newsfirstkannada.com

×

ಮುಂಬೈ ತಂಡದಿಂದ ಹಾರ್ದಿಕ್​​, ರೋಹಿತ್ ಸೇರಿ ಐವರು ರೀಟೈನ್​​​; ಯಾರಿಗೆ ಎಷ್ಟು ಕೋಟಿ? ಕ್ಯಾಪ್ಟನ್​ ಯಾರು?​​

Share :

Published October 31, 2024 at 6:35pm

Update October 31, 2024 at 6:50pm

    ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​

    ಮುಂಬೈ ಇಂಡಿಯನ್ಸ್​ ತಂಡದ ಹೊಸ ರೀಟೈನ್​ ಲಿಸ್ಟ್​ ಪ್ರಕಟ

    ರೋಹಿತ್​, ಹಾರ್ದಿಕ್​ ಸೇರಿ ಐವರಿಗೆ ಮಣೆ ಹಾಕಿದ ಮುಂಬೈ

ಇಂಡಿಯನ್​ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲೇ ಅತೀ ಹೆಚ್ಚು ಸಕ್ಸಸ್​ಫುಲ್​ ಆಗಿರೋ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್​ ಕೂಡ ಒಂದು. ಬರೋಬ್ಬರಿ 5 ಬಾರಿ ಐಪಿಎಲ್​ ಚಾಂಪಿಯನ್​ ಆಗಿದೆ. ಈ ತಂಡ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಜೊತೆಗೆ ತಿಲಕ್ ವರ್ಮಾ ಅವರನ್ನು ಉಳಿಸಿಕೊಂಡಿದೆ. ಹಾಗೆಯೇ ಮುಂಬೈ ತಂಡಕ್ಕೆ 5 ಬಾರಿ ಕಪ್​ ಗೆಲ್ಲಿಸಿದ ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರನ್ನು ರೀಟೈನ್​ ಮಾಡಿಕೊಂಡು ಎಲ್ಲಾ ವಿವಾದಕ್ಕೂ ತೆರೆ ಎಳೆದಿದೆ.

ಯಾರಿಗೆ ಎಷ್ಟು ಕೋಟಿ?

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್​​ ತಂಡವನ್ನು ತೊರೆಯಲಿದ್ದಾರೆ ಅನ್ನೋ ವದಂತಿ ಇತ್ತು. ಆದರೀಗ, ಮುಂಬೈ ಇಂಡಿಯನ್ಸ್​ ತಂಡ ರೋಹಿತ್​ ಶರ್ಮಾ ಅವರ ಮನವೊಲಿಸಿದೆ. ಹಾಗಾಗಿ ರೋಹಿತ್ ಶರ್ಮಾಗೆ 16.30 ಕೋಟಿ ಕೊಟ್ಟು ರೀಟೈನ್​ ಮಾಡಿಕೊಂಡಿದೆ. ಜಸ್ಪ್ರೀತ್ ಬುಮ್ರಾಗೆ ಬರೋಬ್ಬರಿ 18 ಕೋಟಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್​ಗೆ ತಲಾ 16.35 ಕೋಟಿ ನೀಡಿ ರೀಟೈನ್​​ ಮಾಡಿಕೊಳ್ಳಲಾಗಿದೆ. ತಿಲಕ್ ವರ್ಮಾಗೆ 8 ಕೋಟಿ ನೀಡಿ ಉಳಿಸಿಕೊಂಡಿದ್ದಾರೆ.

ಇಶಾನ್​ ಕಿಶನ್​ಗೆ ಕೊಕ್​

ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್​ ವಿಕೆಟ್ ಕೀಪರ್ ಇಶಾನ್ ಕಿಶನ್. ಈ ಹಿಂದೆ 2022ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್​ ತಂಡ ಇಶಾನ್​ ಕಿಶನ್​ಗೆ ಬರೋಬ್ಬರಿ 15.25 ಕೋಟಿ ನೀಡಿ ಖರೀದಿ ಮಾಡಿತ್ತು. ಈ ಸಲ ಮುಂಬೈ ತಂಡದಿಂದ ಇಶಾನ್​ ಅವರನ್ನು ಕೈ ಬಿಡಲಾಗಿದೆ.

ಬಿಸಿಸಿಐ ಎಲ್ಲ ತಂಡಗಳಿಗೂ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿತ್ತು. ಜತೆಗೆ ಐಪಿಎಲ್​​ ಹರಾಜಿನಲ್ಲಿ ಮಾಲೀಕರಿಗೆ ರೈಟ್‌ ಟು ಮ್ಯಾಚ್‌ ಕಾರ್ಡ್‌ ಬಳಸುವ ಅವಕಾಶ ಕೂಡ ಇದೆ. ಈ ನಡುವೆ ಮುಂಬೈ ಯಾರನ್ನೆಲ್ಲಾ ಉಳಿಸಿಕೊಳ್ಳಬಹುದು ಎಂಬ ಕುತೂಹಲ ಜನರಲ್ಲಿತ್ತು. ಈಗ ಎಲ್ಲಾ ಪ್ರಶ್ನೆಗಳಿಗೂ ತೆರೆ ಬಿದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈ ತಂಡದಿಂದ ಹಾರ್ದಿಕ್​​, ರೋಹಿತ್ ಸೇರಿ ಐವರು ರೀಟೈನ್​​​; ಯಾರಿಗೆ ಎಷ್ಟು ಕೋಟಿ? ಕ್ಯಾಪ್ಟನ್​ ಯಾರು?​​

https://newsfirstlive.com/wp-content/uploads/2024/10/Hardik_Rohit1-1.jpg

Load More