ಶಾರುಖ್ ಖಾನ್​ಗೆ ಬಿಗ್ ಶಾಕ್.. ದಿಢೀರ್​ ಮನೆಗೆ ದೌಡಾಯಿಸಿದ BMC, ಅರಣ್ಯ ಅಧಿಕಾರಿಗಳು..!

author-image
Veena Gangani
Updated On
ಶಾರುಖ್ ಖಾನ್​ಗೆ ಬಿಗ್ ಶಾಕ್.. ದಿಢೀರ್​ ಮನೆಗೆ ದೌಡಾಯಿಸಿದ BMC, ಅರಣ್ಯ ಅಧಿಕಾರಿಗಳು..!
Advertisment
  • ಬೃಹತ್ ಬಂಗಲೆ ನವೀಕರಣ ಹೆಸರಲ್ಲಿ ನಡೆಯಿತಾ ದೊಡ್ಡ ಅಕ್ರಮ?
  • ಬಾಲಿವುಡ್ ಸ್ಟಾರ್, ಕುಟುಂಬಸ್ಥರು ಮನೆ ತೊರೆದು ಹೋಗಿದ್ದೇಲ್ಲಿಗೆ?
  • ಶಾರುಖ್ ಮೇಲಿನ ಆರೋಪಕ್ಕೆ ಮ್ಯಾನೇಜರ್ ಪೂಜಾ ಹೇಳಿದ್ದೇನು?

ದೇಶದ ಶ್ರೀಮಂತ ಸೆಲೆಬ್ರೆಟಿಗಳಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಒಬ್ಬರು. ದೇಶದ್ಯಾದಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್​ ನಟ ಶಾರುಖ್ ಖಾನ್ ಅವರು ಹೊಸದಾಗಿ ನಿರ್ಮಾಣ ಹಂತದಲ್ಲಿರೋ ಮನ್ನತ್ ಬಂಗಲೆಯನ್ನು ಬಿಟ್ಟು ಪತ್ನಿ ಮತ್ತು ಮಕ್ಕಳೊಂದಿಗೆ ಬೇರೆಡೆಗೆ ಸ್ಥಳಾಂತರಗೊಂಡಿದ್ದರು. ಆದ್ರೆ, ಈ ಮಧ್ಯೆ ಮುಂಬೈನಲ್ಲಿರೋ ನಟ ಶಾರುಖ್ ಖಾನ್ ಅವರ ಮನ್ನತ್ ಮನೆಗೆ ಬಿಎಂಸಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ನಟ ಶಾರುಖ್ ಖಾನ್ ಕುಟುಂಬ ಮನ್ನತ್ ಖಾಲಿ ಮಾಡ್ತಿರೋದು ಯಾಕೆ? ಇಲ್ಲಿದೆ ಅಸಲಿ ಸತ್ಯ!

ಹೌದು, ನಟ ಶಾರುಖ್ ಖಾನ್ ಅವರು ವಾಸಿಸುತ್ತಿದ್ದ ಮನ್ನತ್ ಮನೆಯಲ್ಲಿ ಅಕ್ರಮ ಚಟುವಟಿಕೆಯಲ್ಲಿ ಕಾಮಗಾರಿ ನಿರ್ಮಾಣ ಆಗುತ್ತೆ ಅಂತ ಕಾರ್ಯಕರ್ತ ಸಂತೋಷ್ ದೌಂಡ್ಕರ್ ದೂರು ದಾಖಲಿಸಿದ್ದರು. ಕಾರ್ಯಕರ್ತರು ನೀಡಿದ ದೂರಿನ ಆಧಾರದ ಮೇರೆಗೆ ಮನ್ನತ್​ ಮನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಬಿಎಂಸಿ ಸದಸ್ಯರು ತನಿಖಾ ತಂಡದರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಎಲ್ಲಾ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದೆ. ಜೊತೆಗೆ ಶೀಘ್ರದಲ್ಲೇ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ, ಶಾರುಖ್ ಖಾನ್​ ನಿವಾಸದ ಮೇಲೆ ಬಂದ ಆರೋಪದ ಬಗ್ಗೆ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿಲ್ಲ. ಎಲ್ಲಾ ಕೆಲಸಗಳು ಮಾರ್ಗಸೂಚಿಗಳ ಪ್ರಕಾರ ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಮನ್ನತ್ ಮನೆಯೂ ಪ್ರಸ್ತುತ ನವೀಕರಣ ಹಂತದಲ್ಲಿದೆ. ಸಿನಿಮಾ ನಿರ್ಮಾಪಕ ವಶು ಭಗ್ನಾನಿ ನಿರ್ಮಿಸಿದ ಐಷಾರಾಮಿ ಅಪಾರ್ಟ್‌ಮೆಂಟ್‌ನ ನಾಲ್ಕು ಮಹಡಿಗಳನ್ನು ಶಾರುಖ್ ಖಾನ್ ಬಾಡಿಗೆಗೆ ಪಡೆದುಕೊಂಡು ಅಲ್ಲೇ ಇದ್ದಾರೆ. ಈ ನಾಲ್ಕು ಮಹಡಿಗಳಿಗೆ ತಿಂಗಳಿಗೆ 24 ಲಕ್ಷ ರೂ. ಬಾಡಿಗೆ ಪಾವತಿಸುತ್ತಿದ್ದಾರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment