • ತಿಲಕ್ ವರ್ಮ ರಿಟೈರ್ಡ್‌ ಔಟ್​.. ಸೂರ್ಯ ಗರಂ, ರೋಹಿತ್‌ಗೆ ಬೆಂಚ್
  • ಮುಂಬೈ ತಂಡದ ಬಣ ಬಡಿದಾಟಕ್ಕೆ ಪುಷ್ಠಿ ನೀಡಿದ ಲಕ್ನೋ ಪಂದ್ಯ
  • ಮುಂಬೈ ಇಂಡಿಯನ್ಸ್ ತಂಡದಲ್ಲಿ ನಡೀತಿದ್ಯಾ ಮುಸುಕಿನ ಗುದ್ದಾಟ?

ಮುಂಬೈ ಇಂಡಿಯನ್ಸ್​ನಲ್ಲಿ ಈಗ ಎಲ್ಲವೂ ಸರಿ ಇದ್ಯಾ? ಇಂಥದ್ದೊಂದು ಪ್ರಶ್ನೆ ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ನಾಂದಿಯಾಡಿದೆ. ಗುಜರಾತ್ ಎದುರಿನ ಸೋಲಿನ ಬಳಿಕ ಮೂಡಿದ್ದ ಅನುಮಾನಕ್ಕೆ ಲಕ್ನೋ ಮ್ಯಾಚ್ ಪುಷ್ಠಿ ನೀಡಿದೆ.

ಐಪಿಎಲ್‌ ಸೀಸನ್​-17ರಲ್ಲಿ ಛಿದ್ರ ಛಿದ್ರವಾಗಿದ್ದ ಮುಂಬೈನಲ್ಲಿ ಈಗ ಎಲ್ಲವೂ ಸರಿಯಾಗಿದೆ. ಮೆನಿ ಫ್ಯಾಮಿಲಿಯಾಗಿದ್ದ ಮುಂಬೈ ಫ್ರಾಂಚೈಸಿ ಮತ್ತೆ ಒನ್​ ಫ್ಯಾಮಿಲಿಯಾಗಿದೆ ಅಂತಾನೆ ಎಲ್ಲರೂ ಅಂದುಕೊಂಡಿದ್ರು. ಆದ್ರೀಗ ಮುಂಬೈ ಇಂಡಿಯನ್ಸ್‌ನಲ್ಲಿ ಎಲ್ಲವೂ ಸರಿ ಇಲ್ವಾ ಎಂಬ ಅನುಮಾನವನ್ನು ಹುಟ್ಟು ಹಾಕಿದೆ. ಅಷ್ಟೇ ಅಲ್ಲ.. ಗುಜರಾತ್ ಟೈಟನ್ಸ್​ ಪಂದ್ಯದ ಬಳಿಕ ಹುಟ್ಟು ಹಾಕಿದ್ದ ಅನುಮಾನಕ್ಕೀಗ ಪುಷ್ಠಿ ನೀಡಿದೆ. ಇದಕ್ಕೆ ಕಾರಣ ಲಕ್ನೋ ಸೂಪರ್ ಜೈಂಟ್ಸ್​ ಎದುರಿನ ಪಂದ್ಯದ ಕೆಲ ಘಟನಾವಳಿಗಳು.

publive-image

ಕಾರಣ ನಂ.1: ರೋಹಿತ್ ಶರ್ಮಾಗೆ ನಿಗೂಢ ಇಂಜುರಿ 
ಗುಜರಾತ್ ಎದುರಿನ ಸೋಲಿನ ಬಳಿಕ ಕ್ಯಾಪ್ಟನ್ ಹಾರ್ದಿಕ್, ಓಪನರ್​​​ಗಳನ್ನೇ ಹೊಣೆಯಾಗಿಸಿದ್ದರು. ಆದ್ರೆ, ಲಕ್ನೋ ಮ್ಯಾಚ್​ನಲ್ಲಿ ರೋಹಿತ್ ಶರ್ಮಾನೇ ಬೆಂಚ್ ಕಾಯಬೇಕಾಯ್ತು. ಇದು ನಿಜಕ್ಕೂ ಅಚ್ಚರಿ ತರಿಸಿತ್ತು. ಇದಕ್ಕೆ ಮೊಣಕಾಲಿನ ಇಂಜುರಿಯ ಸಬೂಬು ನೀಡಲಾಗಿತ್ತು. ಆದ್ರೆ, ಸ್ಟ್ರಾಟರ್ಜಿ ಟೈಮ್ ಔಟ್​ ವೇಳೆ ಮೈದಾನಕ್ಕೆ ತೆರಳಿದ ರೋಹಿತ್, ಸಹ ಆಟಗಾರರಿಗೆ ಸಲಹೆ ನೀಡುತ್ತಿದ್ದರು. ಈ ವೇಳೆ ಹಾರ್ದಿಕ್, ರೋಹಿತ್​ಗೂ ತನಗೂ ಏನ್ ಸಂಬಂಧ ಇಲ್ಲ ಎಂಬಂತೆಯೇ ನಡೆದುಕೊಂಡ್ರು.

publive-image

ಕಾರಣ ನಂ.2: ತಿಲಕ್‌ ವರ್ಮ ರಿಟೈರ್ಡ್‌ ಔಟ್​
ಲಕ್ನೋ ಪಂದ್ಯದ ಶಾಕಿಂಗ್ ವಿಚಾರ ಅಂದ್ರೆ, ಅದು ತಿಲಕ್‌ ವರ್ಮ ರಿಟೈರ್ಡ್‌ ಔಟ್​. 19 ಓವರ್​​ಗಳಲ್ಲಿ ಮುಂಬೈ 5 ವಿಕೆಟ್ ಕಳೆದುಕೊಂಡು 182 ರನ್ ಕಲೆ ಹಾಕಿತ್ತು. ಕೊನೆ ಓವರ್​ನಲ್ಲಿ ಮುಂಬೈ ಗೆಲುವಿಗೆ 22 ರನ್ ಬೇಕಿತ್ತು. ಕ್ರೀಸ್​ನಲ್ಲಿ ಸೆಟಲ್‌​ ಆಗಿದ್ದ ತಿಲಕ್​ ಬದಲಿಗೆ ಸ್ಯಾಟ್ನರ್​ಗೆ ಬುಲಾವ್ ನೀಡಿದರು. ಮ್ಯಾನೇಜ್​ಮೆಂಟ್​ನ ಈ ನಡೆ ಟೀಕೆಗೂ ಗುರಿಯಾಯ್ತು.

publive-image

ಕಾರಣ ನಂ.3: ಸೂರ್ಯಕುಮಾರ್ ಯಾದವ್ ಗರಂ
ತಿಲಕ್‌ ವರ್ಮ ರಿಟೈರ್ಡ್‌ ಔಟ್​​ಗೆ ಸೂರ್ಯ ಫುಲ್ ಗರಂ ಆಗಿದ್ದರು. ಈ ನಡೆಯನ್ನು ಪ್ರಶ್ನಿಸಿದ್ದ ಸೂರ್ಯ, ಅಸಹನೆ ಹೊರ ಹಾಕಿದ್ರು. ಇದಕ್ಕೆ ಕೋಚ್ ಜಯವರ್ಧನೆ ಉತ್ತರ ನೀಡಿದರು. ಆದ್ರೆ, ಇದಕ್ಕೂ ಸಮಾಧಾನಗೊಳ್ಳದ ಸೂರ್ಯ, ಬೇಸರದಲ್ಲೇ ಕುಳಿತಿದ್ದರು.

ಆದ್ರೆ, ತಿಲಕ್ ವರ್ಮ ಬದಲಿಗೆ ಸ್ಯಾಟ್ನರ್​ಗೆ ಬುಲಾವ್ ನೀಡಿದ ತಂತ್ರವನ್ನು ಕೋಚ್, ಕ್ಯಾಪ್ಟನ್ ಇಬ್ಬರು ಸಮರ್ಥಿಸಿಕೊಂಡರು. ಇದಿಷ್ಟೇ ಅಲ್ಲ ಪಂದ್ಯದ ಸೋಲಿನ ಬಳಿಕ ಏಕಾಂಗಿಯಾಗೆ ಹಾರ್ದಿಕ್ ಪಾಂಡ್ಯ ಡ್ರೆಸ್ಸಿಂಗ್ ರೂಮ್‌ನತ್ತ ಹೆಜ್ಜೆ ಹಾಕಿದರು. ಇವೆಲ್ಲವೂ ಮುಂಬೈ ಇಂಡಿಯನ್ಸ್​ ತಂಡದಲ್ಲಿನ ಒಡಕು ಮತ್ತಷ್ಟು ಹೆಚ್ಚಾಯ್ತಾ ಎಂಬ ಪ್ರಶ್ನೆಯನ್ನೇ ಹುಟ್ಟಿಸುವುದು ಸುಳ್ಳಲ್ಲ.

publive-image

ಗುಜರಾತ್ ಪಂದ್ಯದ ವೇಳೆಯೇ ಬಯಲಾಗಿತ್ತು ಒಡಕು
ಮುಂಬೈ​ನಲ್ಲಿ ಎಲ್ಲವೂ ತಣ್ಣಗಾಗಿಲ್ಲ ಅನ್ನೋದು ಗುಜರಾತ್ ಪಂದ್ಯದ ವೇಳೆಯೇ ಬಯಲಾಗಿತ್ತು. ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯರ ಸೀರಿಯಸ್ ಟಾಕ್, ಮುಸುಕಿನ ಗುದ್ದಾಟ ನಡೀತಿದ್ಯಾ ಎಂಬ ಚರ್ಚೆಗೆ ನಾಂದಿ ಹಾಡಿತ್ತು. ಆದ್ರೀಗ ಲಕ್ನೋ ಎದುರಿನ ಪಂದ್ಯದಲ್ಲಿ ನಡೆದ ಒಂದೊಂದು ಘಟನೆಯೂ 2024ರ ಒಳ ಬೇಗುದಿ ಇನ್ನು ತಣ್ಣಗಾಗಿಲ್ಲ ಅನ್ನೋದನ್ನೇ ಸಾರಿ ಸಾರಿ ಹೇಳ್ತಿದೆ.

ಮುಂಬೈ ಇಂಡಿಯನ್ಸ್‌ ಕ್ಯಾಂಪ್​ನಲ್ಲಿ ಮತ್ತೆ ಅಸಮಾಧಾನದ ಕಿಡಿ ಕಾಣಿಸಿಕೊಂಡಿದೆ. ಇದಕ್ಕೆ ಶೀಘ್ರದಲ್ಲೇ ಬ್ರೇಕ್​ ಹಾಕಬೇಕಿದೆ. ಇಲ್ಲದಿದ್ರೆ ಈ ಅಸಮಾಧಾನ ಧಗಧಗನೇ ಉರಿದು 2024ರ ದುಸ್ಥಿತಿಯೇ ಎದುರಿಸಬೇಕಾಗುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment