Advertisment

ಸಿಎಸ್​ಕೆ, ಆರ್​ಸಿಬಿಯನ್ನ ಹಿಂದಿಕ್ಕಿದ ಮುಂಬೈ ಇಂಡಿಯನ್ಸ್.. ಪಾಂಡ್ಯ ಪಡೆ No.1

author-image
Ganesh
Updated On
ಸಿಎಸ್​ಕೆ, ಆರ್​ಸಿಬಿಯನ್ನ ಹಿಂದಿಕ್ಕಿದ ಮುಂಬೈ ಇಂಡಿಯನ್ಸ್.. ಪಾಂಡ್ಯ ಪಡೆ No.1
Advertisment
  • ಚಾಂಪಿಯನ್​ ರಾಯಲ್ ಚಾಲೆಂಜರ್ಸ್​ಗೆ 2ನೇ ಸ್ಥಾನ
  • ಆರ್​​ಸಿಬಿ, ಚೆನ್ನೈ ತಂಡವನ್ನೇ ಹಿಂದಿಕ್ಕಿದ ಮುಂಬೈ ಪಲ್ಟನ್ಸ್
  • ರಾಜಸ್ಥಾನ್, ಪಂಜಾಬ್​, ಡೆಲ್ಲಿಗಿಂತ ಕಳಪೆ ಚೆನ್ನೈ

ಐಪಿಎಲ್​ ಮುಗಿದು 2 ತಿಂಗಳಾಗ್ತಿದೆ. ಸೀಸನ್​​-18ರ ಐಪಿಎಲ್​​​ ಚಾಂಪಿಯನ್ ಯಾರು ಎಂಬ ಕ್ಯೂರಿಯಾಸಿಟಿಗೂ ತೆರೆ ಬಿದ್ದಿದೆ. ಮುಂಬೈ ಇಂಡಿಯನ್ಸ್​, ಒಂದು ವಿಚಾರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ತಂಡವನ್ನು ಹಿಂದಿಕ್ಕಿದೆ.

Advertisment

ಸೋಶಿಯಲ್​​ ಮೀಡಿಯಾ ವೀವ್ಸ್​ನಲ್ಲಿ ಮುಂಬೈ ನಂ 1

ಸೀಸನ್​​-18ರ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್, ಆನ್​ಫೀಲ್ಡ್​ನಲ್ಲಿ ಫೇಲಾಗಿದೆ. ಸೋಶಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಾದ ಇನ್​​ಸ್ಟಾಗ್ರಾಮ್​, ಫೇಸ್​​ಬುಕ್​, ಎಕ್ಸ್​ ಹಾಗೂ ಯೂಟ್ಯೂಬ್​​ ವೀವ್ಸ್​ಗಳಲ್ಲಿ ಡಾಮಿನೇಟ್ ಮಾಡಿರುವ ಮುಂಬೈ ಇಂಡಿಯನ್ಸ್​, ಬರೋಬ್ಬರಿ 798 ಕೋಟಿ ವೀವ್ಸ್ ಪಡೆದು ದಾಖಲೆ ಬರೆದಿದೆ. ಇಂಟ್ರೆಸ್ಟಿಂಗ್ ಅಂದ್ರೆ, ಈ ವಿಚಾರದಲ್ಲಿ ಆರ್​ಸಿಬಿ ಹಾಗೂ ಚೆನ್ನೈ ತಂಡಗಳನ್ನೇ ಹಿಂದಿಕ್ಕಿದೆ.

ಇದನ್ನೂ ಓದಿ: ‘ಇಲ್ಲ, ಇಲ್ಲ ಇನ್ನೂ ಉಸಿರು ಇದೆ..’ ಪ್ರಿಯಕರ ಬಾವನಿಗೆ ಚಾಟ್ ಮಾಡುತ್ತಲೇ ಪತಿಯನ್ನ ಮುಗಿಸಿದ ಪತ್ನಿ..!

publive-image

ಆರ್​​ಸಿಬಿಗೆ 2ನೇ ಸ್ಥಾನ

ಆನ್​​ಫೀಲ್ಡ್​ಬಲ್ಲಿ ಸಾಲಿಡ್ ಆಟವಾಡಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸೋಶಿಯಲ್ ಮೀಡಿಯಾ ವೀವ್ಸ್​ನಲ್ಲೂ ಭರ್ಜರಿ ಪರ್ಫಾಮೆನ್ಸ್ ನೀಡಿದೆ. ಐಪಿಎಲ್​​ ಟೀಮ್​​ಗಳ ಫಾಲೋವರ್​​​ಗಳ ವಿಚಾರದಲ್ಲಿ 3ನೇ ಸ್ಥಾನದಲ್ಲಿದ್ರು. 588 ಕೋಟಿ ವೀವ್ಸ್​ ದಾಖಲಿಸುವ ಮೂಲಕ 2ನೇ ಸ್ಥಾನದಲ್ಲಿದೆ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರೇಜ್​​ ಯಾವ ಮಟ್ಟಕ್ಕಿದೆ ಎಂಬುವುದನ್ನೇ ಪ್ರತಿಬಿಂಬಿಸುತ್ತೆ.

Advertisment

ಇದನ್ನೂ ಓದಿ: ಒಂದೇ ಮಂಟಪದಲ್ಲಿ ಅಣ್ಣ-ತಮ್ಮನ ಜೊತೆ ಸಪ್ತಪದಿ ತುಳಿದ ಯುವತಿ.. ಕಲಿಯುಗದ ದ್ರೌಪದಿ ಕಲ್ಯಾಣ..!

publive-image

ರಾಜಸ್ಥಾನ್, ಪಂಜಾಬ್​, ಡೆಲ್ಲಿಗಿಂತ ಕಳಪೆ ಚೆನ್ನೈ

ಚೆನ್ನೈ ಸೂಪರ್ ಕಿಂಗ್ಸ್​, ಐಪಿಎಲ್​​ನ ಸಕ್ಸಸ್​ಫುಲ್ ಟೀಮ್ ಮಾತ್ರವೇ ಅಲ್ಲ. ಮೋಸ್ಟ್ ಪಾಪ್ಯುಲರ್ ಆ್ಯಂಡ್ ಫಾಲೋವರ್ಸ್ ಹೊಂದಿರುವ ತಂಡ. ಸೀಸನ್​​-18 ಐಪಿಎಲ್​​​​ನಲ್ಲಿ ಪಾತಳಕ್ಕೆ ಕುಸಿದಿದ್ದ ಚೆನ್ನೈ ಸೂಪರ್ ಕಿಂಗ್ಸ್​, ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್​​ಗಳನ್ನು ಹೊಂದಿದ ಹೊರತಾಗಿಯೂ ಕೇವಲ 278 ಕೋಟಿ ವೀವ್ಸ್​ ಪಡೆದುಕೊಂಡಿದೆ. ಆ ಮೂಲಕ ಸೋಶಿಯಲ್ ಮೀಡಿಯಾ ವೀವ್ಸ್​ನಲ್ಲಿ 6ನೇ ಸ್ಥಾನದಲ್ಲಿದೆ. ಇದು ನಿಜಕ್ಕೂ ಅಚ್ಚರಿ ತರಿಸಿದೆ.

ಸೋಶಿಯಲ್ ಮೀಡಿಯಾದ ವೀವ್ಸ್​ನಲ್ಲಿ ರಾಜಸ್ಥಾನ್ ರಾಯಲ್ಸ್​, 382 ಕೋಟಿ ಪಡೆದಿದ್ರೆ. ರನ್ನರ್ ಆಪ್ ಪಂಜಾಬ್​ ಕಿಂಗ್ಸ್​ 321 ಕೋಟಿ ವೀವ್ಸ್​ ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್​, 298 ಕೋಟಿ ವೀವ್ಸ್​ ಪಡೆದಿದೆ. ಆ ಮೂಲಕ ಐಪಿಎಲ್​​​ನ ಮೋಸ್ಟ್​ ಪಾಪ್ಯುಲರ್, ಫ್ಯಾನ್​ ಫಾಲೋಯಿಂಗ್​ ಹೊಂದಿರುವ ಚೆನ್ನೈ ತಂಡವನ್ನೇ ಹಿಂದಿಕ್ಕಿದೆ. ಆ ಮೂಲಕ ರಾಜಸ್ಥಾನ್ ರಾಯಲ್ಸ್​, ಪಂಜಾಬ್ ಕಿಂಗ್ಸ್​, ಡೆಲ್ಲಿ ಕ್ಯಾಪಿಟಲ್ಸ್​ ಕ್ರಮವಾಗಿ 3, 4, 5ನೇ ಸ್ಥಾನದಲ್ಲಿವೆ.

Advertisment

ಇದನ್ನೂ ಓದಿ: 20 ವರ್ಷಗಳಿಂದ ಕೋಮಾದಲ್ಲಿದ್ದ ಸೌದಿ ರಾಜಕುಮಾರ ಇನ್ನಿಲ್ಲ.. ಸ್ಲೀಪಿಂಗ್ ಪ್ರಿನ್ಸ್​ಗೆ ಏನಾಗಿತ್ತು?

publive-image

ಗುಜರಾತ್ ಟೈಟನ್ಸ್​ 199 ಕೋಟಿ ವೀವ್ಸ್

ಟಾಪ್​-6 ತಂಡಗಳನ್ನು ಬಿಟ್ರೆ ಗುಜರಾತ್ ಟೈಟನ್ಸ್​ 199 ಕೋಟಿ, ತೀರಾ ಕಳಪೆ ಪ್ರದರ್ಶನ ನೀಡಿದ ಕೊಲ್ಕತ್ತಾ ನೈಟ್ ರೈಡರ್ಸ್​, ಸೋಶಿಯಲ್ ಮೀಡಿಯಾದಲ್ಲಿ 161 ಕೋಟಿ ವೀಕ್ಷಣೆ ಪಡೆದಿದೆ. ಸನ್ ರೈಸರ್ಸ್ ಹೈದ್ರಾಬಾದ್​, 141 ಕೋಟಿ, ಲಕ್ನೋ ಸೂಪರ್ ಜೈಂಟ್ಸ್​ 131 ಕೋಟಿಯ ವೀಕ್ಷಣೆ ಹೊಂದುವ ಮೂಲಕ ಕೊನೆ ಸ್ಥಾನದಲ್ಲಿದೆ.

ದಾಖಲೆಯ ವೀವ್ಸ್​ ಹಿಂದಿದ್ದಾರೆ ಸೂಪರ್​ ಸ್ಟಾರ್ಸ್

ಪ್ರತಿ ಐಪಿಎಲ್ ಟೀಮ್​​, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತೆ. ಯುಟ್ಯೂಬ್, ಇನ್​ಸ್ಟಾ, ಫೇಸ್​ಬುಕ್, ಎಕ್ಸ್​ನಲ್ಲಿ ಫ್ಯಾನ್ಸ್​ನ ಎಂಗೇಜ್ ಮಾಡಿರುತ್ತವೆ. ಆ ಮೂಲಕ ಫ್ಯಾನ್ಸ್​ನ ಸೆಳೆಯುತ್ತವೆ. ಈ ವಿಚಾರದಲ್ಲಿ ಅಭಿಮಾನಿಗಳನ್ನು ಸೆಳೆದಿರುವುದು ಸೂಪರ್ ಸ್ಟಾರ್​​ಗಳನ್ನೇ ಹೊಂದಿರುವ ತಂಡಗಳೇ ಆಗಿವೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​​ ಟಾಪ್​​-2 ಟೀಮ್ಸ್​ ಅನ್ನೋದ್ರಲ್ಲಿ ಡೌಟಿಲ್ಲ. ಮೊದಲ ಎರಡು ಸ್ಥಾನಗಳಲ್ಲಿರುವ ಮುಂಬೈ, ಆರ್​ಸಿಬಿ ತಂಡಗಳಲ್ಲಿ ರೋಹಿತ್, ವಿರಾಟ್, ಹಾರ್ದಿಕ್, ಸೂರ್ಯಕುಮಾರ್​, ಬೂಮ್ರಾರಂಥ ಬಿಗ್ ಸ್ಟಾರ್ಸ್ ಇದ್ದಾರೆ. ಸಹಜವಾಗಿಯೇ ಫ್ಯಾನ್ಸ್ ಗಮನ ಸೆಳೆಯುತ್ತದೆ. ವಿಡಿಯೋಗಳ ವೀವ್ಸ್ ಕೂಡ ಹೆಚ್ಚಾಗುತ್ತದೆ.

Advertisment

ಇದನ್ನೂ ಓದಿ: ಬ್ರಹ್ಮಪುತ್ರ ನದಿಗೆ ಮತ್ತೊಂದು ಮೆಗಾ ಡ್ಯಾಮ್ ನಿರ್ಮಾಣಕ್ಕೆ ಚೀನಾ ಚಾಲನೆ.. ಡ್ರ್ಯಾಗನ್ ಡ್ಯಾಮ್ ಕಿರಿಕ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment