newsfirstkannada.com

ಸತತ 2 ಸೋಲಿನ ಬಳಿಕ ಮುಂಬೈ ಇಂಡಿಯನ್ಸ್​ ಭರ್ಜರಿ ವರ್ಕೌಟ್​​​.. ಕ್ರಿಕೆಟ್​ನ ಟಾಪ್​-3 ಸ್ಟೋರಿಸ್ ಇಲ್ಲಿವೆ!

Share :

Published March 31, 2024 at 3:06pm

    ನ್ಯೂಜಿಲೆಂಡ್​ನ​ ಶರವೇಗಿ ಮ್ಯಾಟ್ ಹೆನ್ರಿಗೆ ಹೊಡೆದ ಜಾಕ್​ಪಾಟ್​

    ನಾಳೆ ರಾಜಸ್ಥಾನ ರಾಯಲ್ಸ್ ವಿರುದ್ಧ ಆಖಾಡಕ್ಕೆ ಇಳಿಯುವ ಮುಂಬೈ

    ವಿಲ್ಲೆ ವೈಯಕ್ತಿಕ ಕಾರಣದಿಂದ ಲಕ್ನೋ ಸೂಪರ್​ ಜೈಂಟ್ಸ್​​ನಿಂದ​ ದೂರ

ಸತತ ಎರಡು ಸೋಲಿನಿಂದ ಕಂಗೆಟ್ಟಿರೋ ಮುಂಬೈ ಇಂಡಿಯನ್ಸ್​ ತಂಡ ಲಯಕ್ಕೆ ಮರಳಲು ಎದುರು ನೋಡ್ತಿದೆ. ಅದಕ್ಕಾಗಿ ಜಿಮ್​ನಲ್ಲಿ ಕಠಿಣ ವರ್ಕೌಟ್​ ನಡೆಸಿದೆ. ಟಿಮ್ ಡೇವಿಡ್​​, ಇಶಾಕ್ ಕಿಶನ್​​, ಕ್ಯಾಪ್ಟನ್ ಹಾರ್ದಿಕ್​ ಪಾಂಡ್ಯ, ತಿಲಕ್ ವರ್ಮಾ, ಅರ್ಜುನ್ ತೆಂಡುಲ್ಕರ್​​​ ಹಾಗೂ ನಮನ್​ ವಿವಿಧ ಬಗೆಯ ದೈಹಿಕ ಕಸರತ್ತ ನಡೆಸಿದ್ದಾರೆ. ಮುಂಬೈ ಇಂಡಿಯನ್ಸ್​ ತಂಡ ಐಪಿಎಲ್​​ ದಂಗಲ್​ನಲ್ಲಿ ನಾಳೆ ರಾಜಸ್ಥಾನ ರಾಯಲ್ಸ್ ವಿರುದ್ಧ ಆಖಾಡಕ್ಕೆ ಇಳಿಯಲಿದೆ.

ಕೆಟ್ಟ DRS ತೆಗೆದುಕೊಂಡ ಬಾಂಗ್ಲಾದೇಶ

ಬಾಂಗ್ಲಾದೇಶ ತಂಡ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕೆಟ್ಟ ಡಿಆರ್​ಎಸ್​​ ನಿರ್ಧಾರ ತೆಗೆದುಕೊಂಡಿದೆ. ಶ್ರೀಲಂಕಾ ಎದುರಿನ 2ನೇ ಟೆಸ್ಟ್​​ನಲ್ಲಿ ಬಾಂಗ್ಲಾ ಕಳಪೆ ಡಿಆರ್​ಸಿ ತೆಗೆದುಕೊಂಡಿದೆ. ಸ್ಪಿನ್ನರ್ ತೈಜುಲ್​​​​ ಬೌಲಿಂಗ್​ನಲ್ಲಿ ಚೆಂಡು ಕುಶಲ್​​​​​​​ ಮೆಂಡೀಸ್​ ಬ್ಯಾಟಿಂಗ್​ಗೆ ಕ್ಲಿಯರ್ ಆಗಿ ತಾಗಿತ್ತು. ಇಷ್ಟಾದ್ರು ಕೆಲ ಸಮಯದ ಬಳಿಕ ಬಾಂಗ್ಲಾ ಕ್ಯಾಪ್ಟನ್​​ ನಜ್ಮುಲ್​ ಶಾಂಟೋ ಡಿಆರ್​ಎಸ್​​ಗೆ ಮೊರೆ ಹೋದರು. ಅಲ್ಟ್ರಎಡ್ಜ್​​​ನಲ್ಲಿ ಬಾಲ್​​​ ಬ್ಯಾಟಿಂಗ್​​​​ಗೆ ಟಚ್​ ಆಗಿದ್ದು ಸ್ಪಷ್ಟವಾಗಿ ಗೋಚರಿಸಿದೆ. ಬಾಂಗ್ಲಾ ನಿರ್ಧಾರವನ್ನ ನೆಟ್ಟಿಗರು ಕೆಟ್ಟ ಡಿಆರ್​ಎಸ್​​ ಎಂದು ಕಾಮೆಂಟ್ ಮಾಡಿದ್ದಾರೆ.

ಲಕ್ನೋ ಸೇರಿಕೊಂಡ ಶರವೇಗಿ ಮ್ಯಾಟ್ ಹೆನ್ರಿ

ನ್ಯೂಜಿಲೆಂಡ್​ ತಂಡದ ಶರವೇಗಿ ಮ್ಯಾಟ್ ಹೆನ್ರಿಗೆ ಜಾಕ್​ಪಾಟ್​ ಹೊಡೆದಿದೆ. ಡೇವಿಡ್ ವಿಲ್ಲೆ ಬದಲಿಗೆ ಮ್ಯಾಟ್​ ಹೆನ್ರಿ ಲಕ್ನೋ ಸೂಪರ್​ ಜೈಂಟ್ಸ್​ ತಂಡವನ್ನ ಸೇರಿಕೊಂಡಿದ್ದಾರೆ. ಇಂಗ್ಲೆಂಡ್​​ನ ಡೇವಿಡ್ ವಿಲ್ಲೆ ವೈಯಕ್ತಿಕ ಕಾರಣದಿಂದ ಐಪಿಎಲ್​​ ತೊರೆದಿದ್ದಾರೆ. ಲಕ್ನೋ ಸೂಪರ್​ ಜೈಂಟ್ಸ್​​ ಫ್ರಾಂಚೈಸಿ ಮ್ಯಾಟ್​​​ ಹೆನ್ರಿ ಅವರಿಗೆ 1.25 ಕೋಟಿ ರೂಪಾಯಿ ನೀಡಿದೆ. ಕಿವೀಸ್ ವೇಗಿ ಆಗಮನದಿಂದ ಲಕ್ನೋ ಬೌಲಿಂಗ್ ವಿಭಾಗದ ಮತ್ತಷ್ಟು ಬಲಿಷ್ಠವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸತತ 2 ಸೋಲಿನ ಬಳಿಕ ಮುಂಬೈ ಇಂಡಿಯನ್ಸ್​ ಭರ್ಜರಿ ವರ್ಕೌಟ್​​​.. ಕ್ರಿಕೆಟ್​ನ ಟಾಪ್​-3 ಸ್ಟೋರಿಸ್ ಇಲ್ಲಿವೆ!

https://newsfirstlive.com/wp-content/uploads/2024/03/ROHIT-2-1.jpg

Load More