/newsfirstlive-kannada/media/post_attachments/wp-content/uploads/2025/04/Tilak_Varma_KL_RAHUL.jpg)
ಅಂತು ಇಂತೂ ಮುಂಬೈ ಇಂಡಿಯನ್ಸ್​ ತಂಡ ಗೆಲುವಿನ ಟ್ರ್ಯಾಕ್​ಗೆ ಮರಳಿದೆ. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದ ಐಪಿಎಲ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಟೀಮ್ ಕೇವಲ 12 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇದರಿಂದ ಡೆಲ್ಲಿಯ ಗೆಲುವಿನ ಓಟಕ್ಕೆ ಮುಂಬೈ ಬಿಗ್ ಬ್ರೇಕ್​ ಹಾಕಿ ನಿಲ್ಲಿಸಿದೆ.
/newsfirstlive-kannada/media/post_attachments/wp-content/uploads/2025/04/KARUN_NAIR.jpg)
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು ಎದುರಾಳಿ ಮುಂಬೈ ಇಂಡಿಯನ್ಸ್ ಅನ್ನು ಬ್ಯಾಟಿಂಗ್​ ಆಹ್ವಾನ ಮಾಡಿದರು.​ ಇದರಿಂದ ಓಪನರ್ ಆಗಿ ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ, ರಯಾನ್ ರಿಕೆಲ್ಟನ್ ಆರಂಭದಲ್ಲೇ ದೊಡ್ಡ ಹೊಡೆತ ಬಿದ್ದಿತು. ವಿಫಲ ಬ್ಯಾಟಿಂಗ್ ಮುಂದುವರೆಸಿದ ರೋಹಿತ್ 18 ರನ್​ಗೆ ವಿಕೆಟ್​ ಒಪ್ಪಿಸಿದರು. ರೋಹಿತ್ ಬಳಿಕ ಸೂರ್ಯಕುಮಾರ್​ ಬ್ಯಾಟಿಂಗ್​ಗೆ ಬಂದರು.
ಇನ್ನೊಬ್ಬ ಓಪನರ್ ರಯಾನ್ ರಿಕೆಲ್ಟನ್ ಕೇವಲ 25 ಎಸೆತಗಳಲ್ಲಿ 41 ರನ್ ಚಚ್ಚಿ, ಕುಲ್​ದೀಪ್ ಸ್ಪಿನ್​ಗೆ ಬೋಲ್ಡ್​ ಆದರು. ಸೂರ್ಯಕುಮಾರ್​ 28 ಎಸೆತಗಳಲ್ಲಿ 40 ರನ್​ ಚಚ್ಚಿ, ಕುಲ್​ದೀಪ್​ಗೆ ವಿಕೆಟ್​ ಒಪ್ಪಿಸಿದರು. ಪಾಂಡ್ಯ 2 ರನ್​ನಿಂದ ವಿಫಲರಾದ್ರೆ ತಿಲಕ್ ವರ್ಮಾ 27 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್​ನಿಂದ ಅರ್ಧಶತಕ ಗಳಿಸಿದರು. ಕೊನೆಯಲ್ಲಿ ನಮನ್ ಧೀರ್ ಅತ್ಯದ್ಭುತ ಧೀರನ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 17 ಎಸೆತದಲ್ಲಿ 38 ರನ್ ಚಚ್ಚಿದರು. ಇದರಿಂದ ಮುಂಬೈ ಇಂಡಿಯನ್ಸ್​ 20 ಓವರ್​ಗಳಲ್ಲಿ 5 ವಿಕೆಟ್​ಗೆ 206 ರನ್​ಗಳ ಗುರಿ ನೀಡಿತ್ತು.
ಈ ಟಾರ್ಗೆಟ್ ಹಿಂದೆ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಓಪನರ್ಸ್​ ತಂಡದ ಖಾತೆ ತೆರೆಯುವ ಮೊದಲೇ ಮೆಕ್‌ಗುರ್ಕ್ ಡಕೌಟ್ ಆದರು. ಬಳಿಕ ಅಭಿಷೇಕ್ ಪೊರೆಲ್ ಜೊತೆ ಬ್ಯಾಟಿಂಗ್​ಗೆ ಬಂದ ಕನ್ನಡಿಗ ಕರುಣ್ ನಾಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಕೇವಲ 40 ಬಾಲ್​ಗಳನ್ನು ಎದುರಿಸಿದ ಕರುಣ್​, 12 ಬೌಂಡರಿ, 5 ಭರ್ಜರಿ ಸಿಕ್ಸರ್​ಗಳಿಂದ 89 ರನ್​ಗಳ ಗಳಿಸಿ ಆಡುವಾಗ ಸ್ಯಾಂಟ್ನರ್ ಬೌಲಿಂಗ್​​ನಲ್ಲಿ ಬೋಲ್ಡ್​ ಆದರು. ಇದರಿಂದ ಕೇವಲ 11 ರನ್​ಗಳಿಂದ ಸೆಂಚುರಿ ಮಿಸ್ ಮಾಡಿಕೊಂಡರು.
ಇದನ್ನೂ ಓದಿ: ಆರ್​ಆರ್​ಗೆ ಕಹಿ, RCBಗೆ ಸಿಹಿ.. ತವರಿನ ಸೋಲಿನ ಬೆನ್ನಲ್ಲೇ ಬೆಂಗಳೂರು ಜಯಭೇರಿ
/newsfirstlive-kannada/media/post_attachments/wp-content/uploads/2025/04/ROHIT_SHARMA_OUT.jpg)
ಕಳೆದ ಪಂದ್ಯದಲ್ಲಿ ಬೆಂಗಳೂರಲ್ಲಿ ಅಬ್ಬರಿಸಿದ್ದ ಕೆ.ಎಲ್ ರಾಹುಲ್​ ಡೆಲ್ಲಿ ಮೈದಾನದಲ್ಲಿ 15 ರನ್​ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಅಭಿಷೇಕ್ ಪೊರೆಲ್ 33, ನಾಯಕ ಅಕ್ಷರ್ 9, ಸ್ಟಬ್ಸ್ 1, ಅಶುತೋಷ್ ಶರ್ಮಾ 17 ರನ್​ ಗಳಿಸಿ ಪಂದ್ಯ ಗೆಲ್ಲಿಸುವ ಅವಕಾಶ ಕೈಚೆಲ್ಲಿದರು. ವಿಪ್ರಜ್ ನಿಗಮ್ 14 ರನ್​ಗೆ ಸ್ಟಂಪ್ ಔಟ್ ಆದರು. ಕುಲ್​ದೀಪ್, ಮೋಹಿತ್ ಶರ್ಮಾ ತಲಾ 1 ರನ್​ಗೆ ಔಟ್ ಆಗಿದ್ದರಿಂದ ಡೆಲ್ಲಿ ಕೇವಲ 193 ರನ್​ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಕೊನೆಯಲ್ಲಿ ಸರಿಯಾದ ಬ್ಯಾಟಿಂಗ್ ಮಾಡುವರು ಯಾರು ಇಲ್ಲದ ಕಾರಣ ಡೆಲ್ಲಿ ಸೋಲೋಪ್ಪಿಕೊಂಡಿತು. ಹೀಗಾಗಿ ಮುಂಬೈ ಇಂಡಿಯನ್ಸ್​ ಕೇವಲ 12 ರನ್​ಗಳಿಂದ ತನ್ನ 2ನೇ ಗೆಲುವು ಪಡೆದು ಸಂಭ್ರಮಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us