Advertisment

ಪ್ಲೇ ಆಫ್​​ ರೇಸ್​​; ಡೆಲ್ಲಿ ಟೀಮ್ ಅನ್ನು ಹೊರ ದಬ್ಬಿದ​ ಪಾಂಡೆ ಪಡೆ.. ಮುಂಬೈ ಗೆಲುವಿಗೆ ಕಾರಣ?

author-image
Bheemappa
Updated On
Qualifier- 2ರಲ್ಲಿ ಯಾರಿಗೆ ಯಾರು ಚೆಕ್​ಮೇಟ್ ಕೊಡ್ತಾರೆ..? ಫೈನಲ್ ಟಿಕೆಟ್​ಗಾಗಿ ಬಿಗ್ ಫೈಟ್​
Advertisment
  • ಮಹತ್ವದ ಪಂದ್ಯದಲ್ಲಿ ಮಂಡಿಯೂರಿದ ಡೆಲ್ಲಿ ಕ್ಯಾಪಿಟಲ್ಸ್​ ಟೀಮ್
  • ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗೆ ಯಾವ ಬ್ಯಾಟರ್ ಕಾರಣ?
  • ಕಳೆದ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದ ಕನ್ನಡಿಗ KL ರಾಹುಲ್ ಸೈಲೆಂಟ್

ಸೂರ್ಯಕುಮಾರ್​ ಅವರ ಸಿಡಿಲಬ್ಬರದ ಅರ್ಧಶತಕದಿಂದ ಐಪಿಎಲ್​​ನ ಅತಿ ಮುಖ್ಯವಾದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ಟೀಮ್ ಅಮೋಘವಾದ ಗೆಲುವು ದಾಖಲಿಸಿದೆ. ಈ ಮೂಲಕ ಡೆಲ್ಲಿಯನ್ನು ಹಿಂದಕ್ಕೆ ತಳ್ಳಿ ಹಾರ್ದಿಕ್ ಪಾಂಡೆ ನೇತೃತ್ವದ ಮುಂಬೈ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ.

Advertisment

publive-image

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಕ್ಯಾಪ್ಟನ್​ ಫಾಫ್ ಡುಪ್ಲೆಸಿಸ್​ ಟಾಸ್ ಗೆದ್ದು, ಮುಂಬೈಯನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಅಂದಿಕೊಂಡಂತೆ ಡೆಲ್ಲಿ ತಂಡ ಆರಂಭದಲ್ಲಿ ಬಿಗಿ ಪಟ್ಟು ಹಾಕಿದ್ದರಿಂದ ಮುಂಬೈ 58 ರನ್​ಗೆ ಪ್ರಮುಖವಾದ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಯಾವಾಗ ಕ್ರೀಸ್​ಗೆ ಸೂರ್ಯಕುಮಾರ್ ಆಗಮಿಸಿದರೋ ಆವಾಗ ಡೆಲ್ಲಿ ತಂಡದಿಂದ ಪಂದ್ಯ ಕೈ ತಪ್ಪಿತು ಎನ್ನಬಹುದು.

ಏಕೆಂದರೆ ಸೂರ್ಯಕುಮಾರ್ ಅವರ ಸಿಡಿಲಬ್ಬರದ ಬ್ಯಾಟಿಂಗ್​ನಿಂದ ಮುಂಬೈ ದೊಡ್ಡ ರನ್​ಗಳ ಸಂಗ್ರಹಕ್ಕೆ ಮುಂದಾಯಿತು. ಪಂದ್ಯದಲ್ಲಿ ಒಟ್ಟು 43 ಎಸೆತ ಎದುರಿಸಿದ ಸೂರ್ಯ, 7 ಬೌಂಡರಿ, 4 ಭರ್ಜರಿ ಸಿಕ್ಸರ್​ಗಳಿಂದ 73 ರನ್​ಗಳನ್ನು ಬಾರಿಸಿದರು. ಇದು ಡೆಲ್ಲಿಗೆ ಭಾರೀ ಹೊಡೆತ ಕೊಟ್ಟಿತು. ತಿಲಕ್ ವರ್ಮಾ 27 ಬಿಟ್ಟರೇ ನಮನ್ ಧೀರ್​ ಕೊನೆಯಲ್ಲಿ ಬ್ಯಾಟಿಂಗ್​ನಲ್ಲಿ ಅಬ್ಬರಿಸಿ 2 ಫೋರ್, 2 ಸಿಕ್ಸರ್​ಗಳಿಂದ 8 ಬಾಲ್​ನಲ್ಲಿ 22 ರನ್​ ಚಚ್ಚಿದರು. ಇದರಿಂದ ಮುಂಬೈ 20 ಓವರ್​ಗಳಲ್ಲಿ 5 ವಿಕೆಟ್​ಗೆ 181 ರನ್​ಗಳ ಗುರಿ ನೀಡಿತ್ತು.

ಈ ಗುರಿ ಹಿಂದೆ ಬಿದ್ದ ಡೆಲ್ಲಿ ಶಾಕ್ ಮೇಲೆ ಶಾಕ್ ಎದುರಿಸಿತು. ಏಕೆಂದರೆ 27 ರನ್​ಗಳ ಒಳಗಾಗಿ ಕ್ಯಾಪ್ಟನ್ ಫಾಫ್ (11)​, ಕೆ.ಎಲ್ ರಾಹುಲ್ (6) ಹಾಗೂ ಪೊರೆಲ್​ (6) ವಿಕೆಟ್​ ಒಪ್ಪಿಸಿ ಪೆವಿಲಿಯನ್​ಗೆ ನಡೆದರು. ಆರಂಭದಲ್ಲೇ ಡೆಲ್ಲಿ ಹಿನ್ನಡೆಗೆ ಒಳಗಾಯಿತು. ಸಮೀರ್ ರಜ್ವಿ 39 ಹಾಗೂ ವಿಪ್ರಜ್ ನಿಗಮ್ 20 ರನ್​ ಬಿಟ್ಟರೇ ಉಳಿದವರು ಯಾರು ದೊಡ್ಡ ಸಾಧನೆ ಮಾಡಲಿಲ್ಲ.

Advertisment

ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಆಕಾಶದಲ್ಲೇ ಟಾರ್ಚರ್​ ಕೊಟ್ಟ ಆಲಿಕಲ್ಲು ಮಳೆ.. 200 ಜನ ಬದುಕಿದ್ದೇ ದೊಡ್ಡದು -Video

publive-image

ಹೀಗಾಗಿ ಡೆಲ್ಲಿ 18.2 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 121 ರನ್​ ಮಾತ್ರ ಗಳಿಸಿ ಪ್ಲೇ ಆಫ್ ರೇಸ್​ನಿಂದ ಹೊರ ಬಿದ್ದಿತು. ಮುಂಬೈ ಇಂಡಿಯನ್ಸ್​ 59 ರನ್​ಗಳಿಂದ ಅದ್ಭುತ ಗೆಲುವು ಪಡೆದು 4ನೇ ತಂಡವಾಗಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿತು. ಒಂದು ಹಂತದಲ್ಲಿ ಮುಂಬೈ ಇಂಡಿಯನ್ಸ್​ಗೆ ಸೂರ್ಯಕುಮಾರ್ ಅವರ ಬ್ಯಾಟಿಂಗ್​ ಬಲವೇ ಶಕ್ತಿ ಕೊಡುವುದರ ಜೊತೆಗೆ ಗೆಲುವನ್ನು ತಂದುಕೊಟ್ಟಿತು ಎನ್ನಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment