/newsfirstlive-kannada/media/post_attachments/wp-content/uploads/2025/02/WOMEN-IPL-1.jpg)
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಐಪಿಎಲ್​ ಪಂದ್ಯದಲ್ಲಿ ಇಂದು ಬೆಂಗಳೂರು ರಾಯಲ್ ಚಾಲೆಂಜರ್ಸ್ ಮಹಿಳಾ ತಂಡ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲುನ್ನುವ ಮೂಲಕ ಹ್ಯಾಟ್ರಿಕ್ ಕನಸು ಭಗ್ನಗೊಂಡಿತು.ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಕರ್ನಾಟಕದ ಮಹಿಳಾ ಮಣಿಗಳು ಸಖತ್ ಟಕ್ಕರ್ ಕೊಟ್ಟರು. ನಾಯಕಿ ಸ್ಮೃತಿ ಮಂದಾನ ವ್ಯಾಟ್​ ಹಾಡ್ಜ್ ಬ್ಯಾಟಿಂಗ್​ಗೆ ಇಳಿದಾಗ 29 ರನ್​​ಗೆ ಒಂದು ವಿಕೆಟ್ ಕಳೆದುಕೊಂಡಿತು ಬೆಂಗಳೂರು ಆನಂತರ ಬಂದ ಎಲ್ಲಿಸ್ ಪೆರ್ರಿಬ್ಯಾಟಿಂಗ್ ಅಬ್ಬರಕ್ಕೆ ಮುಂಬೈ ಅಕ್ಷರಶಃ ನಡುಗಿ ಹೋಯ್ತು. 43 ಬಾಲ್ ಎದುರಿಸಿದ ಪೆರಿಽ 11 ಬೌಂಡರಿ ಹಾಗೂ ಎರಡು ಸಿಕ್ಸರ್​​ಗಳು ಮೂಲಕ 81 ರನ್​ಗಳಿಸಿದರು ಮತ್ತೊಂದು ಕಡೆ ಸ್ಮೃತಿ ಮಂದಾನ ಹಾಗೂ ರಿಚ್ಚಾ ಘೋಷ್ ಗಳಿಸಿದ 28 ರನ್​ಗಳು ಕೂಡ ಆರ್​ಸಿಬಿ ವುಮೆನ್​ ತಂಡದ ಮೊತ್ತವನ್ನು 167ಕ್ಕೆ ತಂದು ತಲುಪಿಸಿದವು.
/newsfirstlive-kannada/media/post_attachments/wp-content/uploads/2025/02/WOMEN-IPL.jpg)
ಇದಾದ ಬಳಿಕ ಬ್ಯಾಟಿಂಗ್​ಗೆ ಇಳಿದ ಮುಂಬೈ ತಂಡ ಆರಂಭದಲ್ಲಿಯೇ ಆಘಾತಕ್ಕೆ ಬಿತ್ತು. ತಂಡದ ಮೊತ್ತ 9 ರನ್ ಇದ್ದಾಗ ಗಾರ್ತ್​ ಬೌಲ್​ಗೆ ಎಲ್​ಬಿಡಬ್ಲ್ಯೂ ಬಲೆಗೆ ಬೀಳುವ ಮೂಲಕ ಯಾಸ್ತಿಕ್ ಭಾಟಿಯಾ ಪೆವಿಲಿಯನ್ ತಲುಪಿದರು ನಂತರ ಬಂದ ನ್ಯಾಟ್ ಸಿವಿರ್ ಬಂಟ್ ಹಾಗೂ ಹೈಲೇ ಮ್ಯಾಥೋವ್ಸ್​ 66 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. 15 ರನ್ ಹೊಡೆದ ಬಿಸ್ಟ್​ಗೆ ವಿಕೆಟ್ ಒಪ್ಪಿಸಿದ ಮ್ಯಾಥೆವ್ಸ್​ ಬಳಿಕ ಬಂದ ನಾಯಕ ಹರ್ಮನ್ ಪ್ರೀತ್ ಕೌರ್ 50 ರನ್​ಗಳನ್ನು ಹೊಡೆಯುವ ಮೂಲಕ ಗಮನ ಸೆಳೆದರು. ಗಾರ್ಜಿಯಾ ಬಾಲಿಂಗ್​ಗೆ ವಿಕೆಟ್ ಒಪ್ಪಿಸುವ ಮೂಲಕ ನಾಯಕಿ ಹರ್ಮನ್ ಪ್ರೀತ್​ ಪೆವಲಿಯನ್​ಗೆ ತೆರಳಿದರು. ಸಜೀವನ್ ಸಾಜನ್ ಕೊನೆವರೆಗೂ ಸ್ಕ್ರೀಜ್​ಗೆ ಅಂಟಿಕೊಂಡಿದ್ದರು.
ಕೊನೆಯ ಓವರ್​ನಲಲ್ಲಿ 6 ರನ್​ಗಳು ಬೇಕಿದ್ದಾಗ ಸಮಯೋಚಿತ ಆಟ ಆಡಿದ ಅಮನ್​ಜೋತ್ ಕೌರ್ ಕಾಮಾಲಿನಿ ತಂಡಕ್ಕೆ ವಿಜಯ ತಂದುಕೊಡುವಲ್ಲಿ ಯಶಸ್ವಿಯಾದರು 27 ಬಾಲ್​ಗೆ 34 ರನ್​ಗಳಿಸಿದ ಸಾಜಾನಾ 2 ಫೋರ್ ಹಾಗೂ ಎರಡು ಸಿಕ್ಸರ್ ಬಾರಿಸಿದ್ದರು. ಅವರಿಗೆ ಸಾಥ್ ಕೊಟ್ಟ ಅಮನ್ ಜೋತ್​ 11 ರನ್​ ಗಳಿಸಿ ಮುಂಬೈ ಇಂಡಿಯನ್ಸ್​ಗೆ 4 ವಿಕೆಟ್​ಗಳ ಜಯ ದೊರಕಿಸುವಲ್ಲಿ ಪ್ರಮುಖ ಪಾತ್ರವಹಿಸಿದರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us