/newsfirstlive-kannada/media/post_attachments/wp-content/uploads/2025/04/PANDYA-1.jpg)
ಬೆಟ್ಟದಂತಹ ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಆರಂಭದಲ್ಲಿ ಎಡವಿತು. ಮಿಡಲ್ ಓವರ್ಗಳಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಕಮ್ಬ್ಯಾಕ್ ಮಾಡ್ತು. ಮುಂಬೈನ ಕಮ್ಬ್ಯಾಕ್ ಪಂದ್ಯಕ್ಕೆ ರಣ ರೋಚಕ ಟ್ವಿಸ್ಟ್ ನೀಡ್ತು.
ಬಿಗ್ ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್ಗೆ ಆರಂಭದಲ್ಲೇ ಯಶ್ ದಯಾಳ್ ಆಘಾತ ನೀಡಿದ್ರು. ಅಬ್ಬರದ ಆಟವಾಡೋ ಸೂಚನೆ ನೀಡಿದ ರೋಹಿತ್ ಶರ್ಮಾ, ಯಶ್ ದಯಾಳ್ ಕರಾರುವಕ್ ಎಸೆತಕ್ಕೆ ಕಕ್ಕಾಬಿಕ್ಕಿಯಾದ್ರು. 17 ರನ್ಗಳಿಸಿದ್ದ ಹಿಟ್ಮ್ಯಾನ್ ಕ್ಲೀನ್ಬೋಲ್ಡ್ ಆಗಿ ನಿರ್ಗಮಿಸಿದ್ರು.
ಇದನ್ನೂ ಓದಿ: ಅವರೇ ನಮ್ಮ ಹೀರೋ.. ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ರಜತ್ ಪಾಟೀದಾರ್..?
ಇನ್ನೋರ್ವ ಓಪನರ್ ರಿಯಾನ್ ರಿಕಲ್ಟನ್, ರೋಹಿತ್ ಹಿಂದೆ ಡಗೌಟ್ ಸೇರಿದ್ರು. 4 ಬೌಂಡರಿ ಸಿಡಿಸಿ ಮಿಂಚಿದ್ದ ರಿಕಲ್ಟನ್ ಹೇಜಲ್ವುಡ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲ್ ಜಾಕ್ಸ್ ಆಟವೂ ನಡೆಯಲಿಲ್ಲ. 18 ಎಸೆತಗಳನ್ನ ಎದುರಿಸಿದ ವಿಲ್ ಜಾಕ್ಸ್ 22 ರನ್ಗಳಿಗೆ ಸೀಮಿತವಾದ್ರು. ಕೃನಾಲ್ ಪಾಂಡ್ಯ ಬೌಲಿಂಗ್ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು.
ಮಿಸ್ಟರ್ 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ಗೆ 2 ಜೀವದಾನ ಸಿಗ್ತು. ಕ್ಯಾಚ್ ಡ್ರಾಪ್ ಲಾಭ ಪಡೆದ ಸೂರ್ಯ 5 ಬೌಂಡರಿ ಬಾರಿಸಿದ್ರು. ಬಿಗ್ ಇನ್ನಿಂಗ್ಸ್ ಕಟ್ಟೋಕೆ ಯಶ್ ದಯಾಳ್ ಅವಕಾಶ ನೀಡಲಿಲ್ಲ. ಲಿವಿಂಗ್ಸ್ಟೋನ್ ಹಿಡಿದ ಅದ್ಭುತ ಕ್ಯಾಚ್ಗೆ ಸೂರ್ಯಕುಮಾರ್ ಔಟಾದರು.
ಇದನ್ನೂ ಓದಿ: W W Wd 1 4 W 0! ಕೊನೆಯ ಓವರ್ನ ರೋಚಕತೆ ಹೇಗಿತ್ತು? ಕೃನಾಲ್ ಬಗ್ಗೆ ಪಾಟೀದಾರ್ ಏನಂದ್ರು..?
ಬಳಿಕ ಕ್ರಿಸ್ನಲ್ಲಿ ಜೊತೆಯಾದ ತಿಲಕ್ ವರ್ಮಾ-ಹಾರ್ದಿಕ್ ಪಾಂಡ್ಯ ಆರ್ಸಿಬಿ ಪಾಳೆಯದಲ್ಲಿ ಆತಂಕ ಹುಟ್ಟು ಹಾಕಿದ್ರು. ಬೌಂಡರಿ-ಸಿಕ್ಸರ್ಗಳಲ್ಲೇ ರನ್ಡೀಲ್ ಮಾಡಿದ ಈ ಜೋಡಿ 34 ಎಸೆತಗಳಲ್ಲಿ 89 ರನ್ಗಳ ಜೊತೆಯಾಟವಾಡಿದ್ರು. ಪಂದ್ಯಕ್ಕೂ ರಣರೋಚಕ ಟ್ವಿಸ್ಟ್ ನೀಡಿದ್ರು.
ಅಬ್ಬರದ ಆಟವಾಡಿದ ತಿಲಕ್ ವರ್ಮಾ 4 ಬೌಂಡರಿ, 4 ಸಿಕ್ಸರ್ ಸಿಡಿಸಿದ್ರು. 29 ಎಸೆತಗಳಲ್ಲೇ 56 ರನ್ಗಳ ಬಿಗ್ ಇನ್ನಿಂಗ್ಸ್ ಕಟ್ಟಿದ್ರು. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅಗ್ರೆಸ್ಸಿವ್ ಆಟವಾಡಿದ್ರು. 280ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ 3 ಬೌಂಡರಿ, 4 ಸಿಕ್ಸರ್ ಸಿಡಿಸಿದ್ರು. ಜಸ್ಟ್ 15 ಎಸೆತಗಳಲ್ಲೇ 42 ರನ್ ಸಿಡಿಸಿದ್ರು. ಬೌಲಿಂಗ್ನಲ್ಲೂ ಅದ್ಭುತವಾಗಿ ಸ್ಪೆಲ್ ಮಾಡಿರುವ ಪಾಂಡ್ಯ, ಎರಡು ವಿಕೆಟ್ ಕಿತ್ತರು.
ಹಾರ್ದಿಕ್-ತಿಲಕ್ ಸ್ಫೋಟಕ ಆಟ ಮುಂಬೈ ಪಾಳಯದಲ್ಲಿ ಗೆಲುವಿನ ಕನಸು ಚಿಗುರಿಸಿತ್ತು. 18ನೇ ಓವರ್ನಲ್ಲಿ ತಿಲಕ್ ವರ್ಮಾ ವಿಕೆಟ್ ಉರುಳಿಸಿದ ಭುವನೇಶ್ವರ್ ಮೊದಲ ಶಾಕ್ ಕೊಟ್ರು. 19ನೇ ಓವರ್ನಲ್ಲಿ ಪಾಂಡ್ಯಗೆ ಜೋಶ್ ಹೇಜಲ್ವುಡ್ ಗೇಟ್ಪಾಸ್ ನೀಡಿದ್ರು.
ಕೊನೆಯ ಓವರ್ನಲ್ಲಿ 19 ರನ್ ಡಿಫೆಂಡ್ ಮಾಡಿಕೊಳ್ಳೋ ಟಾಸ್ಕ್ನೊಂದಿಗೆ ಬೌಲಿಂಗ್ಗೆ ಬಂದ ಕೃನಾಲ್ ಪಾಂಡ್ಯ ಸ್ಪಿನ್ ಮ್ಯಾಜಿಕ್ ಮಾಡಿದ್ರು. 3 ವಿಕೆಟ್ ಉರುಳಿಸಿ ಮುಂಬೈಗೆ ಶಾಕ್ ನೀಡಿದ್ರು. 9 ವಿಕೆಟ್ ಕಳೆದುಕೊಂಡ ಮುಂಬೈ 20 ಓವರ್ ಅಂತ್ಯಕ್ಕೆ 209 ರನ್ಗಳಿಸಿತು. 12 ರನ್ಗಳ ರೋಚಕ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಗೆದ್ದ ಸಾಧನೆ ಮಾಡಿತು.
ಇದನ್ನೂ ಓದಿ: ಸೋನು ಗೌಡ ಸೇರಿ 100ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಸ್ಟಾರ್ಗಳ ಬೆಂಡೆತ್ತಿದ ಪೊಲೀಸರು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್