/newsfirstlive-kannada/media/post_attachments/wp-content/uploads/2025/01/Saif-Ali-Khan2.jpg)
ಮಧ್ಯರಾತ್ರಿ 2.30 ರ ಸುಮಾರಿಗೆ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿಯಾಗಿದೆ. ಮನೆಗೆ ನುಗ್ಗಿದ ಕಳ್ಳನೊಬ್ಬ ಚಾಕು ಇರಿದು ಸೈಫ್ ಅಲಿ ಖಾನ್ ಅವರನ್ನು ಗಂಭೀರವಾಗಿ ಗಾಯಗೊಳಿಸಿದ್ದಾನೆ.
ಬಳಿಕ ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಬಾಂದ್ರಾ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: BREAKING ಸೈಫ್ ಅಲಿ ಖಾನ್ ಮೇಲೆ ಮಧ್ಯರಾತ್ರಿ ಚಾಕುವಿನಿಂದ ಅಟ್ಯಾಕ್
ಲೀಲಾವತಿ ಆಸ್ಪತ್ರೆ ಹೇಳಿದ್ದೇನು..?
ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನೀರಜ್ ಉತ್ತಮನಿ ಮಾಹಿತಿ ನೀಡಿ, ಸೈಫ್ ಅಲಿ ಖಾನ್​ಗೆ ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಇರಿದಿದ್ದಾರೆ. ಅವರನ್ನು ನಮ್ಮ ಆಸ್ಪತ್ರೆಗೆ ರಾತ್ರಿ 3.30ಕ್ಕೆ ಕರೆದುಕೊಂಡು ಬಂದಿದ್ದಾರೆ. ಸೈಫ್​ಗೆ ಒಟ್ಟು ಆರು ಗಾಯ, ಅದರಲ್ಲಿ ಎರಡು ಆಳವಾದ ಗಾಯವಾಗಿದೆ. ಒಂದು ಬೆನ್ನು ಹುರಿ ಸಮೀಪ ಚಾಕು ಚುಚ್ಚಲಾಗಿದೆ. ನರಶಸ್ತ್ರ ಚಿಕಿತ್ಸಕ ಡಾ. ನಿತಿನ್, ಕಾಸ್ಮೆಟಿಕ್ ಸರ್ಜನ್ ಡಾ. ಲೀಲಾ ಜೈನ್, ಅರವಳಿಕೆ ತಜ್ಞೆ ಡಾ.ನಿಶಾ ಗಾಂಧಿ ನೇತೃತ್ವದ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ದಾಳಿ ಬಗ್ಗೆ ಅಧಿಕೃತ ಮಾಹಿತಿ..
ಸೈಫ್ ಅಲಿ ಖಾನ್ ಮೇಲೆ ದಾಳಿ ಆಗಿರುವ ಬಗ್ಗೆ ಸೈಫ್ ಅಲಿ ಖಾನ್ ತಂಡ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿದೆ. ಸೈಫ್ ಅಲಿ ಖಾನ್ ನಿವಾಸದಲ್ಲಿ ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ. ಈ ವೇಳೆ ದಾಳಿಯಾಗಿದ್ದು, ನಟನಿಗೆ ಚಿಕಿತ್ಸೆ ಕೊಡಿಸುವ ಕೆಲಸ ಆಗುತ್ತಿದೆ. ಪೊಲೀಸರು ತನಿಖೆ ನಡೆಸ್ತಿದ್ದಾರೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿಗೂ ಮೊದಲು ಏನಾಯಿತು? ಅಸಲಿ ಕತೆ ಬಿಚ್ಚಿಟ್ಟ ಪೊಲೀಸರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us