newsfirstkannada.com

×

ರೀಟೈನ್​ ಪಾಲಿಸಿಯಲ್ಲಿ ಭಾರೀ ಬದಲಾವಣೆ; ಮುಂಬೈ ಉಳಿಸಿಕೊಳ್ಳೋ ಆಟಗಾರರು ಇವರೇ!

Share :

Published September 28, 2024 at 7:58pm

Update September 28, 2024 at 8:05pm

    ಇಂಡಿಯನ್​​ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡ MI

    ಬರೋಬ್ಬರಿ 5 ಬಾರಿ ಐಪಿಎಲ್​ ಕಪ್​ ಗೆದ್ದಿರೋ ಮುಂಬೈ ಇಂಡಿಯನ್ಸ್​ ಟೀಮ್​​​

    ಮುಂದಿನ ಸೀಸನ್​​ಗೆ ಮುಂಬೈ ರೀಟೈನ್​ ಮಾಡಿಕೊಳ್ಳೋ ಆಟಗಾರರು ಇವರೇ

ಇಂಡಿಯನ್​​ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್​​. ಬರೋಬ್ಬರಿ 5 ಬಾರಿ ಐಪಿಎಲ್​ ಕಪ್​ ಗೆದ್ದಿದೆ. ಕಳೆದ ಸೀಸನ್​​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್​ ಮುಂದಿನ ಸೀಸನ್​ ಗೆಲ್ಲಲೇಬೇಕು ಎಂದು ಪಣತೊಟ್ಟಿದೆ. ಹಾಗಾಗಿ ಈ ತಂಡ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಬಗ್ಗೆ ಕುತೂಹಲ ಮನೆ ಮಾಡಿವೆ.

2024ರ ಐಪಿಎಲ್​ಗಾಗಿ ತಂಡಕ್ಕೆ 5 ಬಾರಿ ಕಪ್​ ಗೆಲ್ಲಿಸಿಕೊಟ್ಟಿದ್ದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ಸಿ ಪಟ್ಟ ಕಟ್ಟಿತ್ತು. ಮುಂಬೈ ಇಂಡಿಯನ್ಸ್​ ಕಳೆದ ಸೀಸನ್​ನಲ್ಲಿ ಹಾರ್ದಿಕ್​ ಪಾಂಡ್ಯ ನೇತೃತ್ವದಲ್ಲಿ ಹೀನಾಯ ಪ್ರದರ್ಶನ ನೀಡಿತ್ತು. ಹಾಗಾಗಿ ಹರಾಜಿಗೂ ಮುನ್ನ ಹಾರ್ದಿಕ್‌ ಅವರನ್ನು ಮುಂಬೈ ಉಳಿಸಿಕೊಳ್ಳುವುದಾ ಎಂಬ ಪ್ರಶ್ನೆಗಳು ಎದ್ದಿವೆ.

ಸದ್ಯ ವರದಿಯಾಗಿರೋ ಪ್ರಕಾರ ರಿಟೇನ್ಶನ್‌ ನಿಯಮಗಳಲ್ಲಿ ಭಾರೀ ಬದಲಾವಣೆ ಆಗಲಿದೆ. ಕೇವಲ 5 ಮಂದಿ ಆಟಗಾರರನ್ನು ಉಳಿಸಿಕೊಳ್ಳಲು ಐಪಿಎಲ್​ ತಂಡಗಳಿಗೆ ಬಿಸಿಸಿಐ ಅವಕಾಶ ನೀಡುವ ಸಾಧ್ಯತೆ ಇದೆ.

ಮುಂಬೈನಿಂದ ಯಾರಿಗೆ ಮಣೆ?

ಮುಂಬೈ ಇಂಡಿಯನ್ಸ್​ ತಂಡವನ್ನು ಕಾಡುತ್ತಿರೋ ಒಂದೇ ಒಂದು ಪ್ರಶ್ನೆ ಅದು ಯಾರನ್ನು ಉಳಿಸಿಕೊಳ್ಳಬೇಕು ಎಂಬುದು. ಐಪಿಎಲ್‌ 2024ರ ಹರಾಜಿಗೂ ಮುನ್ನ ಗುಜರಾತ್ ಟೈಟನ್ಸ್‌ನಿಂದ ಟ್ರೇಡ್ ಮಾಡಿಕೊಂಡ ಹಾರ್ದಿಕ್ ಪಾಂಡ್ಯ ಹಾಗೂ ತಂಡದ ಯಶಸ್ವಿ ನಾಯಕ ರೋಹಿತ್ ಶರ್ಮಾ ಇಬ್ಬರನ್ನು ಉಳಿಸಿಕೊಳ್ಳಬೇಕಾದ ಅಗತ್ಯ ಇದೆ. ಇತ್ತೀಚೆಗಷ್ಟೇ ಕ್ಯಾಪ್ಟನ್​ ರೋಹಿತ್​ ಶರ್ಮಾ ನಾಯಕತ್ವದಲ್ಲಿ ಟೀಮ್​​ ಇಂಡಿಯಾ ಟಿ20 ವಿಶ್ವಕಪ್​ ಗೆದ್ದಿದೆ. ಇವರ ಜತೆಗೆ ಜಸ್ಪ್ರೀತ್​​ ಬುಮ್ರಾ, ಇಶಾನ್​ ಕಿಶನ್​ ಹಾಗೂ ಸೂರ್ಯಕುಮಾರ್​ ಯಾದವ್​ ಅವರನ್ನು ಉಳಿಸಿಕೊಳ್ಳಲು ಮುಂಬೈ ಪ್ಲಾನ್​ ಮಾಡಿದೆ.

ಇದನ್ನೂ ಓದಿ: ಯುವ ಬ್ಯಾಟರ್​​ಗೆ ರಸ್ತೆ ಅಪಘಾತ; ಟೀಮ್​ ಇಂಡಿಯಾಗೆ ಬಿಗ್​ ಶಾಕ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೀಟೈನ್​ ಪಾಲಿಸಿಯಲ್ಲಿ ಭಾರೀ ಬದಲಾವಣೆ; ಮುಂಬೈ ಉಳಿಸಿಕೊಳ್ಳೋ ಆಟಗಾರರು ಇವರೇ!

https://newsfirstlive.com/wp-content/uploads/2024/09/Mumbai-Indians_News.jpg

Load More