IPL 2025: ಆರ್​​ಸಿಬಿಯ ಈ ಸ್ಟಾರ್​​ ಆಟಗಾರನ ಸ್ಥಾನ ತುಂಬಲಿದ್ದಾರಾ ಮುಂಬೈ ಬ್ಯಾಟರ್​​?

author-image
Ganesh Nachikethu
Updated On
ಈ ಆಟಗಾರ ಬೇಡವೇ ಬೇಡ ಎಂದ ಫ್ಯಾನ್ಸ್​.. ಮೆಗಾ ಹರಾಜಿಗೂ ಮುನ್ನ RCB ಇವರನ್ನು ಉಳಿಸಿಕೊಳ್ಳೋದು ಡೌಟ್..!
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​​ ಪ್ರೀಮಿಯರ್​ ಲೀಗ್​ಗೆ ತಯಾರಿ
  • ಐಪಿಎಲ್​​​ ಟೂರ್ನಿ ಆರಂಭಕ್ಕೂ ಮುನ್ನ ನಡೆಯಲಿದೆ ಮೆಗಾ ಹರಾಜು
  • ಐಪಿಎಲ್​ ತಂಡಗಳಿಗೆ 4 ಆಟಗಾರರ ರೀಟೈನ್​ಗೆ ಮಾತ್ರ ಅವಕಾಶ!

ಬಹುನಿರೀಕ್ಷಿತ 2025ರ ಇಂಡಿಯನ್​​ ಪ್ರೀಮಿಯರ್​ ಲೀಗ್ ಭಾರೀ ಕುತೂಹಲ ಮೂಡಿಸಿದೆ. ಐಪಿಎಲ್​​​ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಈ ವರ್ಷ ಎಲ್ಲಾ ಐಪಿಎಲ್​ ತಂಡಗಳಿಗೂ ಕೇವಲ 4 ಆಟಗಾರರನ್ನು ಮಾತ್ರ ರೀಟೈನ್​ ಮಾಡಿಕೊಳ್ಳಲು ಅವಕಾಶ ಇದೆ ಎಂದು ವರದಿಯಾಗಿದೆ.

ಇನ್ನು, ವರ್ಷದ ಕೊನೆಯಲ್ಲಿ ನಡೆಯಲಿರೋ ಮೆಗಾ ಆಕ್ಷನ್​​ನಲ್ಲಿ ಎಲ್ಲಾ ತಂಡಗಳು ಸ್ಟಾರ್​ ಆಟಗಾರರನ್ನು ಖರೀದಿ ಮಾಡಲು ಭಾರೀ ಸರ್ಕಸ್​ ನಡೆಸುತ್ತಿವೆ. ಯಾವ ಆಟಗಾರರನ್ನು ರೀಟೈನ್​ ಮಾಡಿಕೊಳ್ಳಬೇಕು ಎಂದು ಐಪಿಎಲ್​ ಮಾಲೀಕರು ಅಳೆದು ತೂಗಿ ನಿರ್ಧಾರಕ್ಕೆ ಬರಲಿವೆ. ಮುಂಬೈ ಇಂಡಿಯನ್ಸ್​ ಕೂಡ ಅದೇ ಕೆಲಸದಲ್ಲಿ ತೊಡಗಿದೆ.

publive-image

ಇಶಾನ್​ ಕಿಶನ್​ಗೆ ಕೊಕ್​​..!

ಮುಂಬೈ ಇಂಡಿಯನ್ಸ್​ ತಂಡದ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​ ಇಶಾನ್​ ಕಿಶನ್​​. ಕಳೆದ ಸೀಸನ್​​ನಲ್ಲಿ ತಾನು ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಿಲ್ಲ. ಎಷ್ಟೋ ಪಂದ್ಯಗಳಲ್ಲಿ ಇಶಾನ್​​ ಕಿಶನ್​​ ಡಕೌಟ್​ ಕೂಡ ಆಗಿದ್ದರು. ಹಾಗಾಗಿ ಈ ವರ್ಷ ಇಶಾನ್​ ಕಿಶನ್​ ಅವರನ್ನು ಮುಂಬೈ ಇಂಡಿಯನ್ಸ್​ ರಿಲೀಸ್​ ಮಾಡುವ ಸಾಧ್ಯತೆ ಇದೆ.

ಇದರ ಬೆನ್ನಲ್ಲೇ ರಾಯಲ್‌ ಚಾಲೆಂಜರ್ಸ‌ ಬೆಂಗಳೂರು ತಂಡ ಇಶಾನ್‌ ಕಿಶಾನ್‌ ಅವರನ್ನು ಬಿಡ್‌ ಮಾಡಲು ತಯಾರಿ ನಡೆಸಿಕೊಂಡಿದೆ. 2024ರ ಐಪಿಎಲ್‌ ಬಳಿಕ ಆರ್‌ಸಿಬಿ ಸ್ಟಾರ್​ ಫಿನಿಶರ್​ ದಿನೇಶ್ ಕಾರ್ತಿಕ್ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ರು. ಹೀಗಾಗಿ ಆರ್‌ಸಿಬಿ ಯುವ ಬ್ಯಾಟರ್ ಮತ್ತು ವಿಕೆಟ್‌ ಕೀಪರ್‌ ಹುಡುಕಾಟದಲ್ಲಿದೆ. ಇದರ ಭಾಗವಾಗಿ ಇಶಾನ್‌ ಕಿಶನ್​ ಖರೀದಿಗೆ ಮಾಸ್ಟರ್​ ಪ್ಲಾನ್​ ರೂಪಸಿದೆ.

ಇದನ್ನೂ ಓದಿ:IPL 2025; ಶಾರುಖ್​​ ಖಾನ್- ಪಂಜಾಬ್​ ತಂಡದ ಓನರ್ ಮಧ್ಯೆ ಭಾರೀ ಗಲಾಟೆ.. ಯಾಕೆ ಗೊತ್ತಾ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment