/newsfirstlive-kannada/media/post_attachments/wp-content/uploads/2025/04/MUMBAI_TEAM.jpg)
ಇಂಡಿಯನ್ ಪ್ರೀಮಿಯರ್ ಲೀಗ್ ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದು ಯಶಸ್ವಿಯಾಗಿ ಸಾಗುತ್ತಿದೆ. ಭಾರತದಲ್ಲಿ ಐಪಿಎಲ್ ಆರಂಭವಾಗಿ ಕೆಲವು ದಿನಗಳು ಕಳೆದಿವೆ. ಇದೇ ಸಮಯದಲ್ಲಿ ಪಾಕ್ನಲ್ಲೂ 2025ರ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್) ಏಪ್ರಿಲ್ 11 ರಿಂದ ಕಿಕ್ ಸ್ಟಾರ್ಟ್ ಪಡೆದುಕೊಂಡಿದೆ. ಇದರ ಮಧ್ಯೆ ಪಿಎಸ್ಎಲ್ನಿಂದ ಐಪಿಎಲ್ಗೆ ಬಂದಿರುವ ಆಲ್ರೌಂಡರ್ ಒಬ್ಬರನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಬ್ಯಾನ್ ಮಾಡಿದೆ.
ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕಾರ್ಬಿನ್ ಬಾಷ್ (Corbin Bosch) ಅವರು ಪಿಎಸ್ಎಲ್ಗೆ ಗುಡ್ಬೈ ಹೇಳಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಎಂಟ್ರಿ ಕೊಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಸೌತ್ ಆಫ್ರಿಕಾದ ಪೇಸ್ ಬೌಲರ್ ಲಿಜಾಡ್ ವಿಲಿಯಮ್ಸ್ ಇಂಜುರಿಗೆ ಒಳಗಾಗಿದ್ದಾರೆ. ಹೀಗಾಗಿ ಲಿಜಾಡ್ ಇಂಜುರಿಯಿಂದ ಖಾಲಿ ಆಗಿದ್ದ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕಾರ್ಬಿನ್ ಬಾಷ್ಗೆ ಸ್ಥಾನ ನೀಡಲಾಗಿದೆ.
ಇದನ್ನೂ ಓದಿ:IPLನಲ್ಲಿ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ.. ಯಂಗ್ ಪ್ಲೇಯರ್ಗೆ ಬ್ಯಾನ್ ಭೀತಿನಾ?
2025ರ ಪಿಎಸ್ಎಲ್ನ ಮೆಗಾ ಆಕ್ಷನ್ ವೇಳೆ ಕಾರ್ಬಿನ್ ಬಾಷ್ ಅವರನ್ನು ಡೈಮೆಂಡ್ ವಿಭಾಗದಲ್ಲಿ ಬಾಬರ್ ಅಜಮ್ ನೇತೃತ್ವದ ಪೇಶಾವರ್ ಝಲ್ಮಿ ತಂಡದ ಫ್ರಾಂಚೈಸಿ ಖರೀದಿ ಮಾಡಿತ್ತು. ಆದರೆ ಕಾರ್ಬಿನ್ ಬಾಷ್, ಪಿಎಸ್ಎಲ್ನ ನಿಯಮಗಳನ್ನು ಗಾಳಿಗೆ ತೂರಿ ಐಪಿಎಲ್ನ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದರಿಂದ ಬೇಸರಗೊಂಡಿರುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕಾರ್ಬಿನ್ ಬಾಷ್ಗೆ ಒಂದು ವರ್ಷದವರೆಗೆ ಬ್ಯಾನ್ ಮಾಡಿದೆ. ಅಂದರೆ ಮುಂದಿನ ವರ್ಷದ ಪಿಎಸ್ಎಲ್ನಲ್ಲಿ ಬಾಷ್ ಆಯ್ಕೆಗೆ ಅನರ್ಹರು ಎಂದು ಹೇಳಿದೆ. ಇನ್ನು ಈ ಮಾಹಿತಿ ತಿಳಿಯುತ್ತಿದ್ದಂತೆ ಬಾಷ್ ಅವರು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ಗೆ ಹಾಗೂ ಬಾಬರ್ ಅಜಮ್ ನೇತೃತ್ವದ ಪೇಶಾವರ್ ಝಲ್ಮಿ ತಂಡದ ಅಭಿಮಾನಿಗಳಿಗೆ ಕ್ಷಮೆಯಾಚನೆ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ