ಬಲಿಷ್ಠ ಹೈದ್ರಾಬಾದ್​ ಟೀಮ್​ಗೆ ಮುಂಬೈ ಶಾಕ್​.. ಬಿಗ್​​ ಬ್ಯಾಟರ್​ಗಳಿದ್ರೂ ಸೋತ SRH

author-image
Bheemappa
Updated On
ಬಲಿಷ್ಠ ಹೈದ್ರಾಬಾದ್​ ಟೀಮ್​ಗೆ ಮುಂಬೈ ಶಾಕ್​.. ಬಿಗ್​​ ಬ್ಯಾಟರ್​ಗಳಿದ್ರೂ ಸೋತ SRH
Advertisment
  • ಒಂದೂ ಸಿಕ್ಸರ್​ ಕೂಡ ಬಾರಿಸದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್
  • ಪಂದ್ಯದಲ್ಲಿ ಮತ್ತೆ ವಿಫಲ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ
  • ಸನ್​ರೈಸರ್ಸ್​​ ಹೈದ್ರಾಬಾದ್​ ಕ್ಯಾಪ್ಟನ್​ ಪಂದ್ಯದಲ್ಲಿ ಭರ್ಜರಿ ಬೌಲಿಂಗ್​

ಸನ್​ರೈಸರ್ಸ್​ ಹೈದ್ರಾಬಾದ್ ತಂಡದ ವಿರುದ್ಧ ನಡೆದ ಐಪಿಎಲ್​ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಟೀಮ್ ಅಮೋಘವಾದ ಗೆಲುವು ಪಡೆದಿದೆ. ಈ ಮೂಲಕ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳ ಪೈಕಿ ಮುಂಬೈ ತಂಡ 3 ರಲ್ಲಿ ಗೆಲುವು ಸಾಧಿಸಿದಂತೆ ಆಗಿದೆ. ​

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡದ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಎದುರಾಳಿ ಹೈದ್ರಾಬಾದ್ ತಂಡವನ್ನು ಮೊದಲ ಬ್ಯಾಟಿಂಗ್​ಗೆ ಆಹ್ವಾನ ಮಾಡಿದ್ದರು. ಎಸ್​​ಆರ್​​ಹೆಚ್​ ಪರ ಓಪನರ್​ ಆಗಿ ಬ್ಯಾಟಿಂಗ್​ಗೆ ಆಗಮಿಸಿದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್​ ಹೆಡ್ ಉತ್ತಮ ಆರಂಭ ಪಡೆದರೂ ಬ್ಯಾಟಿಂಗ್​ನಲ್ಲಿ ಸುಧಾರಣೆ ಇರಲಿಲ್ಲ. ಹೀಗಾಗಿ ಅಭಿಷೇಕ್ ಶರ್ಮಾ 28 ಎಸೆತಗಳಿಗೆ 7 ಬೌಂಡರಿ ಸಮೇತ 40​, ಹೆಡ್ 28 ರನ್​ಗೆ ಔಟ್ ಆದರು.

ಇದನ್ನೂ ಓದಿ: 50 ಕೋಟಿ ರೂಪಾಯಿ ನಾಯಿ ಮಾಲೀಕನಿಗೆ ಬಿಗ್ ಶಾಕ್​.. ಲಾಕ್ ಮಾಡಿದ ED; ಅಸಲಿಗೆ ಏನಾಯಿತು?

publive-image

ಅಭಿಷೇಕ್ ಶರ್ಮಾ ನಂತರ ಕ್ರೀಸ್​ಗೆ ಬಂದಿದ್ದ ಇಶನ್ ಕಿಶನ್ 2, ನಿತೀಶ್​ ರೆಡ್ಡಿ 19, ಕ್ಲಾಸೆನ್ 37, ಅನಿಕೇತ್ ವರ್ಮಾ ಅಜೇಯ 18 ಹಾಗೂ ಪ್ಯಾಟ್ ಕಮಿನ್ಸ್ ಅಜೇಯ 8 ರನ್​ಗಳಿಂದ ಸನ್​ರೈಸರ್ಸ್​ ಹೈದ್ರಾಬಾದ್ ತಂಡ 20 ಓವರ್​ಗಳಲ್ಲಿ 5 ವಿಕೆಟ್​ಗೆ 163 ರನ್​ಗಳ ಗುರಿಯನ್ನು ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್​ ತಂಡಕ್ಕೆ ನೀಡಿತ್ತು.

163 ರನ್​ಗಳ ಟಾರ್ಗೆಟ್​ ಹಿಂದೆ ಬಿದ್ದ ಮುಂಬೈ ಇಂಡಿಯನ್ಸ್​ ತಂಡದ ಓಪನರ್​ ರೋಹಿತ್ ಶರ್ಮಾ ಮತ್ತೆ ವಿಫಲ ಬ್ಯಾಟಿಂಗ್ ಮಾಡಿದರು. 16 ಎಸೆತದಲ್ಲಿ 3 ಸಿಕ್ಸರ್​​ಗಳಿಂದ 26 ರನ್​ಗೆ ಔಟ್ ಆದರು. ಇನ್ನೊಬ್ಬ ಓಪನರ್ ರಯಾನ್ ರಿಕೆಲ್ಟನ್ 31 ರನ್​ಗೆ ಔಟ್ ಆದ್ರು. ಈ ಇಬ್ಬರು ಟ್ರಾವಿಸ್​ ಹೆಡ್​ಗೆ ಕ್ಯಾಚ್​ ಕೊಟ್ಟು ಪೆವಿಲಿಯನ್​ಗೆ ಹೆಜ್ಜೆ ಹಾಕಿದರು. ವಿಲ್​ ಜಾಕ್ಸ್​ ಸ್ವಲ್ಪ ಸಮಯ ಹೈದ್ರಾಬಾದ್ ಬೌಲರ್ಸ್​ಗಳನ್ನ ಕಾಡಿದರು. ಹೀಗಾಗಿ 26 ಎಸೆತದಲ್ಲಿ 36 ರನ್​ನಿಂದ ಬ್ಯಾಟ್ ಮಾಡುವಾಗ ಕಮಿನ್ಸ್​ ಬೌಲಿಂಗ್​​ನಲ್ಲಿ ಕ್ಯಾಚ್ ಕೊಟ್ಟರು.

ಮುಂಬೈಗೆ ಒಳ್ಳೆಯ ರನ್​ಗಳ ಕಾಣಿಕೆ ನೀಡಿದ ಸೂರ್ಯಕುಮಾರ್ ಅವರು 15 ಎಸೆತದಲ್ಲಿ 2 ಫೋರ್, 2 ಭರ್ಜರಿ ಸಿಕ್ಸರ್​​ನಿಂದ 26 ರನ್​ ಗಳಿಸಿ ಔಟ್​ ಆದರು. ನಾಯಕ ಹಾರ್ದಿಕ್ ಪಾಂಡ್ಯ 9 ಎಸೆತದಲ್ಲಿ 3 ಬೌಂಡರಿ, 1 ಸಿಕ್ಸರ್​ನಿಂದ 21 ರನ್​ ಗಳಿಸಿದ್ದಾಗ ಔಟ್ ಆದರು. ಆದರೆ ತಂಡ ಗೆಲ್ಲುವವರೆಗೆ ಕ್ರೀಸ್​ನಲ್ಲಿದ್ದ ತಿಲಕ್ ವರ್ಮಾ 2 ಫೋರ್​ ಇಂದ 21 ರನ್​ ಬಾರಿಸಿದರು. 18.1 ಎಸೆತದಲ್ಲಿ 6 ವಿಕೆಟ್​ಗೆ 166 ರನ್​ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್​ ಗೆಲುವು ಪಡೆಯಿತು. ಇದು ಈ ಟೂರ್ನಿಯಲ್ಲಿ ಮುಂಬೈಯ 3ನೇ ಗೆಲುವು ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment