ರೋಹಿತ್ ವಿಫಲ, ತಿಲಕ್ ಮಿಂಚಿನ ಬ್ಯಾಟಿಂಗ್​.. ಡೆಲ್ಲಿ ಮುಂದಿದೆ ಬಿಗ್​ ಚಾಲೆಂಜ್​, ಟಾರ್ಗೆಟ್ ಎಷ್ಟು?

author-image
Bheemappa
Updated On
ರೋಹಿತ್ ವಿಫಲ, ತಿಲಕ್ ಮಿಂಚಿನ ಬ್ಯಾಟಿಂಗ್​.. ಡೆಲ್ಲಿ ಮುಂದಿದೆ ಬಿಗ್​ ಚಾಲೆಂಜ್​, ಟಾರ್ಗೆಟ್ ಎಷ್ಟು?
Advertisment
  • ಬ್ಯಾಟಿಂಗ್​ನಲ್ಲಿ ಮತ್ತೆ ಎಡವಿದ ಓಪನರ್ ರೋಹಿತ್ ಶರ್ಮಾ
  • ರಯಾನ್ ರಿಕೆಲ್ಟನ್ ಬ್ಯಾಟಿಂಗ್​ನಿಂದ ಮುಂಬೈಗೆ ಒಳ್ಳೆ ಆರಂಭ
  • ಬ್ಯಾಟಿಂಗ್​ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ, ರೋಹಿತ್ ವಿಫಲ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತದ ಟಾರ್ಗೆಟ್ ನೀಡಿದೆ. ತಿಲಕ್ ವರ್ಮಾ ಅವರ ಅಮೋಘ ಅರ್ಧಶತಕದಿಂದ 20 ಓವರ್​ಗಳಲ್ಲಿ 206 ರನ್​ಗಳ ಗುರಿಯನ್ನು ಡೆಲ್ಲಿ ತಂಡಕ್ಕೆ ನೀಡಿದೆ. ​

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕ ಅಕ್ಷರ್ ಪಟೇಲ್ ಅವರು, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮುಂಬೈ ಇಂಡಿಯನ್ಸ್​ ಪರ ಆರಂಭಿಕರಾಗಿ ಕಣಕ್ಕಿಳದ ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಓಪನಿಂಗ್​​ನಲ್ಲೇ ಆಘಾತ ಅನುಭವಿಸಿದರು. ರೋಹಿತ್ ಶರ್ಮಾ ವಿಫಲ ಬ್ಯಾಟಿಂಗ್ ಮತ್ತೆ ಮುಂದುವರೆಯಿತು. ಹೀಗಾಗಿ 18 ರನ್​ ಗಳಿಸಿ ಆಡುವಾಗ ವಿಪ್ರಜ್ ನಿಗಮ್ ಅವರ ಬೌಲಿಂಗ್​ನಲ್ಲಿ ಎಲ್​ಬಿಗೆ ಬಲಿಯಾದರು.

ಇದನ್ನೂ ಓದಿ:ಆರ್​ಆರ್​ಗೆ ಕಹಿ, RCBಗೆ ಸಿಹಿ.. ತವರಿನ ಸೋಲಿನ ಬೆನ್ನಲ್ಲೇ ಬೆಂಗಳೂರು ಜಯಭೇರಿ

publive-image

ರೋಹಿತ್ ಬಳಿಕ ಸೂರ್ಯಕುಮಾರ್​ ಬ್ಯಾಟಿಂಗ್​ಗೆ ಬಂದರು. ಇತ್ತ ಹೊಡಿಬಡಿ ಬ್ಯಾಟಿಂಗ್ ಮುಂದುವರೆಸಿದ್ದ ರಯಾನ್ ರಿಕೆಲ್ಟನ್ ಕೇವಲ 25 ಎಸೆತಗಳಲ್ಲಿ 5 ಫೋರ್, 2 ಸಿಕ್ಸರ್​ನಿಂದ 41 ರನ್​ ಗಳಿಸಿದ್ದರು. ಈ ವೇಳೆ ಕುಲ್​ದೀಪ್​ ಬೌಲಿಂಗ್​ನಲ್ಲಿ ಬೋಲ್ಡ್​ ಆಗಿ ಹೊರ ನಡೆದರು. ಇವರ ಬಳಿಕ ಕ್ರೀಸ್​ಗೆ ಬಂದ ತಿಲಕ್ ವರ್ಮಾ ಮೊದಲು ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ಮಾಡಿದರು.

ಸೂರ್ಯಕುಮಾರ್​ 28 ಎಸೆತಗಳಲ್ಲಿ 40 ರನ್​ ಚಚ್ಚಿ, ಕುಲ್​ದೀಪ್​ ಬೌಲಿಂಗ್​ನಲ್ಲಿ ಔಟ್ ಆದರು. ನಾಯಕ ಹಾರ್ದಿಕ್ ಪಾಂಡ್ಯ (2) ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ತಿಲಕ್ ವರ್ಮಾ 27 ಬಾಲ್​ಗಳಲ್ಲಿ 5 ಬೌಂಡರಿ, 3 ಸಿಕ್ಸರ್​ಗಳಿಂದ 50 ರನ್​ ಗಳಿಸಿದರು. ಆದರೆ 59 ರನ್​ ವೇಳೆ ತಿಲಕ್​ ಕ್ಯಾಚ್ ನೀಡಿ ಹೊರ ನಡೆದರು.

ಕೊನೆಯಲ್ಲಿ ನಮನ್ ಧೀರ್ ಅವರ ಅತ್ಯದ್ಭುತವಾದ ಬ್ಯಾಟಿಂಗ್ ಮಾಡಿ, ಕೇವಲ 17 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್​ನಿಂದ 38 ರನ್ ಚಚ್ಚಿದರು. ಹೀಗಾಗಿ ಮುಂಬೈ ಇಂಡಿಯನ್ಸ್​ 20 ಓವರ್​ಗಳಲ್ಲಿ 5 ವಿಕೆಟ್​ಗೆ 206 ರನ್​ಗಳ ಟಾರ್ಗೆಟ್ ನೀಡಿದೆ. ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment