2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್
ವರ್ಷದ ಕೊನೆಗೆ 2025ರ ಐಪಿಎಲ್ ಮೆಗಾ ಆಕ್ಷನ್!
ಮುಂಬೈ ಇಂಡಿಯನ್ಸ್ ಮುಂದಿನ ಕ್ಯಾಪ್ಟನ್ ಯಾರು?
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಈ ವರ್ಷದ ಕೊನೆಗೆ 2025ರ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳಿಗೂ ಕ್ಯಾಪ್ಟನ್ ಸೇರಿ ನಾಲ್ವರು ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಳ್ಳುವ ಅವಕಾಶ ಇದೆ. ಹಾಗಾಗಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ನಲ್ಲೇ ಇರ್ತಾರಾ ಇಲ್ಲವೋ? ಅನ್ನೋ ಚರ್ಚೆ ಜೋರಾಗಿದೆ.
ಇನ್ನು, ಈ ಬಗ್ಗೆ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಮೊಹಮ್ಮದ್ ಶಮಿ ಮಾತಾಡಿದ್ದಾರೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ನಲ್ಲಿ ಮುಂದಿನ ಸೀಸನ್ಗೆ ಇರ್ತಾರಾ? ಎಂಬ ಪ್ರಶ್ನೆಗೆ ಶಮಿ ಉತ್ತರ ಹೀಗಿತ್ತು. ಅದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನಿರ್ಧಾರ ಎಂದು ಉತ್ತರ ಕೊಟ್ಟರು.
ಕಳೆದ ಸಲ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಿದ್ರು. ಈ ಸಲ ಕೂಡ ಹಾರ್ದಿಕ್ ಅವರೇ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಅವರನ್ನು ಉಳಿಸಿಕೊಳ್ಳಬೇಕಾ? ಬೇಡವೇ? ಅನ್ನೋದು ಫ್ರಾಂಚೈಸಿ ನಿರ್ಧಾರ. ಫ್ರಾಂಚೈಸಿಗಳು ಆಟಗಾರರ ಫ್ಯಾನ್ ಬೇಸ್ ನೋಡುತ್ತವೆ. ಯಾವಾಗಲೂ ಆಟಗಾರನ ಬಗ್ಗೆ ಯೋಚನೆ ಮಾಡುತ್ತವೆ. ಮುಂಬೈ ಇಂಡಿಯನ್ಸ್ ಮೈನ್ ಬೇಸ್ ರೋಹಿತ್ ಶರ್ಮಾ ಫ್ಯಾನ್ಸ್. ಹಾಗಾಗಿ ರೋಹಿತ್ ಮತ್ತೆ ಮುಂಬೈ ಕ್ಯಾಪ್ಟನ್ ಆಗಬಹುದು ಎಂದರು.
ಏನಿದು ವಿವಾದ..?
ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಕಪ್ ಗೆದ್ದಿದೆ. ಈ ಮುಂಬೈ ಇಂಡಿಯನ್ಸ್ಗೆ ಹೊಸ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ. ಒಂದು ಸೀಸನ್ನಲ್ಲಿ ಕಪ್ ಗೆಲ್ಲಿಸಿ, ಮತ್ತೊಂದು ಸೀಸನ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಫೈನಲ್ಗೆ ಕರೆದೊಯ್ದಿದ್ದಕ್ಕೆ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ಗೆ ಕರೆಸಿ ಕ್ಯಾಪ್ಟನ್ಸಿ ನೀಡಲಾಯ್ತು. ಹಾರ್ದಿಕ್ ಪಾಂಡ್ಯಗಾಗಿ ರೋಹಿತ್ಗೆ ಕ್ಯಾಪ್ಟನ್ಸಿಯಿಂದ ಕೊಕ್ ಕೊಡಲಾಗಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ