newsfirstkannada.com

ರೋಹಿತ್​​ಗೆ ಮುಂಬೈ ಫ್ರಾಂಚೈಸಿ ನೀಡುವ ಮರ್ಯಾದೆ ಇದೇನಾ.. ಪಕ್ಕಾ ಪ್ಲಾನ್​​​​​​​ ಮಾಡಿ ರೋಹಿತ್​ರನ್ನ​​​​​ ಕೆಳಗಿಳಿಸಿದ್ರಾ?

Share :

Published February 8, 2024 at 3:03pm

Update February 8, 2024 at 3:05pm

    ಮುಂಬೈ ಫ್ರಾಂಚೈಸಿ ಚರಿಷ್ಮಾವನ್ನೆ ಬದಲಾಯಿಸಿದ್ದ ಹಿಟ್​​ಮ್ಯಾನ್

    ಮೋಸ್ಟ್​​​​ ಸಕ್ಸಸ್​​​ಫುಲ್​​​​​​​ ಕ್ಯಾಪ್ಟನ್​​ರನ್ನ ನಡೆಸಿಕೊಳ್ಳುವುದು ಗೊತ್ತಿಲ್ಲ

    ಫ್ರಾಂಚೈಸಿ ಕೊಡೋ ಮರ್ಯಾದೆ ಪ್ಲೇಯರ್ಸ್​ಗೆ ಬೇಡವೇ ಬೇಡ!

ಮುಂಬೈ ಇಂಡಿಯನ್ಸ್​ ಐಪಿಎಲ್​​​​​​​​​​​​​ನ ಭೀಷ್ಮ. ಈ ತಂಡದ ಚರಿಷ್ಮಾ ಬದಲಿಸಿದ್ದು ಕ್ಯಾಪ್ಟನ್ ರೋಹಿತ್ ಶರ್ಮಾ. ದಾಖಲೆಯ 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ಯಶಸ್ವಿ ನಾಯಕ. ಇಂತಹ ನಾಯಕನಿಗೆ ಮುಂಬೈ ಫ್ರಾಂಚೈಸಿ ಮರ್ಯಾದೆ ಕೊಡದೇ ಅವಮಾನಿಸಿದ್ದು ಈಗ ಹಳೆ ಕಥೆ. ಈಗ ಒನ್​ ಫ್ಯಾಮಿಲಿಯಲ್ಲಿ ಕೌಟುಂಬಿಕ ಕಲಹ ಶುರುವಾಗಿದೆ. ಯಾಕಾಗಿ ಅನ್ನೋದು ಗೊತ್ತಾಗಬೇಕಾದ್ರೆ ಆ ಬಗ್ಗೆ ಮಾಹಿತಿ ಇಲ್ಲಿದೆ.

ಇದು ಒನ್ ಫ್ಯಾಮಿಲಿ ಸ್ಟೋರಿ. ಇದು ಒನ್ ಫ್ಯಾಮಿಲಿ ವರ್ಸಸ್​​ ಅನದರ್​​​​​ ಫ್ಯಾಮಿಲಿ ಪೈಟ್​​. ಓರ್ವ ಸಕ್ಸಸ್​​​ಫುಲ್​​​​ ಕ್ಯಾಪ್ಟನ್ ನನ್ನ ಹೇಗೆ ನಡೆಸಿಕೊಳ್ಳಬೇಕು ಅನ್ನೋದು ಐಪಿಎಲ್​​​ನ ಮೋಸ್ಟ್​​​​ ಸಕ್ಸಸ್​​​ಫುಲ್​​​​​​​ ಫ್ರಾಂಚೈಸಿ ಮುಂಬೈ ಇಂಡಿಯನ್ಸ್​​ಗೆ ಗೊತ್ತಿಲ್ಲ. ಜನಪ್ರೀಯತೆ, ಹಣ ಗಳಿಕೆಯಲ್ಲಿ ತಂಡ ನಂಬರ್​​1 ಆದ್ರೂ ಆಟಗಾರರಿಗೆ ಈ ಫ್ರಾಂಚೈಸಿ ಕೊಡುವ ಮರ್ಯಾದೆ ಯಾರಿಗೂ ಬೇಡ ಬಿಡಿ.

ಬ್ಯಾಟಿಂಗ್​ ವೈಫಲ್ಯಕ್ಕೆ ಕ್ಯಾಪ್ಟನ್ಸಿ ತಲೆದಂಡ ಸರಿನಾ..?

2013 ರಲ್ಲಿ ಮುಂಬೈ ತಂಡದ ಚುಕ್ಕಾಣಿ ಹಿಡಿದ ರೋಹಿತ್ ಫ್ರಾಂಚೈಸಿ ಚರಿಷ್ಮಾವನ್ನೆ ಬದಲಿಸಿ ಬಿಟ್ಟರು. ಅದ್ಯಾವ ಮಟ್ಟಿಗೆ ರೋಹಿತ್​ ಅಂದ್ರೆ ಮುಂಬೈ, ಮುಂಬೈ ಅಂದ್ರೆ ರೋಹಿತ್​ ಅನ್ನುವಷ್ಟರ ಮಟ್ಟಿಗೆ ಖ್ಯಾತಿ ತಂದುಕೊಟ್ರು. 11 ವರ್ಷಗಳಲ್ಲಿ ದಾಖಲೆಯ ಐದು ಬಾರಿ ಟ್ರೋಫಿಗೆ ಗೆಲ್ಲಿಸಿಕೊಟ್ರು. ಒಂದೇ ಮಾತಲ್ಲಿ ಹೇಳೋದಾದ್ರೆ ರೋಹಿತ್​​ನಿಂದಲೇ ಮುಂಬೈ ಈ ಮಟ್ಟಿಗೆ ಪ್ರಖ್ಯಾತಿ ಗಳಿಸಿ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.

ಇಂತಹ ಯಶಸ್ವಿ ನಾಯಕನಿಗೆ ತಲೆದಂಡವಾಗಿದೆ. ಮುಂಬೈ ಫ್ರಾಂಚೈಸಿ ರೋಹಿತ್​​ ಶರ್ಮಾ ಬದಲಿ ಹಾರ್ದಿಕ್​​ ಪಾಂಡ್ಯಗೆ ಪಟ್ಟ ಕಟ್ಟಿದೆ. ಆ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯ್ತು. ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗಲೇ ಮುಂಬೈ ಹೆಡ್​ಕೋಚ್​ ಮಾರ್ಕ್​ ಬೌಚರ್ ರೋಹಿತ್​ರನ್ನ ಕೆಳಗಿಳಿಸಿದ್ದೇಕೆ ಅನ್ನೋ ಸತ್ಯ ಬಾಯ್ಬಿಟ್ಟು, ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

ರೋಹಿತ್​​ ಬ್ಯಾಟಿಂಗ್ ವೈಫಲ್ಯಕ್ಕೆ ತಲೆದಂಡ..!

ಕಳೆದ ಕೆಲ ಸೀಸನ್​​ಗಳಿಂದ ರೋಹಿತ್​​​​​​​​​​ ಶರ್ಮಾ ಬ್ಯಾಟಿಂಗ್​​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಆದರೆ ನಾಯಕರಾಗಿ ಯಶಸ್ಸು ಕಂಡಿದ್ದಾರೆ. ಬಹುಶಃ ಇದೆ ಆವೃತ್ತಿಯ ರೋಹಿತ್​ಗೆ ಕೊನೆ ಅವಕಾಶ ಆಗಬಹುದು. ನಾವು ರೋಹಿತ್​​ ಆಟಗಾರನಾಗಿ ಆಡುವುದನ್ನ ಬಯಸುತ್ತೇವೆ. ಅವರ ಮೌಲ್ಯ ತಿಳಿದಿದ್ದು, ನಂಬಿಕೆ ಇಟ್ಟಿದ್ದೇವೆ. ಅವರು ಆಟಗಾರರಾಗಿ ಸಂಭ್ರಮಿಸಲಿ. ರೋಹಿತ್ ಭಾರತ ತಂಡದ ನಾಯಕರಾಗಿದ್ದು ಒತ್ತಡವಿದೆ. ಆದರೆ ಐಪಿಎಲ್​​​​​​​​​​​​​ನಲ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಒತ್ತಡ ಕಮ್ಮಿಯಾಗಬಹುದು.

ಮಾರ್ಕ್​ ಬೌಚರ್​​, ಮುಂಬೈ ಹೆಡ್​ಕೋಚ್​​​​​​​

ಉರಿಯುವ ಗಾಯಕ್ಕೆ ಉಪ್ಪು ಸವರಿದ ಬೌಚರ್​​​..!

ರೋಹಿತ್​ರನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ ಬಳಿಕ ಮುಂಬೈ ಫ್ರಾಂಚೈಸಿ ಇಲ್ಲಿ ತನಕ ಅಧಿಕೃತ ಸ್ಪಷ್ಟನೆ ಕೊಟ್ಟಿರಲಿಲ್ಲ. ಈಗ ಹೆಡ್​ಕೋಚ್ ಮಾರ್ಕ್​ ಬೌಚರ್​ ತುಟಿ ಬಿಚ್ಚುವ ಮೂಲಕ ಉರಿಯುವ ಗಾಯದ ಮೇಲೆ ಉಪ್ಪು ಸುರಿಯುವ ಕೆಲಸ ಮಾಡಿದ್ದಾರೆ. ಆ ಮೂಲಕ ಮುಂಬೈ ಫ್ರಾಂಚೈಸಿ ಮಾರ್ಕ್​ ಬೌಚರ್​​ನಿಂದಲೇ ಉತ್ತಮ ಗೇಮ್ ಆಡ್ತಿದೆ. ಯಾಕಂದ್ರೆ ಒಂದು ಕಡೆ ರೋಹಿತ್​​​​​​​​​​​ ಫಾರ್ಮ್​ನಲ್ಲಿಲ್ಲ. ಹೀಗಾಗಿ ಅವರನ್ನ ಕೆಳಗಳಿಸಿದ್ದೇವೆ ಎಂದು ಬೌಚರ್ ಬಾಯಲ್ಲಿ ಹೇಳಿಸಿದೆ. ಇನ್ನೊಂದು ಕಡೆ ಬಿಟ್ಟು ಹೋಗಿದ್ದ ಹಾರ್ದಿಕ್​​​ರನ್ನ ಕೋಟಿ ಕೋಟಿ ಕೊಟ್ಟು ತಂಡಕ್ಕೆ ಬರಮಾಡಿಕೊಂಡಿದೆ. ಆ ಮೂಲಕ ಪಕ್ಕಾ ಪ್ಲಾನ್ ಮಾಡಿನೇ ರೋಹಿತ್​​​ರನ್ನ ಕ್ಯಾಪ್ಟನ್ಸಿ ಗಾದೆಯಿಂದ ಕೆಳಗಿಳಿಸಿದೆ.

ಬೌಚರ್​​ಗೆ ರೋಹಿತ್ ಪತ್ನಿ ರಿತಿಕಾ ಟಾಂಗ್

ಇನ್ನು ಬೌಚರ್​​​​​, ರೋಹಿತ್​​ ಬಗ್ಗೆ ಬಾಯಿ ಬಿಡ್ತದ್ದಂತೆ ಹಿಟ್​ಮ್ಯಾನ್ ಪತ್ನಿ ರಿತಿಕಾ ಸಾಜ್ದೆ ಕೆರಳಿ ಕೆಂಡವಾಗಿದ್ದಾರೆ. ಬೌಚರ್​ ಹೇಳಿದ್ರಲ್ಲಿ ಅನೇಕ ಸಂಗತಿಗಳು ತಪ್ಪಾಗಿವೆ ಎಂದು ಕಾಮೆಂಟ್ ಮಾಡುವ ಮೂಲಕ ರಿತಿಕಾ ಬೌಚರ್​​​​ಗೆ ಟಾಂಗ್ ಕೊಟ್ಟಿದ್ದಾರೆ. ಆ ಮೂಲಕ ಒನ್​​ ಫ್ಯಾಮಿಲಿ ಮುಂಬೈನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

2024ನೇ ಐಪಿಎಲ್​​​​ ರೋಹಿತ್​ಗೆ ಕೊನೆಯಾಗುತ್ತಾ..?

ಮುಂಬೈ ಕೋಚ್​​​ ಮಾರ್ಕ್​ ಬೌಚರ್​​ 2024ನೇ ಐಪಿಎಲ್​​​​​​ ರೋಹಿತ್​​ಗೆ ಕೊನೆಯಾಗಬಹುದು ಎಂದು ಹೇಳಿದ್ದಾರೆ. ಅವರ ಹೇಳಿಕೆ ನೋಡ್ತಿದ್ರೆ 5 ಟ್ರೋಫಿಗಳ ಒಡೆಯನಿಗೆ 17ನೇ ಐಪಿಎಲ್ ಆವೃತ್ತಿನೇ ಕೊನೆ ಆಗಬಹುದು. ಎಲ್ಲವೂ ರೋಹಿತ್​​ ನಿರ್ಧಾರದ ಮೇಲೆ ಮೇಲೆ ನಿಂತಿದೆ.

ಮುಂಬೈ ಫ್ರಾಂಚೈಸಿಯಲ್ಲೆ ಉಳಿದುಕೊಳ್ತಾರಾ..?

ಸದ್ಯ ಮುಂಬೈ ಫ್ರಾಂಚೈಸಿ ನಡೆಯಿಂದ ರೋಹಿತ್​ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಹೀಗಾಗ್ಲೆ ಅನೇಕ ಫ್ರಾಂಚೈಸಿಗಳು ರೋಹಿತ್​​​​​ಗೆ ಗಾಳ ಹಾಕಿವೆ. ಟೂರ್ನಿ ಆರಂಭದ 1 ವಾರಕ್ಕೂ ಮುನ್ನ ಆಟಗಾರರ ಟ್ರೇಡ್ ವಿಂಡೋ ಓಪನ್ ಇರಲಿದೆ. ಹೀಗಾಗಿ ಉಳಿದ ಫ್ರಾಂಚೈಸಿಗಳಿಗೆ ರೋಹಿತ್​ರನ್ನ ಸೆಳೆಯುವ ಅವಕಾಶವಿದೆ. ಆದರೆ ಇದಕ್ಕೆ ಹಿಟ್​​ಮ್ಯಾನ್​ ಒಪ್ಪುತ್ತಾರಾ ಇಲ್ಲ ವಿಧಿ ಇಲ್ಲದೇ ಮುಂಬೈ ತಂಡದಲ್ಲೇ ಉಳಿದುಕೊಳ್ತಾರಾ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್​​ಗೆ ಮುಂಬೈ ಫ್ರಾಂಚೈಸಿ ನೀಡುವ ಮರ್ಯಾದೆ ಇದೇನಾ.. ಪಕ್ಕಾ ಪ್ಲಾನ್​​​​​​​ ಮಾಡಿ ರೋಹಿತ್​ರನ್ನ​​​​​ ಕೆಳಗಿಳಿಸಿದ್ರಾ?

https://newsfirstlive.com/wp-content/uploads/2023/12/ROHIT_SHARMA_HARDHIK-1.jpg

Load More