/newsfirstlive-kannada/media/post_attachments/wp-content/uploads/2024/04/Bumrah.jpg)
ರಾಯಲ್​ ಚಾಲೆಂಜರ್ಸ್ ಬೆಂಗಳೂರು ನಿನ್ನೆ ಸೋತಿರಬಹುದು. ಇದು ಆರ್​ಸಿಬಿ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿರಬಹುದು. ಆದ್ರೆ, ಇಂಡಿಯನ್ ಕ್ರಿಕೆಟ್ ಫ್ಯಾನ್ಸ್​ ಮಾತ್ರ ಫುಲ್ ಖುಷ್ ಆಗಿದ್ದಾರೆ. ಅದಕ್ಕೆ ಕಾರಣ ಬೂಮ್ರಾ. ಅದ್ಯಾಕೆ ಏನು ಅಂತೀರಾ ಇಲ್ಲಿದೆ ರೀಸನ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಕ್ಷರಶಃ ವಿಲನ್ ಆಗಿದ್ದು ಜಸ್​ಪ್ರೀತ್​ ಬೂಮ್ರಾ. ಬೂಮ್ರಾರ ಬೆಂಕಿ ಬೌಲಿಂಗ್​ಗೆ ವಿಲವಿಲ ಅಂತಾ ಒದ್ದಾಡಿದ ಆರ್​ಸಿಬಿ ಬ್ಯಾಟರ್ಸ್​, ಪೆವಿಲಿಯನ್​ ಪರೇಡ್ ನಡೆಸಿದ್ರು. ಪಂದ್ಯದ ಆರಂಭದಿಂದಲೂ ಆರ್​ಸಿಬಿ ಬ್ಯಾಟರ್​​​ಗಳನ್ನ ಕಾಡಿದ ಬೂಮ್ರಾ, ದಾಳಿಗಿಳಿದ ಮೊದಲ ಓವರ್​ನಲ್ಲೇ ವಿರಾಟ್ ವಿಕೆಟ್ ಬೇಟೆಯಾಡಿದರು. ಇಲ್ಲಿಂದ ಶುರುವಾದ ಬೂಮ್ರಾ ವಿಕೆಟ್​ ಬೇಟೆ, ಇನ್ನಿಂಗ್ಸ್​ ಅಂತ್ಯದವರೆಗೂ ಮುಂದುವರಿಯಿತು. ಫಾಫ್ ಡುಪ್ಲೆಸಿ, ಲೋಮ್ರಾರ್, ಸೌರಭ್​ ಚೌಹಾಣ್​​ರಂಥ 5 ಪ್ರಮುಖ ವಿಕೆಟ್​​ಗಳನ್ನ ಬೇಟೆಯಾಡಿ ಆರ್​ಸಿಬಿ ಪಾಲಿನ ವಿಲನ್ ಆದ್ರು.
ಇದನ್ನೂ ಓದಿ: ಮುಂಗಾರುಗೆ ಮೊದಲೇ ಆರ್ಭಟಿಸ್ತಿರೋ ವರುಣ.. ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ, ಸಿಡಿಲಿಗೆ ಇಬ್ಬರು ಬಲಿ
/newsfirstlive-kannada/media/post_attachments/wp-content/uploads/2024/04/RCB-VS-MI.jpg)
ಆರ್​ಸಿಬಿ ಎದುರು ಬೂಮ್ರಾ
4 ಓವರ್​​ಗಳ ಕೋಟಾದಲ್ಲಿ 21 ರನ್ ನೀಡಿದ ಬೂಮ್ರಾ, 5 ವಿಕೆಟ್ ಉರುಳಿಸಿದ್ರು. ಜಸ್ಟ್​ 5.20ರ ಏಕಾನಮಿಯಲ್ಲಿ ರನ್ ನೀಡಿ ಮುಂಬೈ ಪಾಲಿನ ಹೀರೋ ಎನಿಸಿದ್ರು. ಅಷ್ಟೇ ಅಲ್ಲ, ಬೂಮ್ರಾರ ಈ ವಿಕೆಟ್ ಬೇಟೆ, ಆರ್​ಸಿಬಿ ಫ್ಯಾನ್ಸ್​ಗೆ ಸಂಕಟಕ್ಕೆ ಕಾರಣವಾದ್ರೆ. ಇದೇ ಸ್ಪೆಲ್​​​ ಟೀಮ್ ಇಂಡಿಯಾ ಪಾಲಿಗೆ ಗುಡ್​ನ್ಯೂಸ್ ಆಗಿದೆ. ಇದಕ್ಕೆ ಕಾರಣ ಪ್ರಸಕ್ತ ಐಪಿಎಲ್​ನಲ್ಲಿ ಬೂಮ್ರಾ ನೀಡ್ತಿರುವ ಪ್ರದರ್ಶನ.
ಐಪಿಎಲ್​ನಲ್ಲಿ ಜಸ್​ಪ್ರೀತ್ ಬೂಮ್ರಾ ದರ್ಬಾರ್!
ಐಪಿಎಲ್​ ಆರಂಭದಿಂದ ಮುಂಬೈ ಮಿಶ್ರ ಫಲಿತಾಂಶವನ್ನೇ ಕಂಡರು. ಟೂರ್ನಿ ಆರಂಭದಿಂದಲೂ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡ್ತಿರುವ ಒನ್​ ಆ್ಯಂಡ್ ಒನ್ಲಿ ಬೌಲರ್​​ ಜಸ್​ಪ್ರೀತ್ ಬೂಮ್ರಾ. ಗುಜರಾತ್, ಸನ್ ರೈಸರ್ಸ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಎದುರು ಕೂಡ ಜಬರ್ದಸ್ತ್ ಪರ್ಫಾಮೆನ್ಸ್ ನೀಡಿದ್ದ ಬೂಮ್ರಾ, ಮೋಸ್ಟ್ ಎಕಾನಮಿಕಲ್ ಬೌಲರ್ ಮಾತ್ರವೇ ಅಲ್ಲ. ವಿಕೆಟ್ ಟೇಕರ್ ಬೌಲರ್​​ ಕೂಡ ಆಗಿದ್ದಾರೆ. ಇದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ.
ಪ್ರಸಕ್ತ ಐಪಿಎಲ್​ನಲ್ಲಿ ಬೂಮ್ರಾ
ಪ್ರಸಕ್ತ ಐಪಿಎಲ್​​ನಲ್ಲಿ ಇದುವರೆಗೆ 5 ಪಂದ್ಯಗಳನ್ನಾಡಿರುವ ಬೂಮ್ರಾ, 10 ವಿಕೆಟ್ ಉರುಳಿಸಿದ್ದಾರೆ. ಈ ಪೈಕಿ 21 ರನ್ ನೀಡಿ 5 ವಿಕೆಟ್ ಪಡೆದಿರುವುದು ಬೆಸ್ಟ್ ಪರ್ಫಾಮೆನ್ಸ್ ಆಗಿದ್ರೆ. 5.95ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/04/Jasprit-bhumrah-1.jpg)
ಬೂಮ್ರಾ ಬೊಂಬಾಟ್.. ಟೀಮ್ ಇಂಡಿಯಾಗೆ ಗುಡ್​ನ್ಯೂಸ್..!
ಸದ್ಯ ಬೂಮ್ರಾ ಐಪಿಎಲ್​​ನಲ್ಲಿ ನೀಡ್ತಿರುವ ಪರ್ಫಾಮೆನ್ಸ್, ಟೀಮ್ ಇಂಡಿಯಾ ಪಾಲಿಗೆ ಗುಡ್​ ನ್ಯೂಸ್ ಆಗಿದೆ. ಇದಕ್ಕೆ ಕಾರಣ ಮುಂದಿನ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯೇ ಆಗಿದೆ. ಮೆಗಾ ಟೂರ್ನಿಗೂ ಮುನ್ನ ನಡೀತಿರುವ ಈ ಐಪಿಎಲ್​ ಬೂಮ್ರಾ ಪಾಲಿಗೆ ಸತ್ವ ಪರೀಕ್ಷೆಯ ಕಣವೇ ಆಗಿತ್ತು. ಆದ್ರೆ, ಈ ಸತ್ವ ಪರೀಕ್ಷೆಯಲ್ಲಿ ಡಾಮಿನೇಟ್ ಪರ್ಫಾಮೆನ್ಸ್ ನೀಡ್ತಿರುವುದು ಟೀಮ್ ಇಂಡಿಯಾ ಪಾಲಿಗೆ ಗುಡ್​ನ್ಯೂಸ್ ಆಗಿರೋದ್ರಲ್ಲಿ ಅನುಮಾನ ಇಲ್ಲ.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆ 3 ಕ್ಷೇತ್ರಗಳನ್ನ ಗೆದ್ದುಕೊಂಡು ಬರಲೇಬೇಕು.. ಕಾರಣ?
ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​​ ಟೂರ್ನಿಗೂ ಮುನ್ನ ಬೂಮ್ರಾ ಮಾಡ್ತಿರೋ ಜಾದೂ, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನೇ ಹುಟ್ಟು ಹಾಕಿದೆ. ಟಿ20 ಸಂಗ್ರಾಮದಲ್ಲಿ ಇದೇ ರೀತಿಯ ಪರ್ಫಾಮೆನ್ಸ್ ​ ಮುಂದುವರಿಯಲಿ ಅನ್ನೋದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯ..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us