newsfirstkannada.com

ಯುವತಿಯ ತಲೆ ಕತ್ತರಿಸಿ, ಕುಕ್ಕರ್‌ನಲ್ಲಿ ಬೇಯಿಸಿದ ಕಿರಾತಕ; ಇಡೀ ದೇಶವೇ ಬೆಚ್ಚಿ ಬೀಳಿಸಿದ ಮತ್ತೊಂದು ಮರ್ಡರ್

Share :

Published June 8, 2023 at 7:59am

  ಲೀವಿಂಗ್ ಟುಗೆದರ್‌ನಲ್ಲಿದ್ದ ಸಂಗಾತಿಯ ಬರ್ಬರ ಹತ್ಯೆ

  ಕೊಲೆ ಮಾಡಿ 20 ತುಂಡು ಕತ್ತರಿಸಿದ 56 ವರ್ಷದ ಕಿರಾತಕ

  ಕುಕ್ಕರ್ ವಾಸನೆಯಿಂದ ಅಪಾರ್ಟ್‌ಮೆಂಟ್‌ನಲ್ಲಿ ಅನುಮಾನ

ಮುಂಬೈ: ಲೀವಿಂಗ್ ಟುಗೆದರ್‌ನಲ್ಲಿದ್ದ ಸಂಗಾತಿಯನ್ನ ಸಾಯಿಸಿ ಪೀಸ್, ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಶ್ರದ್ಧಾ ವಾಕರ್ ಪ್ರಕರಣಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಈ ಘಟನೆ ಮಾಸುವ ಮುನ್ನವೇ ಮುಂಬೈ ಮಹಾನಗರದಲ್ಲಿ ಇಂತಹದ್ದೇ ಮತ್ತೊಂದು ಭಯಾನಕ ಮರ್ಡರ್ ನಡೆದಿದೆ. ಅಪಾರ್ಟ್‌ಮೆಂಟ್‌ನಲ್ಲಿದ್ದ ಕಿರಾತಕ ಯುವತಿಯ ತಲೆ ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿ ಸಿಕ್ಕಿಬಿದ್ದಿದ್ದಾನೆ.

ಲೀವಿಂಗ್ ಟುಗೆದರ್‌ನಲ್ಲಿದ್ದ ಯುವತಿಯ ತಲೆ ಕತ್ತರಿಸಿ ಕೊಲೆ ಮಾಡಿರುವ ಅಮಾನುಷ ಘಟನೆ ಮುಂಬೈನ ಮೀರಾ ರೋಡ್‌ನ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. 32 ವರ್ಷದ ಸರಸ್ವತಿ ವೈದ್ಯರನ್ನು 56 ವರ್ಷದ ಮನೋಜ್ ಸಹಾನಿ ಹತ್ಯೆ ಮಾಡಿದ್ದಾನೆ.

ಯುವತಿಯನ್ನು ಕೊಲೆ ಮಾಡಿದ ಬಳಿಕ ಮನೋಜ್ ಸಹಾನಿ ಆಕೆಯ ದೇಹವನ್ನು 20 ತುಂಡುಗಳಾಗಿ ಕತ್ತರಿಸಿದ್ದಾನೆ. ಬಳಿಕ ದೇಹದ ತುಂಡುಗಳನ್ನು ಕುಕ್ಕರ್‌ಗೆ ಹಾಕಿ ಗ್ಯಾಸ್ ಸ್ಟೌವ್‌ನಲ್ಲಿ ಬೇಯಿಸಿದ್ದಾನೆ. ಅಪಾರ್ಟ್‌ಮೆಂಟ್‌ನ 704 ನಂಬರ್‌ನ ಪ್ಲ್ಯಾಟ್‌ನಲ್ಲಿ ವಾಸನೆ ಬಂದಿದ್ದರಿಂದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಯುವತಿಯ ಭಯಾನಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಮುಂಬೈನ ಮೀರಾ ರೋಡ್‌ ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಇಲ್ಲಿ ಈ ರೀತಿಯ ಮರ್ಡರ್‌ ನಡೆದಿರೋದು ಸ್ಥಳೀಯರನ್ನ ಬೆಚ್ಚಿಬೀಳಿಸಿದೆ. ಪ್ರಕರಣ ದಾಖಲಿಸಿಕೊಂಡ ನಯಾನಗರ ಪೊಲೀಸರು ಪರಾರಿಯಾಗಿದ್ದ ಮನೋಜ್ ಸಹಾನಿಯನ್ನು ಬಂಧಿಸಿದ್ದಾರೆ. 56 ವರ್ಷದ ಮನೋಜ್ ಸಹಾನಿ ಇಷ್ಟೊಂದು ಕ್ರೂರಿವಾಗಿ ಕೊಲೆ ಮಾಡಿದ್ದಕ್ಕೆ ಕಾರಣ ಏನು ಅನ್ನೋದು ತನಿಖೆಯಿಂದ ಹೊರ ಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಯುವತಿಯ ತಲೆ ಕತ್ತರಿಸಿ, ಕುಕ್ಕರ್‌ನಲ್ಲಿ ಬೇಯಿಸಿದ ಕಿರಾತಕ; ಇಡೀ ದೇಶವೇ ಬೆಚ್ಚಿ ಬೀಳಿಸಿದ ಮತ್ತೊಂದು ಮರ್ಡರ್

https://newsfirstlive.com/wp-content/uploads/2023/06/Mumbai-Murder.jpg

Load More