Advertisment

ಆರ್​​ಸಿಬಿಗೆ ಗುಡ್​ನ್ಯೂಸ್​​.. ಕ್ಯಾಪ್ಟನ್​ ಫಾಫ್​​​ ಸ್ಥಾನ ತುಂಬಲಿದ್ದಾರೆ ಈ ಸ್ಟಾರ್​​ ಆಟಗಾರ!

author-image
Ganesh Nachikethu
Updated On
ಆರ್​​ಸಿಬಿಗೆ ಗುಡ್​ನ್ಯೂಸ್​​.. ಕ್ಯಾಪ್ಟನ್​ ಫಾಫ್​​​ ಸ್ಥಾನ ತುಂಬಲಿದ್ದಾರೆ ಈ ಸ್ಟಾರ್​​ ಆಟಗಾರ!
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಟೂರ್ನಿ!
  • ಆಕ್ಷನ್​ಗೆ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಭರ್ಜರಿ ತಯಾರಿ
  • ಆರ್​​ಸಿಬಿ ಕ್ಯಾಪ್ಟನ್​​​ ಫಾಫ್​ ಸ್ಥಾನ ತುಂಬಲಿದ್ದಾರೆ ಈ ಸ್ಟಾರ್​ ಆಲ್​ರೌಂಡರ್​​​

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಈಗಿನಿಂದಲೇ ಮಾಲೀಕರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಯಾರನ್ನು ತಂಡದಿಂದ ಕೈ ಬಿಡಬೇಕು? ಯಾರನ್ನು ರಿಲೀಸ್​ ಮಾಡಬೇಕು? ಅನ್ನೋ ಚರ್ಚೆಗಳು ನಡೆಯುತ್ತಿವೆ. ಆರ್‌ಸಿಬಿ ಕೂಡ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬ ಕುತೂಹಲ ಫ್ಯಾನ್ಸ್​ಗೆ ಇದೆ.

Advertisment

ಐಪಿಎಲ್​​ 18ನೇ ಸೀಸನ್​ಗೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಗೆ ಮುನ್ನ ಮಾಲೀಕರು ರೀಟೈನ್​ ಮತ್ತು ರಿಲೀಸ್​ ಲಿಸ್ಟ್​​ ರೆಡಿ ಮಾಡಿ ಬಿಸಿಸಿಐಗೆ ಸಲ್ಲಿಸಬೇಕಿದೆ. ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಸೂರ್ಯಕುಮಾರ್‌ ಯಾದವ್, ಫಾಫ್‌ ಡುಪ್ಲೆಸಿಸ್‌, ರಿಷಭ್‌ ಪಂತ್​ ಸೇರಿ ಹಲವರನ್ನು ಐಪಿಎಲ್​ ತಂಡಗಳು ಬಿಡುವ ಸಾಧ್ಯತೆ ಇದೆ. ಆದರೆ, ಈ ಆಟಗಾರರ ಅಂತಿಮ ಪಟ್ಟಿ ಇನ್ನೂ ದೃಢವಾಗಿಲ್ಲ. ಇತ್ತೀಚಿನ ವರದಿಗಳ ಪ್ರಕಾರ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಬಿಡುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿ ಬಂದಿದೆ.

publive-image

ಹಾರ್ದಿಕ್​ ಪಾಂಡ್ಯಗೆ ಕೊಕ್​​!

ಕಳೆದ ಆವೃತ್ತಿಯ ಹರಾಜಿನ ವೇಳೆ ಗುಜರಾತ್‌ ಟೈಟನ್ಸ್‌ನಿಂದ ಮುಂಬೈ ಇಂಡಿಯನ್ಸ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಟ್ರೇಡ್‌ ಮಾಡಿಕೊಂಡಿತ್ತು. ಆದರೆ, ಹಾರ್ದಿಕ್‌ ಅವರ ಪ್ರತಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಿಲ್ಲ ಎನ್ನಲಾಗುತ್ತಿದೆ. ಈ ಕಾರಣದಿಂದಾಗಿ, ತಂಡದ ನಿರ್ವಹಣಾ ಮಂಡಳಿ ಅವರ ಬಗ್ಗೆ ಅಸಮಾಧಾನ ಹೊಂದಿದೆ. ಮುಂಬೈ ಮುಂದಿನ ಆವೃತ್ತಿಗೆ ತನ್ನ ನಾಯಕನನ್ನು ಬದಲಾಯಿಸುವ ನಿರೀಕ್ಷೆಯಲ್ಲಿದೆ.

ಇನ್ನೊಂದೆಡೆ ಆರ್‌ಸಿಬಿ ತಂಡದ ನಾಯಕ ಫಾಫ್‌ ಡುಪ್ಲೇಸಿಸ್‌ ಅವರನ್ನು ಬಿಡುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಆರ್‌ಸಿಬಿ ತನ್ನ ಭವಿಷ್ಯದ ತಂಡವನ್ನು ಕಟ್ಟುವ ಉದ್ದೇಶದಿಂದ ಹೊಸ ನಾಯಕನ ಹುಡುಕಾಟದಲ್ಲಿದೆ. ಮುಂಬೈ ಇಂಡಿಯನ್ಸ್‌ ಹಾರ್ದಿಕ್ ಪಾಂಡ್ಯ ಅವರನ್ನು ಬಿಟ್ಟರೆ ಆರ್‌ಸಿಬಿ ಖರೀದಿ ಮಾಡಲಿದೆ.

Advertisment

ಇದನ್ನೂ ಓದಿ:ಸ್ಟಾರ್​ ಬ್ಯಾಟರ್​​ ಶ್ರೇಯಸ್​​ ಅಯ್ಯರ್​ಗೆ ಡಬಲ್​ ಆಘಾತ.. ಗೌತಮ್​ ಗಂಭೀರ್​ ಕಠಿಣ ನಿರ್ಧಾರ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment