newsfirstkannada.com

ಸೂರ್ಯ, ಕಿಶನ್​, ಬೂಮ್ರಾ ಭರ್ಜರಿ ಆಟ.. ಮುಂಬೈಗೆ 7 ವಿಕೆಟ್​ಗಳ ಭರ್ಜರಿ ಜಯ

Share :

Published April 11, 2024 at 11:25pm

Update April 11, 2024 at 11:28pm

    ಮುಂಬೈಗೆ 196 ರನ್​ಗಳ ಟಾರ್ಗೆಟ್​​ ನೀಡಿದ ಆರ್​ಸಿಬಿ

    ಇಶಾನ್​ ಕಿಶನ್​​ ಅರ್ಧ ಶತಕದಾಟಕ್ಕೆ ಫ್ಯಾನ್ಸ್​ ಫುಲ್​ ಖುಷ್​

    ಸೂರ್ಯನ ವೇಗದ ಆಟಕ್ಕೆ ಎಲ್ಲರೂ ಶಾಕ್​

ಆರ್​ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ತವರಿನಲ್ಲೇ ಆರ್​ಸಿಬಿ ನೀಡಿದ 196 ರನ್​ ಸವಾಲನ್ನು ಸುಲಭವಾಗಿ ಸ್ವೀಕರಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಓಪನಿಂಗ್​ ಬ್ಯಾಟ್ಸ್​ಮನ್​ ಆಗಿ ಮೈದಾನಕ್ಕಿಳಿದ ಇಶಾನ್​ ಕಿಶನ್​ ಮಾತ್ರ ಅರ್ಧ ಶತಕಕ್ಕೂ ಹೆಚ್ಚಿನ ರನ್​ ಬಾರಿಸುವ ಮೂಲಕ ಅಭಿಮಾನಿಗಳ ಸಂಸತಕ್ಕೆ ಕಾರಣರಾಗಿದ್ದಾರೆ. 34 ಎಸೆತದಲ್ಲಿ 7 ಬೌಂಡರಿ ಮತ್ತು 5 ಸಿಕ್ಸ್​ ಬಾರಿಸಿ 69 ರನ್​ ಬಾರಿಸಿದ್ದಾರೆ. ಆ ಮೂಲಕ ಅವರ ಸ್ಟ್ರೈಕ್​ ರೇಟ್​​ 202.94ಕ್ಕೇರಿದೆ. ಅತ್ತ ರೋಹಿತ್​ ಶರ್ಮಾ 24 ಎಸೆತದಲ್ಲಿ 3 ಸಿಕ್ಸ್​ ಮತ್ತು 3 ಬೌಂಡರಿ ಬಾರಿಸಿ 28 ರನ್​ ಕಲೆಹಾಕಿ ಔಟ್​ ಆದರು.

ಸೂರ್ಯನ ಭಯಾನಕ ಆಟ

ಸೂರ್ಯ ಕುಮಾರ್​ ಆಟ ಮಾತ್ರ ಮುಂಬೈ ಅಭಿಮಾನಿಗಳನ್ನ ಅಚ್ಚರಿಗೆ ದೂಡಿದೆ. 19 ಎಸೆತಕ್ಕೆ 5 ಬೌಂಡರಿ ಮತ್ತು 4 ಸಿಕ್ಸ್​ ಹೊಡೆಯುವ ಮೂಲಕ 52 ರನ್​ ಬಾರಿಸಿದ್ದಾರೆ. ಆ ಮೂಲಕ ವೇಗವಾಗಿ ಅರ್ಧ ಶತಕ ಬಾರಿಸಿದ ಹೆಗ್ಗಳಿಕೆ ಸೂರ್ಯನ ಹೆಗಲೇರಿದೆ.

ಇದನ್ನೂ ಓದಿ: ಇಶಾನ್​ ಕಿಶಾನ್​​ ಅರ್ಧ ಶತಕಕ್ಕೂ ಹೆಚ್ಚಿನ ಆಟ.. ಮುಂಬೈ ಫ್ಯಾನ್ಸ್​ಗೆ ಸಂತಸವೋ ಸಂತಸ

ಇನ್ನು ಆಡಿರುವ ನಾಲ್ಕು ಪಂದ್ಯದಲ್ಲಿ ಮೂರು ಪಂದ್ಯ ಸೋತ ಮುಂಬೈಗೆ ಇದೊಂದು ಜಯ ದೊಡ್ಡ ಟರ್ನ್​ ನೀಡಿದೆ. ಅದರಲ್ಲೂ ಮುಂಬೈ ಮಾಲೀಕ ಆಕಾಶ್​ ಅಂಬಾನಿ ಮತ್ತು ನೀತಾ ಅಂಬಾನಿಗೆ ಸಂತಸದಲ್ಲಿ ತೇಲಾಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

ಸೂರ್ಯ, ಕಿಶನ್​, ಬೂಮ್ರಾ ಭರ್ಜರಿ ಆಟ.. ಮುಂಬೈಗೆ 7 ವಿಕೆಟ್​ಗಳ ಭರ್ಜರಿ ಜಯ

https://newsfirstlive.com/wp-content/uploads/2024/04/Surya-Kumar-Yadav.jpg

Load More