/newsfirstlive-kannada/media/post_attachments/wp-content/uploads/2025/06/PBKS-vs-MI-Rain-Delay-2.jpg)
IPL ಕ್ವಾಲಿಫೈಯರ್ 2 ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ. ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಸೋತಿರುವ ಮುಂಬೈ ಇಂಡಿಯನ್ಸ್ ಅಗ್ನಿ ಪರೀಕ್ಷೆಯೇ ಎದುರಾಗಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲೋ ಉತ್ಸಾಹದಲ್ಲಿದ್ದ ಮುಂಬೈ ತಂಡಕ್ಕೆ ವರುಣ ಬಿಟ್ಟು ಬಿಡದೇ ಕಾಡುತ್ತಿದ್ದಾನೆ.
ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಂಜೆಯಿಂದಲೂ ಮಳೆ ಸುರಿಯುತ್ತಿದೆ. ಕೆಲ ಕಾಲ ಮಳೆ ನಿಂತರೂ ಪಿಚ್ ಮೇಲಿನ ಟಾರ್ಪಲ್ ತೆಗೆಯುವಷ್ಟರಲ್ಲೇ ಮತ್ತೆ ಮಳೆಯಾಗಿದೆ. ಸ್ವಲ್ಪ ಮಳೆ ನಿಂತಾಗ ಐಪಿಎಲ್ ಅಭಿಮಾನಿಗಳಿಗೆ ಮತ್ತೆ ಪಂದ್ಯ ಆರಂಭವಾಗುವ ನಿರೀಕ್ಷೆ ಇತ್ತು. ಆದರೆ ಪದೇ ಪದೇ ಮಳೆಯಾಗುತ್ತಿದ್ದು, ಮುಂಬೈ ಇಂಡಿಯನ್ಸ್ ಆಸೆಗೆ ತಣ್ಣೀರು ಎರಚಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ರಾತ್ರಿ 9.45ರ ಒಳಗೆ ಮಳೆ ನಿಂತರೆ ಪೂರ್ತಿ 20 ಓವರ್‌ಗಳ ಪಂದ್ಯ ನಡೆಸಲಾಗುತ್ತಿದೆ.
ರಾತ್ರಿ 9.45ಕ್ಕೆ ಐಪಿಎಲ್ ಕ್ವಾಲಿಫೈಯರ್ 2 ಪಂದ್ಯ ಆರಂಭವಾಗಲಿದೆ ಎನ್ನಲಾಗಿದ್ದು, 2ನೇ ಇನ್ನಿಂಗ್ಸ್ ಮಧ್ಯರಾತ್ರಿ 1 ಗಂಟೆಗೆ ಮುಕ್ತಾಯವಾಗಲಿದೆ.
9.45 to 11.15 - ಮೊದಲ ಇನ್ನಿಂಗ್ಸ್
11.15 to 11.25 - ವಿರಾಮ
11.25 to 12.55 - 2ನೇ ಇನ್ನಿಂಗ್ಸ್
ಇದನ್ನೂ ಓದಿ: PBKS vs MI ಇಂದಿನ ಪಂದ್ಯ ರದ್ದಾದ್ರೆ ಏನಾಗುತ್ತೆ? ಹವಾಮಾನ ಇಲಾಖೆ ಅಲರ್ಟ್ ಏನು?
ಐಪಿಎಲ್ ಪಂದ್ಯಗಳು ರಾತ್ರಿ 7.30ಕ್ಕೆ ಆರಂಭವಾದ್ರೆ 11 ಗಂಟೆ ಹೊತ್ತಿಗೆ ಮುಗಿಯುತ್ತಾ ಇತ್ತು. ಆದರೆ ಇಂದು ಕ್ವಾಲಿಫೈಯರ್ ಪಂದ್ಯ ನಡೆಯುತ್ತಾ ಇರೋದ್ರಿಂದ 2 ಗಂಟೆಗಳ ಹೆಚ್ಚು ಕಾಲಾವಕಾಶ ನೀಡಲಾಗಿದೆ. ರಾತ್ರಿ 10 ಗಂಟೆಯ ಮೇಲೆ ಮಳೆ ನಿಂತರೂ 5 ಓವರ್ ಪಂದ್ಯ ಅಥವಾ ಸೂಪರ್ ಓವರ್ ಮ್ಯಾಚ್ ಆಡಿಸುವ ಸಾಧ್ಯತೆ ಹೆಚ್ಚಾಗಿದೆ.
ಐಪಿಎಲ್ ಫೈನಲ್ ಪಂದ್ಯಕ್ಕೆ ಮಾತ್ರ ರಿಸರ್ವ್ ಡೇ ಇದೆ. IPL ಕ್ವಾಲಿಫೈಯರ್ 2 ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾದರು 2 ಗಂಟೆಗಳ ಹೆಚ್ಚು ಕಾಲಾವಧಿ ನೀಡಲಾಗುತ್ತದೆ. ಅಂದ್ರೆ ಓವರ್‌ಗಳಲ್ಲಿ ಬದಲಾವಣೆ ಅಥವಾ ಸೂಪರ್ ಓವರ್ ಪಂದ್ಯ ಆಗಬಹುದು. ಹೀಗಾಗಿ ಇಂದಿನ ಐಪಿಎಲ್ ಕ್ವಾಲಿಫೈಯರ್ 2 ಮಧ್ಯರಾತ್ರಿವರೆಗೂ ನಡೆಸುವ ಅವಕಾಶಗಳಿದೆ.
ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್ 2 ಪಂದ್ಯ ರದ್ದಾದ್ರೆ ಐಪಿಎಲ್ ಟೇಬಲ್ ಟಾಪರ್ ಆಗಿರೋ ಪಂಜಾಬ್ ಕಿಂಗ್ಸ್ ನೇರವಾಗಿ ಫೈನಲ್ ತಲುಪಲಿದೆ. ಜೂನ್ 3ರ ಫಿನಾಲೆಯಲ್ಲಿ RCB ವಿರುದ್ಧ ಪಂಜಾಬ್ ಕಿಂಗ್ಸ್ ಸೆಣಸಾಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ