ಪಾಂಡ್ಯಗೆ ಅದೃಷ್ಟ ಕೈ ಹಿಡಿಯಿತಾ..? LSG ವಿರುದ್ಧ ಗೆಲ್ತಿದ್ದಂತೆ ಪಾಯಿಂಟ್​ ಟೇಬಲ್​ನಲ್ಲಿ ಮುಂಬೈ ಭಾರೀ ಜಿಗಿತ

author-image
Bheemappa
Updated On
ಪಾಂಡ್ಯಗೆ ಅದೃಷ್ಟ ಕೈ ಹಿಡಿಯಿತಾ..? LSG ವಿರುದ್ಧ ಗೆಲ್ತಿದ್ದಂತೆ ಪಾಯಿಂಟ್​ ಟೇಬಲ್​ನಲ್ಲಿ ಮುಂಬೈ ಭಾರೀ ಜಿಗಿತ
Advertisment
  • ರಿಷಭ್​ ಪಂತ್​​ಗೆ ಭಾರೀ ಮುಖಭಂಗ, ಎಷ್ಟು ರನ್​ಗೆ ಔಟ್​ ಆದರು?
  • ಬಲಿಷ್ಠ ಬಾಟರ್​ಗಳಿದ್ದರೂ ರನ್​ ಚೇಸ್​ ಮಾಡುವಲ್ಲಿ ಲಕ್ನೋ ವಿಫಲ
  • ಸೂರ್ಯಕುಮಾರ್​, ರಯಾನ್​ ರಿಕೆಲ್ಟನ್​ ಆಕರ್ಷಕ ಹಾಫ್​​ಸೆಂಚುರಿ

ಮಿಚೆಲ್ ಮಾರ್ಷ್​, ಪೂರನ್​, ನಾಯಕ ರಿಷಭ್​ ಪಂತ್​​ನಂಥ ಬಲಿಷ್ಠ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ ಲಕ್ನೋ ಸೂಪರ್ ಜೈಂಟ್ಸ್ ಸೋಲೋಪ್ಪಿಕೊಂಡಿದೆ. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ 54 ರನ್​ಗಳಿಂದ ಸತತ 5ನೇ ಭರ್ಜರಿ ಗೆಲುವು ದಾಖಲಿಸಿದೆ.

publive-image

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್​ನ ಇಂದಿನ ಡಬಲ್​ ಹೆಡ್ಡರ್​ನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಮುಂಬೈ ಇಂಡಿಯನ್ಸ್​ ತವರಿನಲ್ಲಿ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಮುಂಬೈ ಪರ ಹಿಟ್​ಮ್ಯಾನ್ ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಉತ್ತಮ ಆರಂಭ ಪಡೆಯಲಿಲ್ಲ. ಆದರೆ ಮುಂಬೈ ಆಟಗಾರರು ತಮ್ಮ ನಿರೀಕ್ಷೆಯಂತೆ ಬಿಗ್​ಸ್ಕೋರ್ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದರು.

ಮುಂಬೈ ಓಪನರ್ಸ್​ ರೋಹಿತ್ ಶರ್ಮಾ 12 ರನ್​ಗೆ ಔಟ್​ ಆದ್ರೆ, ರಯಾನ್ ರಿಕೆಲ್ಟನ್ ಸ್ಫೋಟಕ 58 ರನ್​ ಚಚ್ಚಿದರು. ಪಂದ್ಯದಲ್ಲಿ ಒಟ್ಟು 32 ಬಾಲ್​ಗಳಲ್ಲಿ 6 ಬೌಂಡರಿ, 4 ಬಿಗ್​​ ಸಿಕ್ಸರ್​​ಗಳಿಂದ ರಯಾನ್ 58 ರನ್​ ಸಿಡಿಸಿ ಆಡುವಾಗ ಕ್ಯಾಚ್ ಔಟ್ ಆದರು. ವಿಲ್ ಜಾಕ್ಸ್​ 29, ಸೂರ್ಯಕುಮಾರ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಕೇವಲ 28 ಎಸೆತಗಳಲ್ಲಿ 4 ಫೋರ್, 4 ದೊಡ್ಡ ಸಿಕ್ಸರ್​ನಿಂದ 54 ರನ್​ ಬಾರಿಸಿದರು. ಕ್ಯಾಪ್ಟನ್​ ಪಾಂಡ್ಯ 5, ತಿಲಕ್ ವರ್ಮಾ 5, ಬೋಷ್ 20, ನಮನ್ ಧೀರ್​ ಅಜೇಯ 25 ರನ್​ಗಳಿಂದ ಮುಂಬೈ 7 ವಿಕೆಟ್​ಗೆ 216 ರನ್​ಗಳ ಗುರಿಯನ್ನು ನೀಡಿತ್ತು.

ಈ ಟಾರ್ಗೆಟ್ ಹಿಂದೆ ಬಿದ್ದ ಲಕ್ನೋ ಬಹು ಬೇಗನೇ ಸೋಲೋಪ್ಪಿಕೊಂಡಿತು. ಓಪನರ್​ಗಳಾದ ಮಿಚೆಲ್ ಮಾರ್ಷ್​ 34, ಮಾರ್ಕಾಮ್ 9 ರನ್​ಗೆ ವಿಕೆಟ್​ ಒಪ್ಪಿಸಿ ನಡೆದರು. ಬಳಿಕ ಬಂದ ಪೂರನ್ ಕೂಡ 27 ರನ್​ಗೆ ಆಟ ಮುಗಿಸಿದರು. ನಂತರ ಬ್ಯಾಟಿಂಗ್​ಗೆ ಬಂದ ನಾಯಕ ರಿಷಭ್ ಪಂತ್​ ಕೇವಲ 4 ರನ್​ಗೆ ಔಟ್​ ಆಗಿ ಮತ್ತೊಮ್ಮೆ ಭಾರೀ ಮುಖಭಂಗಕ್ಕೆ ಒಳಗಾದರು. ಆಯುಷ್ ಬದೋನಿ 35 ಹಾಗೂ ಡೇವಿಡ್​ ಮಿಲ್ಲರ್​ 24 ಕೆಲ ಹೊತ್ತು ಮುಂಬೈ ಬೌಲರ್​ಗಳನ್ನು ಕಾಡಿದರೂ ನಂತರ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ದಾರಿ ಹಿಡಿದರು.

ಇದನ್ನೂ ಓದಿ: ಕನ್ನಡಿಗ KL ರಾಹುಲ್​ ನೋಡಿ ಆರ್​ಸಿಬಿ ಸ್ಟಾರ್​ ಕಿಂಗ್​​​ ಕೊಹ್ಲಿ ಡ್ಯಾನ್ಸ್​.. ಪಂದ್ಯಕ್ಕೂ ಮೊದಲೇ ಹೀಗೆ ಮಾಡಿದ್ದೇಕೆ? -Video

publive-image

ಇನ್ನು ಇವರ ನಂತರ ಬಂದ ಯಾವ ಬ್ಯಾಟ್ಸ್​ಮನ್​ ಕೂಡ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ಮಾಡಲಿಲ್ಲ. ಮುಂಬೈ ಬೌಲರ್​ಗಳ ದಾಳಿಗೆ ಹಾಗೇ ಬಂದು ಹೀಗೆ ಹೋಗುತ್ತಿದ್ದರು. ಇದರಿಂದ ಲಕ್ನೋ ತಂಡ 20 ಓವರ್​​ಗಳಲ್ಲಿ 10 ವಿಕೆಟ್​ಗೆ 161 ರನ್​ ಮಾತ್ರ ಗಳಿಸಲು ಶಕ್ತವಾಗಿ ಮತ್ತೊಂದು ಸೋಲು ಕಂಡಿತು. ಸದ್ಯ 10 ಪಂದ್ಯ ಆಡಿರುವ ಮುಂಬೈ ತಂಡ 6 ಪಂದ್ಯಗಳನ್ನು ಗೆದ್ದು 12 ಅಂಕಗಳಿಂದ ಪಾಯಿಂಟ್​ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಅಲಂಕರಿಸಿದೆ. ವಿಶೇಷ ಎಂದರೆ ಸತತ 5 ಪಂದ್ಯಗಳಿಂದ ಮುಂಬೈ ಸೋಲನ್ನೇ ನೋಡಿಲ್ಲ. ಇದು ಪಾಂಡ್ಯ ಗೆಲುವಿನ ನಗೆಗೆ ಕಾರಣವಾಗಿದೆ. ಇನ್ನು ಲಕ್ನೋ 6ನೇ ಸ್ಥಾನಕ್ಕೆ ಕುಸಿದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment