newsfirstkannada.com

WPL 2024; ಸ್ಮೃತಿ ಮಂದಾನ ಸೇರಿ ಎಲ್ಲ ಪ್ಲೇಯರ್ಸ್​ ವಿಫಲ ಬ್ಯಾಟಿಂಗ್.. ಮುಂಬೈ ವಿರುದ್ಧ RCBಗೆ ಸೋಲು

Share :

Published March 3, 2024 at 8:54am

    ಆರ್​ಸಿಬಿ ತಂಡದ ವಿಫಲ ಬ್ಯಾಟಿಂಗ್ ಭಾರೀ ಹೊಡೆತ ಕೊಟ್ಟಿತು

    ಪಾಯಿಂಟ್ ಟೇಬಲ್​ನಲ್ಲಿ ಆರ್​ಸಿಬಿ ತಂಡದ ಸ್ಥಾನ ಯಾವುದು?

    ಕಳೆದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದ ಸ್ಮೃತಿ ವಿಫಲ

ಮಹಿಳಾ ಪ್ರೀಮೀಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲು ಕಂಡಿದೆ. ಸದ್ಯ ಎರಡು ಸೋಲು ಕಂಡ ಆರ್​ಸಿಬಿ ಪಾಯಿಂಟ್ ಟೇಬಲ್​ನಲ್ಲಿ 4ನೇ ಸ್ಥಾನದಲ್ಲಿದೆ.

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ WPL ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸ್ಮೃತಿ ಮಂದಾನ ಪಡೆ ಬ್ಯಾಟಿಂಗ್​ನಲ್ಲಿ ಯಾವುದೇ ಸುಧಾರಣೆ ಕಂಡುಕೊಳ್ಳಲಿಲ್ಲ. ಆರ್​​ಸಿಬಿ ಪರ ಓಪನರ್ ಬ್ಯಾಟ್ಸ್​​ವುಮೆನ್ಸ್ ವಿಫಲ ಬ್ಯಾಟಿಂಗ್ ಮಾಡಿದರು. ಇದೇ ತಂಡಕ್ಕೆ ಭಾರೀ ಹಿನ್ನಡೆಯಾಯಿತು ಎನ್ನಬಹುದು. ಎಲ್ಲಿಸ್ ಪೆರ್ರಿ 44, ವೇರ್ಹ್ಯಾಮ್ 27 ರನ್​ ಬಿಟ್ಟರೇ 12 ರನ್​ಗಳ ಗಡಿ ದಾಟಲಿಲ್ಲ. ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 131ರನ್​ಗಳನ್ನ ಮಾತ್ರ ಗಳಿಸಿತು. ನಾಯಕಿ ಸ್ಮೃತಿ ಮಂದಾನ, ರಿಚಾ ಘೋಷ್ ಭಾರೀ ನಿರಾಶೆ ಮೂಡಿಸಿದರು.

ಆರ್​ಸಿಬಿ ನೀಡಿದ ಸಾಧಾರಣ ಟಾರ್ಗೆಟ್ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್​ ಸುಲಭವಾಗಿಯೇ ಗುರಿ ಮುಟ್ಟಿತು. ಕ್ಯಾಪ್ಟನ್​ ಹರ್ಮನ್​ ಪ್ರೀತ್ ಕೌರ್​ ಅನುಪಸ್ಥಿತಿಯಲ್ಲೂ ಮುಂಬೈ ಓಪನರ್ಸ್​ ಭಾಟಿಯಾ 31 ಮತ್ತು ಮ್ಯಾಥ್ಯೂಸ್ 26 ಉತ್ತಮ ಆರಂಭ ಒದಗಿಸಿದರು. ಅಮೆಲಿಯಾ ಕೆರ್​ ಅಮೋಘ 40 ರನ್​ಗಳ ಆಟದಿಂದ ಮುಂಬೈ ಗೆಲುವಿನ ನಗೆ ಬೀರಿತು. ಇಂಡಿಯನ್ಸ್ 15.1 ಓವರ್​ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ ಗೆಲುವು ಸಾಧಿಸಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WPL 2024; ಸ್ಮೃತಿ ಮಂದಾನ ಸೇರಿ ಎಲ್ಲ ಪ್ಲೇಯರ್ಸ್​ ವಿಫಲ ಬ್ಯಾಟಿಂಗ್.. ಮುಂಬೈ ವಿರುದ್ಧ RCBಗೆ ಸೋಲು

https://newsfirstlive.com/wp-content/uploads/2024/03/Smriti_Mandhana-1.jpg

Load More