ಹ್ಯಾಟ್ರಿಕ್​ ಸೋಲಿನಿಂದ ಮುಂಬೈ ಇಂಡಿಯನ್ಸ್ ಪಾರು​.. ಹಾರ್ದಿಕ್​ ಪಾಂಡ್ಯ ಪಡೆಗೆ ಮೊದಲ ಗೆಲುವು

author-image
Bheemappa
Updated On
ಹ್ಯಾಟ್ರಿಕ್​ ಸೋಲಿನಿಂದ ಮುಂಬೈ ಇಂಡಿಯನ್ಸ್ ಪಾರು​.. ಹಾರ್ದಿಕ್​ ಪಾಂಡ್ಯ ಪಡೆಗೆ ಮೊದಲ ಗೆಲುವು
Advertisment
  • KKR ಬ್ಯಾಟಿಂಗ್ ಬಲ ಕುಗ್ಗಿಸಿದ ಮುಂಬೈ ಇಂಡಿಯನ್ಸ್ ಬೌಲರ್ಸ್
  • ಟೂರ್ನಿ ಆರಂಭದಿಂದ ಸೋಲುಗಳನ್ನೇ ಕಂಡಿದ್ದ ಮುಂಬೈ ಟೀಮ್
  • ರೋಹಿತ್ ಶರ್ಮಾ ಮತ್ತೆ ವಿಫಲ ಬ್ಯಾಟಿಂಗ್, ಎಷ್ಟು ರನ್​ಗೆ ಔಟ್?

ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದ ರಯಾನ್ ರಿಕೆಲ್ಟನ್ ಅವರ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ಈ ಐಪಿಎಲ್​ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ಮೂಲಕ ಹ್ಯಾಟ್ರಿಕ್ ಸೋಲಿನಿಂದ ಮುಂಬೈ ಪಾರಾಗಿದೆ ಎನ್ನಬಹುದು.

publive-image

ವಾಂಖೆಡೆಯಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಕೆಕೆಆರ್ ತಂಡ ಬ್ಯಾಟಿಂಗ್​ಗೆ ಆಗಮಿಸಿತು. ಆದರೆ ಮುಂಬೈ ಬೌಲರ್ಸ್​, ಕೆಕೆಆರ್ ಬ್ಯಾಟ್ಸ್​ಮನ್​ಗಳ ಮೇಲೆ ಸವಾರಿ ಮಾಡಿದರು. ಓಪನರ್ ಸುನಿಲ್ ನರೈನ್​​ ಅವರನ್ನು ಡಕೌಟ್ ಮಾಡುವ ಮೂಲಕ ಬೋಲ್ಟ್​ ಮುಂಬೈಗೆ ಉತ್ತಮ ಬೌಲಿಂಗ್ ಆರಂಭ ಒದಗಿಸಿದರು. ಡಿಕಾಕ್ ಕೂಡ ಕೇವಲ 1 ರನ್​ಗೆ ಔಟ್ ಅಗಿ ಹೊರ ನಡೆದರು.

ಕೆಕೆಆರ್ ಕ್ಯಾಪ್ಟನ್​ ಅಜಿಂಕ್ಯಾ ರಹಾನೆ 3ನೇಯವರಾಗಿ ಕ್ರೀಸ್​​ಗೆ ಆಗಮಿಸಿ 11 ರನ್​ ಗಳಿಸಿ ಆಡುವಾಗ ಯಂಗ್ ಬೌಲರ್ ಅಶ್ವನಿ ಕುಮಾರ್ ಅವರ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ರಿಂಕು ಸಿಂಗ್ 17 ರನ್, ಮನೀಶ್ ಪಾಂಡ್ಯ 19, ಆ್ಯಂಡ್ರೆ ರಸೆಲ್ 05 ರನ್​ಗೆ ಅಶ್ವನಿ ಕುಮಾರ್ ಔಟ್ ಮಾಡಿದರು. ಇದರಿಂದ ಕೆಕೆಆರ್ ಬ್ಯಾಟಿಂಗ್​ನಲ್ಲಿ ಮೇಲೆ ಎದ್ದೇಳಲಿಲ್ಲ. ಚೊಚ್ಚಲ ಪಂದ್ಯದಲ್ಲೇ ಅಶ್ವನಿ ಕುಮಾರ್ ಪ್ರಮುಖ 4 ವಿಕೆಟ್ ಕಬಳಿಸಿ ಸಂಭ್ರಮಿಸಿದರು.

ಕೋಲ್ಕತ್ತಾ ನೈಟ್​ ರೈಡರ್ಸ್​ ಪರ ಅಂಗ್‌ಕ್ರಿಶ್ ರಘುವಂಶಿ ಅವರ 26 ರನ್​ ಬಿಟ್ಟರೇ ಉಳಿದ ಯಾವ ಬ್ಯಾಟರ್ ಕೂಡ ಈ ಗಡಿ ದಾಟಲಿಲ್ಲ. ಹೀಗಾಗಿ ಕೆಕೆಆರ್ 16.2 ಓವರ್​ನಲ್ಲಿ ಆಲೌಟ್ ಆಗಿ ಕೇವಲ 117 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್​ ಬೆನ್ನು ಹತ್ತಿದ್ದ ಮುಂಬೈ ಇಂಡಿಯನ್ಸ್​ ಬಹು ಬೇಗನೇ ಗುರಿ ಮುಟ್ಟಿ ಜಯಶಾಲಿಯಾಗಿದೆ. ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆದುಕೊಂಡಿತು ಎನ್ನುವಷ್ಟರಲ್ಲಿ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ್ದ ರೋಹಿತ್ ಶರ್ಮಾ ಮತ್ತೆ ವಿಫಲ ಬ್ಯಾಟಿಂಗ್ ಮಾಡಿ ಕೇವಲ 13 ರನ್​ಗೆ ಔಟ್ ಆದರು.

ಇದನ್ನೂ ಓದಿ:4, 4, 4, 4, 6, 6, 6, 6; ರೋಹಿತ್ ಶರ್ಮಾ ಅದೇ ರಾಗ, ಅದೇ ಹಾಡು.. ಭರ್ಜರಿ ಅರ್ಧಶತಕ ಸಿಡಿಸಿದ ರಯಾನ್

publive-image

ಆದರೆ ಇನ್ನೊಂದು ಕಡೆ ರಯಾನ್ ರಿಕೆಲ್ಟನ್ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಕೇವಲ 33 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್​​ನಿಂದ ಅರ್ಧಶತಕ ಪೂರೈಸಿದರು. ರಯಾನ್ ಒಟ್ಟು 41 ಎಸೆತದಲ್ಲಿ 62 ರನ್​ ಬಾರಿಸಿದರು. ವಿಲ್​ ಜಾಕ್ಸ್​ 16, ಇವರ ನಂತರ ಕ್ರೀಸ್​ಗೆ ಆಗಮಿಸಿದರು ಸೂರ್ಯ ಕುಮಾರ್ ಕೇವಲ 9 ಬಾಲ್​ನಲ್ಲಿ 27 ರನ್​ ಚಚ್ಚಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಕೇವಲ 12.5 ಓವರ್​ಗಳಲ್ಲಿ 2 ವಿಕೆಟ್​ಗೆ 121 ರನ್​ ಬಾರಿಸಿ ಈ ಟೂರ್ನಿಯಲ್ಲಿ ಮುಂಬೈ ವಿಜಯಮಾಲೆ ಧರಿಸಿಕೊಂಡಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment