newsfirstkannada.com

ಏಲಕ್ಕಿ ಕದ್ದನೆಂದು ವ್ಯಕ್ತಿ ಮೇಲೆ ಹಲ್ಲೆ, ಮಾಲೀಕನ ಶೂ ನೆಕ್ಕುವಂತೆ ಬಲವಂತ ಮಾಡಿದ ಸಿಬ್ಬಂದಿ

Share :

Published March 29, 2024 at 12:23pm

    ಅಂಗಡಿಯಲ್ಲಿ ಏಲಕ್ಕಿ ಕಳ್ಳತನ ಮಾಡಿದ ಎಂದು ಮನಬಂದಂತೆ ಥಳಿತ

    APMCಯ ಅಂಗಡಿಯ ಮಾಲೀಕ ಹಾಗೂ ಸಿಬ್ಬಂದಿಯಿಂದ ಹಲ್ಲೆ

    ಈ ಘಟನೆ ಸಂಬಂಧ ಆರು ಜನರನ್ನು ಬಂಧಿಸಿದ ನಗರದ ಪೊಲೀಸರು

ಮುಂಬೈ: ಏಲಕ್ಕಿ ಕಳ್ಳತನ ಮಾಡಿದ್ದಾನೆಂದು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಶೂ ನೆಕ್ಕುವಂತೆ ಒತ್ತಾಯಿಸಿದ ಆರೋಪದ ಮೇಲೆ 6 ಮಂದಿಯನ್ನು ನವಿ ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ನವಿ ಮುಂಬೈ ಎಪಿಎಂಸಿಯ ಏಲಕ್ಕಿ ಅಂಗಡಿ ಮಾಲೀಕ ರೌನಕ್ ದಯಾಳ್‌ ಜಿಭಾಯಿ ಭಾನುಶಾಲಿ ಮತ್ತು ಇವರ ಅಂಗಡಿಯಲ್ಲಿ ಕೆಲಸ ಮಾಡುವ ಸಂಜಯ್ ಚೌಧರಿ, ಲಾಲಾಜಿ ಬಾಬುಬಾಯಿ ಪಾಗಿ, ವೀರೇಂದ್ರ ಕುಮಾರ್ ಲಕ್ಷ್ಮಣ ಗೌತಮ್, ಯೋಗೇಶ್ ಮತ್ತು ಕರಣ್ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ. ನವಿ ಮುಂಬೈಯ ಎಪಿಎಂಸಿಯ ಅಂಗಡಿಯೊಂದರಲ್ಲಿ ವ್ಯಕ್ತಿಯು ಏಲಕ್ಕಿ ಹಾಗೂ ಮಸಾಲೆ ಪದಾರ್ಥಗಳನ್ನು ಕಳ್ಳತನ ಮಾಡಿದ್ದಾನೆಂದು ಮಾಲೀಕ ಸೇರಿ ಇತರೆ ಸಿಬ್ಬಂದಿ ಆರೋಪ ಮಾಡಿದ್ದಾರೆ.

ಬಳಿಕ ಆ ವ್ಯಕ್ತಿಯನ್ನು ಹಿಡಿದುಕೊಂಡು ಏಲಕ್ಕಿ ಕದ್ದಿದ್ದಿಯಾ ಎಂದು ಸಿಬ್ಬಂದಿ ಸೇರಿ ಮನಬಂದಂತೆ ಥಳಿಸಿ, ಹಲ್ಲೆ ಮಾಡಿದ್ದಾರೆ. ನಂತರ ಮಾಲೀಕ ರೌನಕ್ ದಯಾಳ್‌ ಜಿಭಾಯಿ ಶೂ ನೆಕ್ಕುವಂತೆ ಬಲವಂತ ಮಾಡಿದ್ದಾರೆ. ಇದನ್ನು ವಿಡಿಯೋ ಮಾಡಿದ್ದರಿಂದ ಪ್ರಕರಣ ಹೊರ ಬಂದಿದೆ. ಪ್ರಕರಣ ಪೊಲೀಸ್ ಠಾಣೆ ಮಟ್ಟಿಲೇರಿದ್ದು ತನಿಖೆ ಕೈಗೊಂಡಿರುವ ಪೊಲೀಸರು 6 ಜನರನ್ನ ಅರೆಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಲಕ್ಕಿ ಕದ್ದನೆಂದು ವ್ಯಕ್ತಿ ಮೇಲೆ ಹಲ್ಲೆ, ಮಾಲೀಕನ ಶೂ ನೆಕ್ಕುವಂತೆ ಬಲವಂತ ಮಾಡಿದ ಸಿಬ್ಬಂದಿ

https://newsfirstlive.com/wp-content/uploads/2024/03/MUMBHI.jpg

Load More