newsfirstkannada.com

ಮುಂಬೈ ತಂಡಕ್ಕೆ ಬಿಗ್​ ಶಾಕ್​! ತಂಡ ತೊರೆಯಲು ನಿರ್ಧರಿಸಿದ ರೋಹಿತ್​, ಸೂರ್ಯ, ಬೂಮ್ರಾ?

Share :

Published May 21, 2024 at 8:16am

    ಮುಂಬೈ ತಂಡದಲ್ಲಿ ಶುರುವಾಗಿದೆಯ ಭಿನ್ನಾಭಿಪ್ರಾಯ?

    ರೋಹಿತ್​, ಬೂಮ್ರಾ, ಸೂರ್ಯರವರ ಈ ನಿರ್ಧಾರ ಸರಿಯೇ?

    ಮುಂಬೈಗೆ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್ಸ್​? ಹೀಗಾದ್ರೆ ಮುಂದೇನು?

ಮುಂಬೈ ತಂಡ 2024ರ ಬಾರಿಯ ಐಪಿಎಲ್​ನಲ್ಲಿ ಹೀನಾಯ ಸೋಲು ಕಂಡು ತವರು ಸೇರಿದೆ. 14 ಪಂದ್ಯದಲ್ಲಿ 10 ಪಂದ್ಯ ಸೋಲುಂಡು ರೇಸ್​ನಿಂದ ಹೊರಗುಳಿದಿದೆ. ಆದರೀಗ ಮುಖೇಶ್​ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಮಾತುಗಳು ಹರಿದಾಡುತ್ತಿದ್ದು, ಮೂವರು ಸ್ಟಾರ್​ ಪ್ಲೇಯರ್ಸ್​ ತಂಡ ತೊರೆಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಮುಂಬೈ ಇಂಡಿಯನ್ಸ್​ ತಂಡ ಈ ಬಾರಿ ರೋಹಿತ್​ ಶರ್ಮಾರನ್ನು ಉಪನಾಯಕನನ್ನಾಗಿ ಮಾಡುವ ಮೂಲಕ ಹಾರ್ದಿಕ್​ ಪಾಂಡ್ಯಗೆ ಅವಕಾಶ ಕೊಟ್ಟರು. ಆದರೆ ಈ ಸುದ್ದಿ ರೋಹಿತ್​ ಮತ್ತು ಅವರ ಅಭಿಮಾನಿಗಳನ್ನು ಕೆರಳಿಸಿತು. ಆದರೀಗ ಇದೇ ತಂಡದಲ್ಲಿ ಕೆಲ ಆಟಗಾರರು ಹೊರ ಹೋಗಲು ನಿರ್ಧಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಮುಂಬೈ ಮನವೊಲಿಸುತ್ತಿದೆಯಾ?

2025ರ ಐಪಿಎಲ್​ ಹರಾಜಿನಲ್ಲಿ ಮುಂಬೈ ತಂಡ ಕೇವಲ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳೋದು ಅವಶ್ಯಕವಾಗಿದೆ. ಅದರಲ್ಲಿ ರೋಹಿತ್​ ಶರ್ಮಾ, ಸೂರ್ಯ ಕುಮಾರ್​ ಯಾದವ್​, ಬೂಮ್ರಾ ಮತ್ತು ಹಾರ್ದಿಕ್​ ಪಾಂಡ್ಯ. ಆದರೀಗ ರೋಹಿತ್​, ಸೂರ್ಯ, ಬೂಮ್ರಾ ಈ ತಂಡದಿಂದ ಹೊರಹೋಗಲು ನಿರ್ಧಿರಿಸಿದ್ದು, ಮುಂಬೈ ತಂಡ ಅವರ ಮನತಣಿಸಲು ನಿರ್ಧರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬೂಮ್ರಾ

ಬೂಮ್ರಾ ಮುಂಬೈನ ಪ್ರಮುಖ ಬೌಲರ್​. ಅವರ ಸಂಭಾವನೆ 12 ಕೋಟಿ. ಅಗ್ರಮಾನ್ಯ ಬೌಲರ್​ ಎಂದೆನಿಸಿಕೊಂಡಿರುವ ಈ ವೇಗಿಗೆ ಉಳಿದವರಿಗಿಂತ ನೀಡುವ ಸಂಭಾವನೆ ತೀರಾ ಕಡಿಮೆ. ಹೀಗಾಗಿ ಮುಂದಿನ ವರ್ಷ ಐಪಿಎಲ್​ ಹರಾಜಿನಲ್ಲಿ ಭಾಗವಹಿಸಿದರೆ 15 ಕೋಟಿಯಿಂದ 25 ಕೋಟಿಯವರೆಗೆ ಅವರನ್ನು ಖರೀದಿಸಲು ತಂಡಗಳು ಹೋರಾಟ ನಡೆಸಲಿವೆ.

ಮತ್ತೊಂದೆಡೆ ರೋಹಿತ್​ ಬಳಿಕ ಬೂಮ್ರಾಗೆ ನಾಯಕತ್ವ ನೀಡುವ ನಿರೀಕ್ಷೆಯಿತ್ತು. ಆದರೆ ಮುಂಬೈ ತಂಡ ಹಾರ್ದಿಕ್​ಗೆ ಚಾನ್ಸ್​ ನೀಡಿದರು. ಇದರಿಂದ ಅವರು ಅತೃಪ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ತಂಡ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಸದ್ಯಕ್ಕಿಲ್ಲ ನಿವೃತ್ತಿ.. ಧೋನಿ ಅಭಿಮಾನಿಗಳಿಗೆ ಇಲ್ಲಿದೆ ಬಿಗ್ ಅಪ್​ಡೇಟ್ಸ್..!

ಸೂರ್ಯ

ವಿಶ್ವದ ನಂಬರ್​ ಒನ್​ ಟಿ20 ಬ್ಯಾಟ್ಸ್​ಮನ್​ ಸೂರ್ಯ ಕುಮಾರ್​ ಯಾದವ್​ಗೆ ಮುಂಬೈ ನೀಡುತ್ತಿರುವ ಸಂಭಾವನೆ ತೀರಾ ಕಡಿಮೆ. 8 ಕೋಟಿ ಅವರಿಗೆ ನೀಡುತ್ತಿದೆ. ಹೀಗಾಗಿ ಹರಾಜಿನಲ್ಲಿ ಭಾಗವಹಿಸಿದರೆ ಹೆಚ್ಚಿನ ಸಂಭಾವನೆ ಪಡೆಯುವ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ತಂಡದಿಂದ ಹೊರ ಹೋಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರೋಹಿತ್​ ಶರ್ಮಾ

ಇನ್ನು ರೋಹಿತ್​ ಬಗ್ಗೆ ಹೇಳಬೇಕಾಗಿಲ್ಲ. ನಾಯಕತ್ವದ ಕೈತಪ್ಪಿದ್ದಲ್ಲಿ ಅಸಮಾಧಾನವಿದೆ. ಮಾತ್ರವಲ್ಲದೆ ಇತ್ತೀಚೆಗೆ ತಂಡ ಮತ್ತು ಡ್ರೆಸ್ಸಿಂಗ್​ ರೂಂನಲ್ಲಿ ಏನು ನಡೆಯುತ್ತದೆ ಎಂಬ ಬಗ್ಗೆ ಮಾತನಾಡಿರುವ ಸಂಗತಿ ಕೂಡ ವೈರಲ್​ ಆಗಿತ್ತು. ಹಾಗಾಗಿ ರೋಹಿತ್​ ತಂಡದಿಂದ ಹೊರಬಂದರೆ ಮುಂದಿನ ವರ್ಷ ಬೇರೆ ತಂಡಗಳು ಖರೀದಿ ಮಾಡಬಹುದು ಎಂಬ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Rain Effects: ರಾಜ್ಯದಲ್ಲಿ ಮುಂದುವರೆದ ಮಳೆ ಆರ್ಭಟ, ಸಾಲು ಸಾಲು ಸಂಕಷ್ಟ

ಆದರೆ ಈ ಮೂವರು ಆಟಗಾರರು ನಿಜವಾಗಿಗೂ ತಂಡದಿಂದ ಹೋರಹೋಗುತ್ತಿದ್ದಾರಾ? ಮುಂಬೈ ತಂಡ ಇವರನ್ನು ಉಳಿಸಲು ಶತ ಪ್ರಯತ್ನ ಮಾಡುತ್ತಿದೆಯಾ? ಇವೆಲ್ಲಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮುಂಬೈ ತಂಡಕ್ಕೆ ಬಿಗ್​ ಶಾಕ್​! ತಂಡ ತೊರೆಯಲು ನಿರ್ಧರಿಸಿದ ರೋಹಿತ್​, ಸೂರ್ಯ, ಬೂಮ್ರಾ?

https://newsfirstlive.com/wp-content/uploads/2024/05/Rohit-sharma-5.jpg

Load More