ದೆಹಲಿ ಕ್ಯಾಪಿಟಲ್ಸ್ ಮಣ್ಣು ಮುಕ್ಕಿಸಿದ ಮುಂಬೈ.. 2ನೇ ಬಾರಿಗೆ IPL ಕಪ್​ಗೆ ಮುತ್ತಿಟ್ಟ ಮುಂಬೈ ಮಹಿಳಾ ಟೀಮ್

author-image
Gopal Kulkarni
Updated On
ದೆಹಲಿ ಕ್ಯಾಪಿಟಲ್ಸ್ ಮಣ್ಣು ಮುಕ್ಕಿಸಿದ ಮುಂಬೈ.. 2ನೇ ಬಾರಿಗೆ IPL ಕಪ್​ಗೆ ಮುತ್ತಿಟ್ಟ ಮುಂಬೈ ಮಹಿಳಾ ಟೀಮ್
Advertisment
  • ಮುಂಬೈ ಇಂಡಿಯನ್ಸ್ ವಿರುದ್ಧ ಕುಸಿದು ಬಿದ್ದ ದೆಹಲಿ ಮಹಿಳೆಯರು
  • ಬೃಹತ್ ಮೊತ್ತವನ್ನು ಬೆನ್ನಟ್ಟಿ ಗೆಲ್ಲಲಾಗದೇ ಸೋತ ಶರಣಾದ ದೆಹಲಿ!
  • ಆರಂಭದಲ್ಲಿಯೇ ದೆಹಲಿ ನಾರಿಯರನ್ನು ಕಟ್ಟಿ ಹಾಕಿದ ಮುಂಬೈ ತಂಡ

ಮಹಿಳಾ ಪ್ರೀಮಿಯರ್ ಲೀಗ್ (WPL) ಫೈನಲ್ ಪಂದ್ಯ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ (Brabourne Stadium) ಇಂದು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದು ಮುಖಾಮುಖಿ ಆದವು

ಸಂಜೆ 7:30 ಕ್ಕೆ ಆರಂಭವಾದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್​ ತಂಡ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ತನ್ನ ಆಯ್ಕೆ ಸರಿಯಾಗಿಯೇ ಇದೆ ಎನ್ನುವ ರೀತಿಯಲ್ಲಿ ಬೌಲಿಂಗ್ ಮಾಡಿದ ದೆಹಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್​ ಆರಂಭಿಕ ಆಟಗಾರ್ತಿಯರಾದ ಯಸ್ತಿಕಾ ಭಾಟಿಯಾ ಹಾಗೂ ಹ್ಯಾಲೆ ಮ್ಯಾಥೀವ್ಸ್​ರನ್ನು ಬೇಗ ಪೆವಿಲಿಯನ್​ಗೆ ಕಳುಹಿಸುವಲ್ಲಿ ಯಶಸ್ವಿಯಾದ್ರು. 8 ರನ್ ಗಳಿಸಿದ ಯಸಿಕಾ ಮಾರಿಜಾನೆ ಕಪ್​ಗೆ ವಿಕೆಟ್ ನೀಡುವ ಮೂಲಕ ಪೆವಿಲಿಯನ್​ಗೆ ತೆರಳಿದರೆ ಮ್ಯಾಥಿವ್ಸ್​, ಕೇವಲ ಮೂರು ರನ್ ಗಳಿಸಿ ಔಟಾದರು.

ನಂತರ ಜೊತೆಯಾದ ಬ್ರಂಟ್ ಮತ್ತು ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಅತ್ಯುತ್ತಮ ಜೊತೆಯಾಟವಾಡಿದರು. ಬ್ರಂಟ್​ 28 ಎಸೆತ ಎದುರಿಸಿದ ಬ್ರಂಟ್​ 30 ರನ್ ಗಳಿಸಿ ಸುದರ್​ಲ್ಯಾಂಡ್​ಗೆ ವಿಕೆಟ್ ಒಪ್ಪಿಸಿದರು. ಇತ್ತ ನಾಯಕಿ ಹರ್ಮನ್​ಪ್ರೀತ್​ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 44 ಎಸೆತಗಳಲ್ಲಿ 9 ಫೋರ್, 2 ಸಿಕ್ಸರ್ ಸಿಡಿಸುವ ಮೂಲಕ 66 ರನ್​​ ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆಯದಾಗಿ 20 ಓವರ್​ಗಳಿಗೆ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಕೇವಲ 132 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಮೆರಿಜಾನ್ನೆ ಕಪ್, ಜಾನಸೇನ್, ಚಾರಿಣಿ ಎರಡೆರೆಡು ವಿಕೆಟ್ ಕಿತ್ತು ಮುಂಬೈ ಪಡೆಯನ್ನು 149 ರನ್​ಗೆ ಕಟ್ಟಿ ಹಾಕುವಲ್ಲಿ ದೊಡ್ಡ ಪಾತ್ರವಹಿಸಿದರು.

ಬೃಹತ್​ ಮೊತ್ತ ಬೆನ್ನಟ್ಟಿದ ದೆಹಲಿ ಕ್ಯಾಪಿಟಲ್ಸ್​ ವುಮೆನ್ ಟೀಮ್​ಗೆ ಮುಂಬೈ ಇಂಡಿಯನ್ಸ್​ನ ಮಹಿಳಾ ಬೌಲರ್​ಗಳು ಆರಂಭಿಕವಾಗಿಯೇ ದೊಡ್ಡ ಹೊಡೆತ ಕೊಟ್ಟರು ತಂಡ 10 ಓವರ್ ಮುಗಿಸುವಷ್ಟರಲ್ಲಿಯೇ ಕೇವಲ 54 ರನ್​ ಗಳಿಸಿ ತನ್ನ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿದ್ದಿತ್ತು. ಮೆಗ್ ಲನ್ನಿಂಗ್ 13 ರನ್, ಶಫಾಲಿ ವರ್ಮಾ 4, ಜೆಸ್​ ಜಾನಸ್ಸೆನ್​ 13ಮತ್ತು ಸುತರ್ಲೆಂಡ್ 2 ರನ್ ಗಳಿಸಿ ಔಟಾದರು. ಈ ಮೂಲಕ ಮುಂಬೈ ಇಂಡಿಯನ್ಸ್​ ಬೌಲಿಂಗ್ ಆರಂಭಿಕ ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು.

ಇದನ್ನೂ ಓದಿ:ಈ ಸ್ಟಾರ್ ಪ್ಲೇಯರ್​ಗಳ​ ಸ್ಫೋಟಕ ಬ್ಯಾಟಿಂಗ್​ನಿಂದ ರಿಷಭ್ ಪಂತ್​​ಗೆ ಭಾರೀ ಸಂಕಷ್ಟ.. ಹೇಗೆ ಗೊತ್ತಾ?

ಆದರೆ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಮರಿಜಾನೆ ಕಪ್ ಆಟದ ದಿಕ್ಕನ್ನೇ ಬದಲಿಸಿತ್ತಾರೆ ಎನ್ನುವ ಮಟ್ಟಕ್ಕೆ ಬ್ಯಾಟ್ ಬೀಸಿದರು 26 ಬೌಲ್​ಗಳಿಗೆ 5 ಫೋರ್ ಹಾಗೂ 2 ಸಿಕ್ಸರ್ ಬಾರಿಸಿದ ಕಪ್ 15 ಬಾಲ್​​ಗೆ 27 ರನ್ ಬೇಕಾಗಿದ್ದಾಗ ಬ್ರಂಟ್ ಬೌಲ್​​ಗೆ ಕ್ಯಾಚಿತ್ತು ನಿರ್ಗಮಿಸಿದರು ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು

ಅಂತಿಮವಾಗಿ 20 ಓವರ್​ನಲ್ಲಿ 9 ವಿಕೆಟ್​​​ಗೆ 141 ರನ್​ ಗಳಿಸಿದ ದೆಹಲಿ ಕ್ಯಾಪಿಟಲ್ಸ್ 8 ರನ್​ಗಳಿಂದ ಸೋತು ಸುಣ್ಣವಾಯಿತು. ಮಹಿಳಾ ಐಪಿಎಲ್​ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ಪಡೆ ಎರಡನೇ ಬಾರಿ ಐಪಿಎಲ್ ಕಪ್​ಗೆ ಮುತ್ತಿಟ್ಟಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment