newsfirstkannada.com

ಎದೆ ನಡುಗಿಸುವ ದೃಶ್ಯ.. ಬ್ರಿಡ್ಜ್​​​ ಮೇಲೆ ಕಾರ್​ ನಿಲ್ಲಿಸಿ ಸಮುದ್ರಕ್ಕೆ ಜಿಗಿದ ಟೆಕ್ಕಿ.. ಆಮೇಲೇನಾಯ್ತು?

Share :

Published July 25, 2024 at 5:09pm

    ಆತ್ಮಹತ್ಯೆಗಳಿಗೆ ಹೆಸರಾಗುತ್ತಿದೆಯಾ ಮುಂಬೈನ ಅಟಲ್ ಸೇತು ಬ್ರಿಡ್ಜ್

    ಸೆಲ್ಫಿ ಹುಚ್ಚಾಟಗಳಿಗೆ ಬ್ರೇಕ್ ಬಳಿಕ ಈಗ ಆತ್ಮಹತ್ಯೆಗಳಿಗೆ ಸುದ್ದಿಯಾಗ್ತಿರುವ ಸೇತುವೆ

    38 ವರ್ಷದ ಟೆಕ್ಕಿ ಅಟಲ್ ಸೇತು ಬಳಿ ಕಾರ್ ನಿಲ್ಲಿಸಿ ಮಾಡಿದ್ದೇನು ಗೊತ್ತಾ..?:

ಮುಂಬೈ: ಪುಣೆ, ಗೋವಾ ಹಾಗೂ ದಕ್ಷಿಣ ಭಾರತಕ್ಕೆ ಹೋಗುವ ರಸ್ತೆ ಸಂಪರ್ಕವನ್ನು ಜೋಡಿಸುವ ಹಾಗೂ 2 ಗಂಟೆ ಪ್ರಯಾಣವನ್ನು 15-20 ನಿಮಿಷಕ್ಕೆ ಇಳಿಸುವ ಉದ್ದೇಶದಿಂದ ನಿರ್ಮಾಣವಾದ ಸೇತುವೆ, ಮುಂಬೈನ ಅಟಲ್ ಸೇತುವೆ. ಆದ್ರೆ ಈಗ ಅದು ಬೇರೆಯದ್ದೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಆರಂಭದಲ್ಲಿ ಸೆಲ್ಫಿಗಳ ಹುಚ್ಚಾಟಗಳಿಗೆ ಸುದ್ದಿಯಾಗಿದ್ದ ಅಟಲ್ ಸೇತುವೆ ಈಗ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಸುಸೈಡ್ ಪಾಯಿಂಟ್ ಆಗಿ ಬದಲಾಗುತ್ತಿದೆಯಾ ಅನ್ನೋ ಅನುಮಾನಗಳು ದಟ್ಟವಾಗುತ್ತಿವೆ. ಯಾಕಂದ್ರೆ ಅಟಲ್ ಸೇತುವೆಯಲ್ಲಿ ಅಳವಡಿಸಲಾದ ಸಿಸಿಕ್ಯಾಮರಾದಲ್ಲಿ ಸೆರೆಯಾದ ಒಂದು ಬೆಚ್ಚಿ ಬೀಳಿಸುವ ದೃಶ್ಯ ಇದಕ್ಕೆ ಕನ್ನಡಿ ಹಿಡಿದಂತಿದೆ.

ಇದನ್ನೂ ಓದಿ: ಭೀಕರ ಮಳೆಗೆ ತತ್ತರಿಸಿದ ಮುಂಬೈ, ಪುಣೆ.. ಎರಡು ಮಹಾನಗರಕ್ಕೆ ರೆಡ್‌ ಅಲರ್ಟ್‌; ಭಾರೀ ಎಚ್ಚರಿಕೆ!

ಅಟಲ್ ಸೇತುವೆ ಮಾರ್ಗ ಮಧ್ಯೆ ಕಾರ್ ನಿಲ್ಲಿಸಿ ಸೇತುವೆಯಿಂದ ಜಿಗಿದ ಯುವಕ

ಇಂಥಹದೊಂದು ಬೆಚ್ಚಿಬೀಳಿಸುವ ದೃಶ್ಯ ಅಟಲ್ ಸೇತುವೆಯ ಬಳಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬುಧವಾರ ಮಧ್ಯಾಹ್ನ ಸದಾ ವಾಹನಗಳಿಂದಲೇ ಗಿಜಿಗುಡುವ ಅಟಲ್ ಸೇತುವೆ ಮಾರ್ಗದಲ್ಲಿ 38 ವರ್ಷದ ವ್ಯಕ್ತಿಯೊಬ್ಬ ತನ್ನ ಟಾಟಾ ಟೆಕ್ಸಾನ್​ ಕಾರ್​​ ಅನ್ನು ಮಾರ್ಗ ಮಧ್ಯೆ ನಿಲ್ಲಿಸಿ ಸೇತುವೆಯಿಂದ ಸಮುದ್ರಕ್ಕೆ ಜಿಗಿದಿದ್ದಾನೆ

ಹೀಗೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ದೊಂಬಿವೇಲಿ ನಿವಾಸ ಕೆ ಶ್ರೀನಿವಾಸನ್ ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ಮುಂಬೈನ ಅಟಲ್ ಸೇತುವಿನ ಕೊನೆಯ ಪಾಯಿಂಟ್ ಆದ ನ್ಹಾವಾ ಸೇವಾ ಬಳಿ ತನ್ನ ಕಾರ್ ಪಾರ್ಕ್​ ಮಾಡಿ ಬ್ರಿಡ್ಜ್​ನ ಗೋಡೆಯನ್ನು ಏರಿ ಸಮುದ್ರಕ್ಕೆ ನೆಗೆದಿದ್ದಾನೆ. ಕುಟುಂಬದವರು ನೀಡಿದ ಮಾಹಿತಿ ಪ್ರಕಾರ ಶ್ರೀನಿವಾಸ್ ಕಳೆದ ಕೆಲವು ದಿನಗಳಿಂದ ವಿಪರೀತ ಆರ್ಥಕ ಸಮಸ್ಯೆಯಿಂದ ಬಳಲುತ್ತಿದ್ದರಂತೆ ಅದೇ ಕಾರಣವೇ ಅವರನ್ನು ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.+

ಇದನ್ನೂ ಓದಿ: ಅಗ್ನಿವೀರ್‌ ಕಾರು ಕದಿಯುವ ಚೋರ್ ಆದ್ನಾ? ಇಡೀ ದೇಶದಲ್ಲೇ ಬೆಚ್ಚಿ ಬೀಳಿಸಿದ ಪ್ರಕರಣ; ಆಗಿದ್ದೇನು?

ಇದೇ ತಿಂಗಳಲ್ಲಿ ಅಂದ್ರೆ ಜುಲೈ ತಿಂಗಳಿನಲ್ಲಿಯೇ ಇದು ಎರಡನೇ ಪ್ರಕರಣ ಕೆಲವು ದಿನಗಳ ಹಿಂದಷ್ಟೇ 43 ವರ್ಷದ ವೈದ್ಯೆಯೊಬ್ಬರು ಇದೇ ಅಟಲ್ ಸೇತುವಿನಿಂದ ಸಮುದ್ರಕ್ಕೆ ಜಿಗಿದ ಪ್ರಾಣ ಕಳೆದುಕೊಂಡಿದ್ರು. ಹೀಗಾಗಿ ಮೊದಲು ಸೆಲ್ಫಿಯಂತ ಹುಚ್ಚಾಟಗಳಿಗೆ ಬೀಡಾಗಿದ್ದ ಅಟಲ್ ಸೇತು, ಪೊಲೀಸರ ನಿರಂತರ ಪಹರೆಯಿಂದಾಗಿ ಕೊಂಚ ಕಡಿಮೆಯಾಗಿತ್ತು. ಈಗ ನಡೆಯುತ್ತಿರುವ ಆತ್ಮಹತ್ಯೆಯಂತಹ ಪ್ರಕರಣಗಳನ್ನು ನೋಡಿದ್ರೆ, ಅಟಲ್ ಸೇತು ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ರಹದಾರಿ ಆಗುತ್ತಿದೆಯಾ ಅನ್ನೋ ಅನುಮಾನಗಳು ಮೂಡುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎದೆ ನಡುಗಿಸುವ ದೃಶ್ಯ.. ಬ್ರಿಡ್ಜ್​​​ ಮೇಲೆ ಕಾರ್​ ನಿಲ್ಲಿಸಿ ಸಮುದ್ರಕ್ಕೆ ಜಿಗಿದ ಟೆಕ್ಕಿ.. ಆಮೇಲೇನಾಯ್ತು?

https://newsfirstlive.com/wp-content/uploads/2024/07/mumai-1.jpg

Load More