ಆರೋಪಿ ಪತ್ತೆಗೆ ಸಹಾಯ ಆಗಿದ್ದು ಈ ತಂತ್ರಜ್ಞಾನ.. ಸೈಫ್ ಮೇಲೆ ದಾಳಿ ಮಾಡಿದವನ ಗುರುತಿಸಿದ್ದು ಹೀಗೆ..

author-image
Ganesh
Updated On
ಆರೋಪಿ ಪತ್ತೆಗೆ ಸಹಾಯ ಆಗಿದ್ದು ಈ ತಂತ್ರಜ್ಞಾನ.. ಸೈಫ್ ಮೇಲೆ ದಾಳಿ ಮಾಡಿದವನ ಗುರುತಿಸಿದ್ದು ಹೀಗೆ..
Advertisment
  • ಬಾಲಿವುಡ್ ನಟ ಸೈಫ್ ಅಲಿ ಖಾನ್​ಗೆ ಚಾಕು ಇರಿತ
  • ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಅಲಿ ಖಾನ್​ಗೆ ಚಿಕಿತ್ಸೆ
  • ಆರೋಪಿಯ ಗುರುತು ಪತ್ತೆ ಹಚ್ಚಿರುವ ಪೊಲೀಸರು

ಗುರುವಾರ ರಾತ್ರಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ಕಳ್ಳನೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡಿರುವ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಪ್ರಕರಣದಲ್ಲಿ ಕ್ರಮ ಕೈಗೊಂಡಿರುವ ಪೊಲೀಸರು ದಾಳಿಕೋರನ ಗುರುತು ದೃಢಪಡಿಸಿದ್ದಾರೆ. ಸೈಫ್ ಮನೆಯ ಮೆಟ್ಟಿಲು ಇಳಿಯುವಾಗ ಆತ ಸಿಸಿಟಿವಿಯಲ್ಲಿ ಸೆರೆಯಾಗಿದ್ದ. ಸದ್ಯ ಆರೋಪಿಯನ್ನೂ ಬಂಧಿಸಲಾಗಿದೆ.

ಇದನ್ನೂ ಓದಿ: ಸೈಫ್ ಅಲಿ ಖಾನ್‌ ಮನೆಗೆ ನುಗ್ಗಿದ ಆಗಂತುಕ ಮೊದಲು ಮಾಡಿದ್ದೇನು? ಇಂಚಿಂಚು ಮಾಹಿತಿ ಬಹಿರಂಗ!

publive-image

ಆರೋಪಿಯ ಪತ್ತೆ ಮಾಡಿದ್ದು ಹೇಗೆ?

ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ್ದ ಆರೋಪಿಯ ಪತ್ತೆಗೆ ಪೊಲೀಸರು ‘ಡೇಟಾ ಡಂಪಿಂಗ್ ಟೆಕ್ನಿಕ್’ (Data dump technology) ಬಳಸಿದ್ದಾರೆ. ಈ ಡೇಟಾ ಡಂಪಿಂಗ್ ತಂತ್ರಜ್ಞಾನದ ಸಹಾಯದಿಂದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗುತ್ತಿದ್ದಾರೆ.

ಡೇಟಾ ಡಂಪ್ ತಂತ್ರಜ್ಞಾನದಲ್ಲಿ ಏನಾಗುತ್ತದೆ?

ಸಾಮಾನ್ಯವಾಗಿ ತನಿಖಾ ಸಂಸ್ಥೆಗಳು ಈ ತಂತ್ರಜ್ಞಾನವನ್ನು ಬಳಸುತ್ತವೆ. ಡೇಟಾ ಡಂಪ್ ಮೂಲಕ ಟೆಕ್ಸ್ಟ್​, ಇ-ಮೇಲ್, ಫೋಟೋಗಳು, ಅಪ್ಲಿಕೇಶನ್ಸ್​ ಹಾಗೂ ಬ್ರೌಸಿಂಗ್ ಹಿಸ್ಟರಿಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ. ಸೈಫ್ ಅಲಿ ಖಾನ್ ಪ್ರಕರಣಕ್ಕೆ ಸಂಬಂಧಿಸಿ.. ಒಂದು ಭಾಗದ ಟವರ್ ಡಂಪಿಂಗ್ ಬಳಸಿದ್ದರು. ಸಾಮಾನ್ಯವಾಗಿ ಆರೋಪಿಗಳ ಜೊತೆ ಮೊಬೈಲ್ ಇದ್ದೇ ಇರುತ್ತದೆ. ಅದೇ ರೀತಿ ಸೈಫ್ ಮೇಲೆ ದಾಳಿ ಮಾಡಿದ ಆರೋಪಿ ಹತ್ತಿರ ಮೊಬೈಲ್ ಇತ್ತು ಅನ್ನೋದು ಪೊಲೀಸರ ವಾದವಾಗಿತ್ತು.

ಇದನ್ನೂ ಓದಿ: 1 ಗಂಟೆ ಅಪಾರ್ಟ್ಮೆಂಟ್​ನಲ್ಲಿದ್ದ.. ಸೈಫ್​​ಗೆ ಚೂರಿ ಚುಚ್ಚಿದವನ ಜಾಡು ಹಿಡಿದ ಪೊಲೀಸರಿಗೆ ಏನೆಲ್ಲ ಗೊತ್ತಾಯ್ತು..?

publive-image

ಯಾವುದೇ ಒಂದು ಮೊಬೈಲ್, ಟವರ್​​ಗೆ ಕನೆಕ್ಟ್ ಆದಾಗ, ಆ ಟವರ್​ ಮೊಬೈಲ್​ನ ಖಾತೆ (Log)ಯನ್ನು ರಚಿಸುತ್ತದೆ. ಮೊಬೈಲ್‌ನ IMEI ಸಂಖ್ಯೆ, IP ವಿಳಾಸ ಸೇರಿದಂತೆ ಇತರೆ ಡೇಟಾವನ್ನು ಪಡೆದುಕೊಳ್ಳುತ್ತದೆ. ಮೊಬೈಲ್ ಆ ಪ್ರದೇಶವನ್ನು ಬಿಟ್ಟು ಮತ್ತೊಂದು ಟವರ್‌ಗೆ ಕನೆಕ್ಟ್ ಆದಾಗಲೂ ಅದರ ಲಾಗ್ ಅಲ್ಲಿಯೂ ಸೃಷ್ಟಿಯಾಗುತ್ತದೆ.

ಇದರಿಂದ ಏನು ಗೊತ್ತಾಗುತ್ತೆ..?

ಈ ಲಾಗ್‌ನಿಂದ ನಿರ್ದಿಷ್ಟ ಸಮಯದಲ್ಲಿ ಎಷ್ಟು ಮೊಬೈಲ್‌ಗಳು ಟವರ್‌ಗೆ ಸಂಪರ್ಕಗೊಂಡಿವೆ. ಅವುಗಳಲ್ಲಿ ಎಷ್ಟು ಸಕ್ರಿಯವಾಗಿವೆ ಎಂದು ತಿಳಿಯುತ್ತದೆ. ಅದರ ಆಧಾರದ ಮೇಲೆ ಟವರ್‌ನ ನೆಟ್‌ವರ್ಕ್ ಪ್ರದೇಶದಲ್ಲಿ ಫೋನ್‌ನ ಇರುವ ಸ್ಥಳ ಯಾವುದು ಮತ್ತು ಆ ಸಮಯದಲ್ಲಿ ಅದು ಸಕ್ರಿಯವಾಗಿದೆಯೇ ಎಂಬುದನ್ನು ಕಂಡುಹಿಡಿಯಬಹುದು. ಈ ತಂತ್ರಜ್ಞಾನದ ಸಹಾಯದಿಂದ ಸೈಫ್ ಮೇಲೆ ದಾಳಿ ಮಾಡಿದ ಆರೋಪಿಯ ಗುರುತು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂದ್ಹಾಗೆ ಈ ಟೆಕ್ನಿಕ್ ಬಳಸೋದು ಇದೇ ಮೊದಲಲ್ಲ. ಹಿಂದಿನಿಂದಲೂ ಇದನ್ನು ಬಳಸಲಾಗುತ್ತಿದೆ.

ಇದನ್ನೂ ಓದಿ: ಸೈಫ್ ಅಲಿ ಖಾನ್‌ ಮನೆಗೆ ನುಗ್ಗಿದ ಆಗಂತುಕ ಮೊದಲು ಮಾಡಿದ್ದೇನು? ಇಂಚಿಂಚು ಮಾಹಿತಿ ಬಹಿರಂಗ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment