4, 4, 4, 4, 4, 4, 6, 6; ಸೂರ್ಯಕುಮಾರ್ ಮತ್ತೆ ಅಬ್ಬರ.. ಎದುರಾಳಿಗೆ ಸಾಧಾರಣ ಟಾರ್ಗೆಟ್

author-image
Bheemappa
Updated On
4, 4, 4, 4, 4, 4, 6, 6; ಸೂರ್ಯಕುಮಾರ್ ಮತ್ತೆ ಅಬ್ಬರ.. ಎದುರಾಳಿಗೆ ಸಾಧಾರಣ ಟಾರ್ಗೆಟ್
Advertisment
  • ಲೀಗ್​ನ ಕೊನೆಯ ಪಂದ್ಯವಾಡುತ್ತಿರುವ ಎರಡು ತಂಡಗಳು
  • ಕೇವಲ ಅಲ್ಪ ರನ್​ಗೆ ಕ್ಯಾಚ್​ ಕೊಟ್ಟು ಹೊರ ನಡೆದ ರೋಹಿತ್
  • ಮತ್ತೆ ಬ್ಯಾಟಿಂಗ್​ನಲ್ಲಿ ವಿಫಲ ಅನುಭವಿಸಿದ ಓಪನರ್​​ಗಳು

ಸೂರ್ಯಕುಮಾರ್ ಅವರ 57 ರನ್​ಗಳ ನೆರವಿನಿಂದ ಮುಂಬೈ ಇಂಡಿಯನ್ಸ್​ ತಂಡ ಕೊನೆ ಲೀಗ್​ ಪಂದ್ಯದಲ್ಲಿ 7 ವಿಕೆಟ್​ ನಷ್ಟಕ್ಕೆ 185 ರನ್​ಗಳ ಗುರಿಯನ್ನು ಪಂಜಾಬ್​ ಕಿಂಗ್ಸ್​​ಗೆ ನೀಡಿದೆ.

ರಾಜಸ್ಥಾನದ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ಪಂಜಾಬ್​ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಮೊದಲ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ದೊಡ್ಡ ಹಿನ್ನಡೆ ಅನುಭವಿಸಿತು. ರಯಾನ್ ರಿಕೆಲ್ಟನ್ ಕೇವಲ 27 ರನ್​ಗೆ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ:ಮುಂಬೈ ನಗರದಲ್ಲಿ ವರುಣಾರ್ಭಟ; ಮೆಟ್ರೋ ನಿಲ್ದಾಣದ ಅಂಡರ್​​ಗ್ರೌಂಡ್​ ತುಂಬೆಲ್ಲಾ ನೀರೋ ನೀರು..!

publive-image

ಇವರಾದ ಮೇಲೆ ಮತ್ತೊಬ್ಬ ಬ್ಯಾಟ್ಸ್​ಮನ್​ ರೋಹಿತ್ ಶರ್ಮಾ ಅವರು ಕ್ರೀಸ್​ನಲ್ಲಿ ಸ್ಟ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಹರ್ಪೀತ್​ ಬ್ರಾರ್​ ಬೌಲಿಂಗ್​ನಲ್ಲಿ 24 ರನ್​ಗೆ ಕ್ಯಾಚ್​ ಕೊಟ್ಟರು. ಇನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಸೂರ್ಯಕುಮಾರ್ ಯಾದವ್ ಅವರು ಮುಂಬೈ ಇಂಡಿಯನ್ಸ್​ ತಂಡದ ಮಾನ ಕಾಪಾಡಿದರು ಎನ್ನಬಹುದು. ಏಕೆಂದರೆ ಅಲ್ಪ ಮೊತ್ತಕ್ಕೆ ಕುಸಿಯುವ ತಂಡವನ್ನು ಸೂರ್ಯ ಮೇಲೆತ್ತಿದರು. ಈ ಪಂದ್ಯದಲ್ಲಿ ಕೇವಲ 39 ಎಸೆತಗಳನ್ನು ಎದುರಿಸಿದ ಮಿಸ್ಟರ್​ 360 ಸೂರ್ಯಕುಮಾರ್, 6 ಬೌಂಡರಿ, 2 ಸಿಕ್ಸರ್​ಗಳಿಂದ 57 ರನ್​ ಚಚ್ಚಿದರು. ಈ ವೇಳೆ ಬ್ಯಾಟಿಂಗ್ ಮಾಡುವಾಗ ಆರ್ಷ್​ದೀಪ್ ಸಿಂಗ್​ಗೆ ಎಲ್​ಬಿಗೆ ಬಲಿಯಾದರು.

ತಿಲಕ್ ವರ್ಮಾ 1, ವಿಲ್ ಜಾಕ್ಸ್​ 17 ಮತ್ತೆ ಬ್ಯಾಟಿಂಗ್​ನಲ್ಲಿ ವಿಫಲರಾದರು. ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ 2 ಬೌಂಡರಿ, 2 ಸಿಕ್ಸರ್​​​ನಿಂದ 15 ಬಾಲ್​ಗೆ 26 ರನ್​ ಸಿಡಿಸಿ ಔಟ್ ಆದರು. ನಮನ್​ ಧೀರ್ ಮತ್ತೆ ಅಬ್ಬರಿಸಲು ಮುಂದಾದರು. ಆದರೆ 20 ರನ್​ಗೆ ಆರ್ಷ್​ದೀಪ್ ಸಿಂಗ್​ಗೆ ವಿಕೆಟ್​ ಒಪ್ಪಿಸಿದರು. ಈ ಎಲ್ಲರ ಬ್ಯಾಟಿಂಗ್​ನಿಂದ ಮುಂಬೈ ಇಂಡಿಯನ್ಸ್​, 7 ವಿಕೆಟ್​ ನಷ್ಟಕ್ಕೆ 185 ರನ್​ಗಳ ಟಾರ್ಗೆಟ್​ ಅನ್ನು ಪಂಜಾಬ್​ಗೆ ನೀಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment