newsfirstkannada.com

ಗಿನ್ನಿಸ್​​ ದಾಖಲೆ ಬರೆದ ವಜ್ರದ ಉಂಗುರ; ಇದರ ಬೆಲೆ ಕೇಳಿದ್ರೆ ಶಾಕ್​ ಆಗೋದು ಗ್ಯಾರಂಟಿ!

Share :

18-05-2023

    ಅದ್ಭುತವಾದ ಈ ಉಂಗುರಕ್ಕೆ ಹೆಸರು ಏನು ಗೊತ್ತಾ?

    ವಜ್ರದ ಹರಳನ್ನು ಧರಿಸಿದರೆ ಅದರ ಗಮ್ಮತ್ತೇ ಬೇರೆ!

    ಮುಂಬೈ ಜುವೆಲರ್ಸ್ ಮಾಡಿರೋ ಗಿನ್ನಿಸ್ ದಾಖಲೆ

ಚಿನ್ನ, ಬೆಳ್ಳಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ವಜ್ರ ಎಲ್ಲರೂ ಇಷ್ಟಪಡುವ ರತ್ನ. ವಜ್ರದ ಹರಳನ್ನು ಧರಿಸಿದರೆ ಸಾಕು ಅದರ ಕಳೆ ಬೇರೆ ಆಗಿರುತ್ತದೆ. ಬಂಗಾರಕ್ಕಿಂತ ವಜ್ರದ ಬೆಲೆ ದುಬಾರಿ ಇರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಚಿನ್ನಕ್ಕಿಂತ ಹೆಚ್ಚು ಮೌಲ್ಯವಾದದ್ದು ಎಂದರೆ ಅದು ವಜ್ರ. ಹೀಗೆ ಒಂದೊಂದಾಗಿ ವಜ್ರದ ಹರಳುಗಳನ್ನು ಸಂಗ್ರಹಿಸಿ ಒಂದು ಉಂಗುರವನ್ನು ರೆಡಿ ಮಾಡಿದರೆ ಹೇಗಿರುತ್ತೆ ಹೇಳಿ! ಹೀಗೆ 50,907 ವಜ್ರಗಳ ಹರಳುಗಳನ್ನು ಹೊಂದಿಸಿ ಒಂದು ಅದ್ಭುತವಾದ ಉಂಗುರವನ್ನು ನಿರ್ಮಿಸುವ ಮೂಲಕ ಮುಂಬೈ ಜುವೆಲರ್ಸ್ ಗಿನ್ನಿಸ್ ದಾಖಲೆ ಮಾಡಿದೆ.

ಈ ಅದ್ಭುತವಾದ ಉಂಗುರಕ್ಕೆ ‘ಯುಟಿಯೆರಿಯಾ’ ಎಂದು ಹೆಸರಿಡಲಾಗಿದೆ. ‘ಯುಟಿಯೆರಿಯಾ’ ಎಂದರೆ ಪ್ರಕೃತಿಯೊಂದಿಗೆ ಒಂದಾಗುವುದು ಅಥವಾ ಸೂರ್ಯಕಾಂತಿ ಎಂದರ್ಥ. ಈ ವಜ್ರದ ಉಂಗುರ ಮರುಬಳಕೆಯ ವಸ್ತುಗಳಿಂದ ಮಾರ್ಪಡು ಮಾಡಿ ಜೊತೆಗೆ ಅದ್ಭುತವಾದ ತುಣುಕುಗಳನ್ನು ಸೇರಿಸಿ ಸಂಪೂರ್ಣವಾಗಿ ಮಿಶ್ರಣ ಮಾಡಿ ಈ ಉಂಗುರವನ್ನು ತಯಾರು ಮಾಡಿದ್ದಾರೆ.

ಮುಂಬೈ ಮೂಲದ ಆಭರಣ ವ್ಯಾಪಾರಿ ಎಚ್ ಕೆ ಡಿಸೈನ್ಸ್ ಮತ್ತು ಹರಿಕೃಷ್ಣ ಎಕ್ಸ್ಪೋರ್ಟ್ಸ್ ಪ್ರೈ ಅವರು 50,000ಕ್ಕೂ ಹೆಚ್ಚು ವಜ್ರಗಳನ್ನು ಹೊಂದಿಕೆ ಮಾಡಿ ಈ ಉಂಗುರ ತಯಾರು ಮಾಡಿದ್ದಾರೆ. ಇದೀಗ ಅತಿ ಹೆಚ್ಚು ವಜ್ರಗಳನ್ನು ಸೇರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಗ್ರಾಹಕರಿಂದ ಪಡೆದ ಆದಾಯ ಸಂಗ್ರಹಿಸಿ, ಮರುಬಳಕೆಯ ಚಿನ್ನ ಮಿಶ್ರಣ ಮಾಡಿ ಸರಿ ಸುಮಾರು 50,907 ವಜ್ರಗಳ ಹರಳುಗಳನ್ನು ಸೇರಿಸಿ ಈ ಅದ್ಭುತವಾದ ಉಂಗುರ ತಯಾರಿಸಿದ್ದಾರೆ.

ಇನ್ನು, ಈ ರಿಂಗ್​​ 460.55 ಗ್ರಾಂ ತೂಕ ಹೊಂದಿದ್ದು, 6.4 ಕೋಟಿ ರೂಪಾಯಿ ಮೌಲ್ಯವುಳ್ಳದ್ದಾಗಿದೆ. ಈ ಉಂಗುರ ತಯಾರಿಸಲು ತೆಗೆದುಕೊಂಡ ಕಾಲಾವಧಿ ಸರಿಸುಮಾರು 9 ತಿಂಗಳು. ವಜ್ರದ ಉಂಗುರದಲ್ಲಿ 18 ಕ್ಯಾರೆಟ್ ಚಿನ್ನವನ್ನು ಮಿಶ್ರಣ ಮಾಡಲಾಗಿದೆ. ಈ ಉಂಗುರವನ್ನು ಅನುಭವಿ ಕುಶಲಕರ್ಮಿಗಳು ಮೊದಲು ಇದರ ವಿನ್ಯಾಸವನ್ನು ರಚನೆ ಮಾಡಿದ ಬಳಿಕ ಕೆಲಸ ಶುರು ಮಾಡಿದ್ದಾರೆ. ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ ವಜ್ರದ ಉಂಗುರಕ್ಕೆ ಹೊಳಪು ಬರುವಂತೆ ಮಾಡಿದ್ದಾರೆ. ಈ ವಜ್ರದ ರಿಂಗ್ ಕೊನೆಯ ಹಂತ ತಲುಪುತಿದ್ದಂತೆ ಇದಕ್ಕೆ ರೋಡಿಯಂ ದಳಗಳು, ಚಿಟ್ಟೆಯಾ ರೆಕ್ಕೆಗಳನ್ನು ಹೊಂದಿಸಿ ರಚನೆ ಮಾಡಲಾಗಿದೆ. ಜೊತೆಗೆ 8 ಭಾಗಗಳು ಮತ್ತು ನಾಲ್ಕು ವಜ್ರದ ದಳಗಳು 2 ವಜ್ರದ ತಟ್ಟೆ ಇದರಲ್ಲಿ ಸೇರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಿನ್ನಿಸ್​​ ದಾಖಲೆ ಬರೆದ ವಜ್ರದ ಉಂಗುರ; ಇದರ ಬೆಲೆ ಕೇಳಿದ್ರೆ ಶಾಕ್​ ಆಗೋದು ಗ್ಯಾರಂಟಿ!

https://newsfirstlive.com/wp-content/uploads/2023/05/Diamonds.jpg

Load More