/newsfirstlive-kannada/media/post_attachments/wp-content/uploads/2024/11/ROHIT_DEEPAK.jpg)
ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ 2ನೇ ದಿನವು ರೋಮಾಂಚಕ ಬಿಡ್ಡಿಂಗ್ ವಾರ್ ನಡೆದಿದೆ. ಈವೆಂಟ್‌ನಲ್ಲಿ ಬಲಗೈ ವೇಗಿ ದೀಪಕ್ ಚಹರ್ ಅವರು ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ. ಆಕ್ಷನ್ ವೇಳೆ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಐಪಿಎಲ್‌ನಲ್ಲಿ ಅಗ್ರ ವೇಗಿಗಳಲ್ಲಿ ಒಬ್ಬರಾಗಿರುವ ದೀಪಕ್ ಚಹರ್ ಅವರು ಉತ್ತಮವಾದ ಹಣವನ್ನೇ ಪಡೆದುಕೊಂಡಿದ್ದಾರೆ.
ದೀಪಕ್ ಚಹರ್ ಅವರು 2 ಕೋಟಿ ಮೂಲ ಬೆಲೆಯೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದರು. ವೇಗದ ಬೌಲರ್ಗಾಗಿ ಪೈಪೋಟಿಗೆ ಬಿದ್ದ ಮುಂಬೈ ಇಂಡಿಯ್ಸ್ ಟೀಮ್ 9.25 ಕೋಟಿ ರೂಪಾಯಿ ನೀಡಿ ಕೊಂಡುಕೊಂಡಿದೆ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್‌ನ ಪ್ರಮುಖ ವೇಗದ ಬೌಲರ್ಗಳಲ್ಲಿ ಒಬ್ಬರಾಗಿದ್ದ ದೀಪಕ್ ಚಹರ್ ಸದ್ಯ ಮುಂಬೈ ಕ್ಯಾಂಪ್ ಅನ್ನು ಸೇರ್ಪಡೆಗೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ಜೊತೆಗೆ ಜಿದ್ದಿಗೆ ಬಿದ್ದು ಮುಂಬೈ ಇಂಡಿಯನ್ಸ್ ಖರೀದಿ ಮಾಡಿದೆ.
ಇದನ್ನೂ ಓದಿ:IPL Auction; ಓರ್ವ ಕನ್ನಡಿಗ, ಮಹಾರಾಷ್ಟ್ರದ ಈ ಪ್ಲೇಯರ್ ಅನ್ಸೋಲ್ಡ್
ಚಹರ್‌ಗಾಗಿ ಬಿಡ್ಡಿಂಗ್ ಜೋರಾಗಿ ನಡೆದಿತ್ತು. ಪಂಜಾಬ್ ಕಿಂಗ್ಸ್ ಆರಂಭದಲ್ಲಿ ಆಸಕ್ತಿ ತೋರಿಸಿ 8 ಕೋಟಿ ರೂ.ವರೆಗೆ ಹರಾಜು ಕೂಗಿತು. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಕೆಲವು ಸಲ ಬಿಡ್ ಮಾಡಿತು. ಆದರೆ ಅಂತಿಮವಾಗಿ ಮುಂಬೈ ಇಂಡಿಯನ್ಸ್‌ಗೆ ಹರಾಜಿನಲ್ಲಿ ಗೆಲುವು ಪಡೆಯಿತು. ಒಟ್ಟು ₹9.25 ಕೋಟಿ ನೀಡಿ ದೀಪಕ್ ಚಹರ್ ಅವರನ್ನು ಖರೀದಿ ಮಾಡಿತು. ಚೆನ್ನೈನಲ್ಲಿ ಇರುವಾಗ ಧೋನಿಯ ನೆಚ್ಚಿನ ಬೌಲರ್ಗಳಲ್ಲಿ ದೀಪಕ್ ಚಹರ್ ಕೂಡ ಒಬ್ಬರಾಗಿದ್ದರು.
ದೀಪಕ್ ಚಹರ್ ಅವರು ಐಪಿಎಲ್‌ನಲ್ಲಿ ಒಟ್ಟು 81 ಪಂದ್ಯಗಳನ್ನು ಆಡಿದ್ದು 77 ವಿಕೆಟ್‌ಗಳನ್ನ ಉರುಳಿಸಿದ್ದಾರೆ. ಕಳೆದ ಬಾರಿ ಚೆನ್ನೈ ಟೀಮ್ನಲ್ಲಿ ಗಾಯದ ನಡುವೆಯೂ ಉತ್ತಮವಾದ ಪ್ರದರ್ಶನ ನೀಡಿದ್ದರು. ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯ ದೀಪಕ್ ಚಹರ್ಗಿದೆ. ವಿಶೇಷವಾಗಿ ಪವರ್ ಪ್ಲೇನಲ್ಲಿ ದೀಪಕ್ ಚಹರ್ ತಂಡಕ್ಕೆ ಉತ್ತಮವಾದ ಕೊಡುಗೆ ನೀಡಬಲ್ಲರು. ರಾಜಸ್ಥಾನ ರಾಯಲ್ಸ್ನಲ್ಲಿಯು ದೀಪಕ್ ಬೌಲ್ ಮಾಡಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ