RCB vs MI ಪಿಚ್ ರಿಪೋರ್ಟ್! ಗೆಲ್ಲಲು ಪಾಟೀದಾರ್ ನಿರ್ಧಾರ ಏನಾಗಿರಬೇಕು..?

author-image
Ganesh
Updated On
RCB ಕಪ್ ಗೆಲ್ಲಬೇಕಾ?; ಈ ಪ್ಲೇಯರ್ಸ್​ ರೋಲ್ ಇಂಪಾರ್ಟೆಂಟ್​.. ಇವರು ಏನೇನು ಮಾಡಬೇಕು?
Advertisment
  • ಮುಂಬೈ ಇಂಡಿಯನ್ಸ್ ವಿರುದ್ಧ ಇಂದು RCB ಪಂದ್ಯ
  • ಇಂದು ಸಂಜೆ 7.30 ರಿಂದ ಪಂದ್ಯ ಆರಂಭ ಆಗಲಿದೆ
  • ವಾಂಖೆಡೆ ಮೈದಾನದಲ್ಲಿ 117 ಐಪಿಎಲ್ ಪಂದ್ಯ ನಡೆದಿವೆ

ಐಪಿಎಲ್‌ನಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ರೋಚಕ ಪಂದ್ಯ ನಡೆಯಲಿದೆ. ಒಂದು ಕಡೆ ಕೊಹ್ಲಿ, ಇನ್ನೊಂದು ಕಡೆ ರೋಹಿತ್ ಶರ್ಮಾ! ಪಾಂಡ್ಯ ನಾಯಕತ್ವದ ತಂಡಕ್ಕೆ ಬುಮ್ರಾ ವಾಪಸ್ ಆಗಿದ್ದಾರೆ. ಆರ್​ಸಿಬಿ ವಿರುದ್ಧ ಬುಮ್ರಾ ಆಡೋದು ಪಕ್ಕಾ ಆಗಿದೆ.

ಆರ್​ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಋತುವಿನಲ್ಲಿ ಆರ್​ಸಿಬಿಗೆ ಇದು ನಾಲ್ಕನೇ ಪಂದ್ಯವಾಗಿದೆ. 3 ಪಂದ್ಯಗಳಲ್ಲಿ 2ರಲ್ಲಿ ಜಯಗಳಿಸಿದೆ. ಮುಂಬೈ ಇಂಡಿಯನ್ಸ್, 4 ಪಂದ್ಯಗಳಲ್ಲಿ ಕೇವಲ 1 ಮಾತ್ರ ಗೆದ್ದಿದೆ. ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ IPL ದಾಖಲೆಗಳು..

ಇದನ್ನೂ ಓದಿ: ಮುಂಬೈನಲ್ಲಿ ದೈತ್ಯ ಬ್ಯಾಟಿಂಗ್ ಪಡೆ.. MI ವಿರುದ್ಧ 3 ಅಸ್ತ್ರ ಪ್ರಯೋಗಿಸಲು ರಜತ್ ಪ್ಲಾನ್..!

ವಾಂಖೆಡೆ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ 117 ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡ ಹೆಚ್ಚು ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ 54 ಬಾರಿ ಗೆದ್ದರೆ, ಚೇಸಿಂಗ್ ಮಾಡಿದ ತಂಡ 63 ಬಾರಿ ಗೆಲುವು ಸಾಧಿಸಿದೆ.

  • ಟಾಸ್ ಗೆದ್ದ ತಂಡ ಗೆದ್ದಿದ್ದು - 61 ಬಾರಿ
  • ಟಾಸ್ ಸೋತ ತಂಡ ಗೆದ್ದಿದ್ದು - 56 ಬಾರಿ
  • ಅತ್ಯಧಿಕ ಸ್ಕೋರ್ - 235 (ಆರ್‌ಸಿಬಿ ಮುಂಬೈ ವಿರುದ್ಧ)
  • ಹೆಚ್ಚು ವೈಯಕ್ತಿಕ ಸ್ಕೋರ್ - ಔಟಾಗದೆ 133 (ಆರ್‌ಸಿಬಿ ಆಟಗಾರ ಎಬಿ ಡಿವಿಲಿಯರ್ಸ್-ಮುಂಬೈ ವಿರುದ್ಧ)
  • ಅತ್ಯುತ್ತಮ ಸ್ಪೆಲ್- 5/18 (ಹರ್ಭಜನ್ ಸಿಂಗ್ CSK ವಿರುದ್ಧ)

ಪಿಚ್ ರಿಪೋರ್ಟ್..!

ವಾಂಖೆಡೆ ಕ್ರೀಡಾಂಗಣ ಬೌಲರ್‌ಗಳಿಗಿಂತ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಸಹಾಯ ಸಿಗಲಿದೆ. ಸ್ಪಿನ್ನರ್​ಗಳಿಗೂ ಸಹಾಯ ಆಗಲಿದೆ. ಟಾರ್ಗೆಟ್ ಬೆನ್ನಟ್ಟುವುದು ಒಳ್ಳೆಯ ನಿರ್ಧಾರ. ಇಬ್ಬನಿ ಕೂಡ ನಿರ್ಣಾಯ ಪಾತ್ರವಹಿಸುತ್ತದೆ. ಮೊದಲು ಬ್ಯಾಟಿಂಗ್ ಮಾಡುವ ತಂಡವು 200ಕ್ಕಿಂತ ಹೆಚ್ಚು ರನ್ ಗಳಿಸಲು ಪ್ರಯತ್ನಿಸಬೇಕು. ಗುರಿ ಇದಕ್ಕಿಂತ ಕಡಿಮೆಯಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟಕರವಲ್ಲ.

ಹವಾಮಾನ..!

ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಮಳೆ ಅಡ್ಡಿಯಾಗುವುದಿಲ್ಲ. ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಮೂರನೇ ಗೆಲುವು ಎದುರು ನೋಡುತ್ತಿರುವ ಆರ್​ಸಿಬಿಗೆ ಇಂದು ಟಾಸ್​ ಗೆಲ್ಲುವ ಅನಿವಾರ್ಯತೆ ಇದೆ. ಟಾಸ್​ ಗೆದ್ದರೆ ಮಾತ್ರ ಆರ್​ಸಿಬಿ ಹೋರಾಟ ಸರಾಗವಾಗಲಿದೆ. ಒಂದು ವೇಳೆ ಟಾಸ್ ಸೋತರೆ ಮೊದಲು ಬ್ಯಾಟಿಂಗ್ ಆಯ್ಕೆ ಪಕ್ಕಾ ಆಗಲಿದೆ. ಹಾಗೇನಾದರೂ ಆದರೂ 200ಕ್ಕೂ ಹೆಚ್ಚು ಸ್ಕೋರ್​ ಮಾಡುವ ಗುರಿಯೊಂದಿಗೆ ಆರ್​ಸಿಬಿ ಬ್ಯಾಟಿಂಗ್​​ಗೆ ಬರಬೇಕಿದೆ.

ಇದನ್ನೂ ಓದಿ: Kohli vs Bumrah ಕಾಳಗ ನೋಡೋದೇ ಥ್ರಿಲ್ಲಿಂಗ್.. ಬುಮ್ರಾಗೆ ಕೊಹ್ಲಿ ಎಷ್ಟು ಬಾರಿ ಔಟ್ ಆಗಿದ್ದಾರೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment