/newsfirstlive-kannada/media/post_attachments/wp-content/uploads/2025/05/MI-VS-GT-IPL-1.jpg)
IPL ರೋಚಕ ಹಣಾಹಣಿಯಲ್ಲಿ RCBಗೆ ಕಪ್ ಗೆಲ್ಲಲು ಇನ್ನೊಂದೇ ಮೆಟ್ಟಿಲು ಬಾಕಿ ಇದೆ. ಸೀಸನ್ 18 ಅಲ್‌ಮೋಸ್ಟ್ ಮುಕ್ತಾಯದ ಹಂತಕ್ಕೆ ಬಂದಿದ್ದು, ಕ್ಲೈಮ್ಯಾಕ್ಸ್‌ನಲ್ಲಿ ಕಪ್ ಗೆಲ್ಲೋ ರೇಸ್‌ನಲ್ಲಿ 3 ತಂಡಗಳು ಜಿದ್ದಿಗೆ ಬಿದ್ದಿವೆ. ಇಂದು ಗೆದ್ದ ತಂಡ ಕ್ವಾಲಿಫೈಯರ್ 2 ಪಂದ್ಯದಲ್ಲೂ ಗೆಲ್ಲಲೇಬೇಕು. ಅದಾದ ಮೇಲೆ RCBಗೆ ಫೈನಲ್ ಸವಾಲು ಎದುರಾಗಲಿದೆ.
IPL ಸೀಸನ್ 18ರ ಎಲಿಮಿನೇಟರ್ ಪಂದ್ಯ ಕೂಡ ರೋಚಕ ಹಣಾಹಣಿಗೆ ಸಾಕ್ಷಿಯಾಗಿದೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರೋಹಿತ್ ಶರ್ಮಾ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಮುಂಬೈ ತಂಡ ಗುಜರಾತ್ ಟೈಟಾನ್ಸ್‌ಗೆ ಬಿಗ್ ಟಾರ್ಗೆಟ್ ನೀಡುವಲ್ಲಿ ಯಶಸ್ವಿಯಾಗಿದೆ. ಟಾರ್ಗೆಟ್ ಜೊತೆಗೆ ಉತ್ತಮ ಬೌಲಿಂಗ್ ಪ್ರದರ್ಶನದೊಂದಿಗೆ ಮುಂಬೈ ಇಂಡಿಯನ್ಸ್ 20 ರನ್‌ಗಳಿಂದ ಗೆದ್ದು ಬೀಗಿದೆ.
ನಾಯಕ ಹಾರ್ದಿಕ್ ಪಾಂಡ್ಯ ನಿರೀಕ್ಷೆಯಂತೆ ಮುಂಬೈ ಇಂಡಿಯನ್ಸ್‌ಗೆ ಉತ್ತಮ ಆರಂಭವೇ ಸಿಕ್ಕಿದೆ. ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿದ ರೋಹಿತ್ ಶರ್ಮಾ ಅವರು ಗುಜರಾತ್ ಬೌಲರ್‌ಗಳನ್ನ ಮನಬಂದಂತೆ ದಂಡಿಸಿದರು.
ಅರ್ಧ ಶತಕ ಸಿಡಿಸಿದ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ಉತ್ತಮ ಸ್ಕೋರ್ ಕಲೆ ಹಾಕಲು ನೆರವಾಗದರು 50 ಬಾಲ್‌ಗಳನ್ನು ಎದುರಿಸಿದ ರೋಹಿತ್ ಶರ್ಮಾ, 4 ಸಿಕ್ಸರ್, 9 ಬೌಂಡರಿಗಳನ್ನು ಸಿಡಿಸಿದರು. 81 ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರು ಪ್ರಸಿದ್ಧ್ ಕೃಷ್ಣ ಅವರಿಗೆ ಔಟ್ ಆದರು. ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿ ಗುಜರಾತ್ ಟೈಟನ್ಸ್‌ಗೆ ಬಿಗ್ ಟಾರ್ಗೆಟ್ ಮುಂದಿಟ್ಟಿತು.
229 ರನ್‌ಗಳ ಟಾರ್ಗೆಟ್ ಗುಜರಾತ್ ಟೈಟನ್ಸ್‌ಗೆ ಅತಿ ದೊಡ್ಡ ಸವಾಲಾಗಿತ್ತು. ಆರಂಭದಲ್ಲಿ ಶುಭ್ಮನ್ ಗಿಲ್ ಔಟ್ ಆಗೋ ಮೂಲಕ ಆಘಾತಕ್ಕೆ ಒಳಗಾಯಿತು. ಗುಜರಾತ್ ಒತ್ತಡದಲ್ಲಿ ಇದ್ದರೂ ಸಾಯಿ ಸುದರ್ಶನ್ ತಂಡಕ್ಕೆ ಆಸರೆಯಾದರು. ಅರ್ಧ ಶತಕ ಬಾರಿಸಿದ ಸಾಯಿ ಸುದರ್ಶನ್ ಅವರು ಬರೋಬ್ಬರಿ 10 ಬೌಂಡರಿಗಳ ನೆರವಿನಿಂದ 80 ರನ್‌ಗಳ ಕಾಣಿಕೆ ನೀಡಿದರು.
ಸಾಯಿ ಸುದರ್ಶನ್ ಅವರು ಔಟ್ ಆಗುತ್ತಿದ್ದಂತೆ ಗುಜರಾತ್ ಟೈಟಾನ್ಸ್ ಟೆನ್ಷನ್ ಹೆಚ್ಚಾಯಿತು. ಕೊನೇ ಓವರ್‌ವರೆಗೂ ಗೆಲ್ಲಲು 2 ತಂಡಗಳ ಹೋರಾಟ ರೋಚಕವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಎಡವಿದ ಗುಜರಾತ್ ಐಪಿಎಲ್ ಟೂರ್ನಿಯಿಂದ ಔಟ್ ಆಗಿದೆ. ಮುಂಬೈ ಇಂಡಿಯನ್ಸ್ 20 ರನ್ಸ್‌ಗಳಿಂದ ಗೆಲುವು ಸಾಧಿಸಿದೆ.
ಇಂದು ಗೆದ್ದ ಮುಂಬೈ ಇಂಡಿಯನ್ಸ್ ಭಾನುವಾರ ಅಂದ್ರೆ ಜೂನ್ 1ಕ್ಕೆ ಕ್ವಾಲಿಫೈಯರ್ 2 ಪಂದ್ಯ ಆಡಬೇಕು. ಟೇಬಲ್ ಟಾಪರ್ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಗೆದ್ದವರು ಜೂನ್ 3ರಂದು ಆರ್‌ಸಿಬಿ ವಿರುದ್ಧ ಸೆಣಸಾಡಲಿದ್ದಾರೆ.
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ಸೋಲಿಗೆ ಮೂರು ಮುಖ್ಯ ಕಾರಣಗಳು.. ಇನ್ನೂ ಇದೆ ಒಂದು ಅವಕಾಶ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ