ಓಡುವ ರೈಲಿನಲ್ಲಿ ಸಾಹಸ ಮೆರೆಯಲು ಹೋದವ ಈಗ ಏನಾಗಿದ್ದಾನೆ: ರೀಲ್ಸ್​ಗಾಗಿ ಹುಚ್ಚಾಟ ಮಾಡೋರು ತಪ್ಪದೇ ನೋಡಿ

author-image
Gopal Kulkarni
Updated On
ಓಡುವ ರೈಲಿನಲ್ಲಿ ಸಾಹಸ ಮೆರೆಯಲು ಹೋದವ ಈಗ ಏನಾಗಿದ್ದಾನೆ: ರೀಲ್ಸ್​ಗಾಗಿ ಹುಚ್ಚಾಟ ಮಾಡೋರು ತಪ್ಪದೇ ನೋಡಿ
Advertisment
  • ಓಡುವ ರೈಲಿನಲ್ಲಿ ರೀಲ್ಸ್​ಗಾಗಿ ಸ್ಟಂಟ್ ಮಾಡುವವರೇ ಇಲ್ಲಿ ನೋಡಿ
  • ಹೀಗೆ ಹುಚ್ಚಾಟ ಮೆರೆಯಲು ಹೋದ ಯುವಕ ಏನಾಗಿದ್ದೇನೆ ಗೊತ್ತಾ?
  • ಒಂದು ಕೈ ಒಂದು ಕಾಲು ಕಿತ್ತುಕೊಂಡ ಸ್ಕೆಟಿಂಗ್​ ಸ್ಟಂಟ್ ಎಂಬ ಹುಚ್ಚು

ಮುಂಬೈ: ಫರ್ಹಾತ್ ಅಜಂ ಶೇಕ್​, ಹದಿಹರೆಯದ ವಯಸ್ಸಿನ ಮುಂಬೈ ನಿವಾಸಿ. ಬದುಕು ಇನ್ನೂ ದೊಡ್ಡದಿತ್ತು. ಬದುಕಿ ಅನೇಕ ಸಂತಸ ಘಳಿಗೆಗಳನ್ನು ನೋಡುವುದು ಬಾಕಿಯಿತ್ತು. ಸ್ಟಂಟ್ ಮಾಡುವ ಆತ, ಅದನ್ನು ವಿಡಿಯೋ ಮಾಡಿಕೊಂಡು ಸಾಹಸ ಮೆರೆಯುವ ಹುಚ್ಚೊಂದು ಅಂಟಿಕೊಂಡುಬಿಟ್ಟಿತ್ತು. ಫರ್ಹಾತ್ ಶೇಕ್​ಗೆ ಯಾವುದು ಅವನಿಗೆ ಸಾಹಸ ಎನಿಸಿತ್ತೊ, ಯಾವ ಸಾಹಸಗಳು ಅವನಿಗೆ ಹೆಮ್ಮೆಯ ಗರಿಯನ್ನು ಮೂಡಿಸಿತ್ತೋ ಅದೇ ಸಾಹಸ ಈಗ ಅವನನ್ನು ಯಾವ ಗತಿಗೆ ತಂದಿದೆ ಅನ್ನೋದು ನೋಡಿದ್ರೆ ಪಾಪ ಅನಿಸದೇ ಇರಲ್ಲ.

ಓಡುವ ರೈಲಿನಲ್ಲಿ ಸ್ಟಂಟ್ ಮಾಡುವ ಹುಚ್ಚಾಟ, ಒಂದು ಕೈ, ಕಾಲು ಕಳೆದುಕೊಂಡ ಹುಡುಗ ಮುಂಬೈನ ಲೋಕಲ್ ಟ್ರೇನ್​ಗಳಲ್ಲಿ ಯುವಕರು ಆಗಾಗ ಹುಚ್ಚಾಟ ಮೆರೆಯುತ್ತಿರುತ್ತಾರೆ.  ಅವರ ಸಾಲಿನಲ್ಲಿಯೇ ಇದ್ದ ಈ ಫರ್ಹಾತ್ ಅಜಂ ಶೇಕ್ ಅನ್ನೋ ಹುಡುಗ ಮಾರ್ಚ್​ 7 ರಂದು ಸೇವ್ರಿ ರೇಲ್ವೆ ಸ್ಟೇಷನ್ ವ್ಯಾಪ್ತಿ ಓಡುವ ರೈಲಿನಲ್ಲಿ ಸ್ಕೆಟಿಂಗ್ ಸ್ಟಂಟ್ಸ್ ಮಾಡಿದ್ದ ವಿಡಿಯೋವನ್ನು ಜುಲೈ 14ರಂದು ಮರಳಿ ಸೋಶಿಯಲ್ ಮಿಡಿಯಾದಲ್ಲಿ ಅಪ್​ಲೋಡ್ ಮಾಡಿದ್ದರು.

ಅದು ದೊಡ್ಡದಾಗಿ ವೈರಲ್ ಆಗಿತ್ತು. ಇಂತವರನ್ನು ಒದ್ದು ಒಳಗೆ ಹಾಕಬೇಕು ಎನ್ನುವ ಆಗ್ರಹಗಳು ಸೊಶೀಯಲ್ ಮಿಡಿಯಾದಲ್ಲಿ ಕೇಳಿ ಬಂದಿದ್ವು. ಅದಕ್ಕೆ ಸ್ಪಂದಿಸಿದ ವಡಾಲದ ರೇಲ್ವೆ ಸಂರಕ್ಷಣಾ ಪಡೆ ( RPF) ಯುವಕನನ್ನು ಪತ್ತೆ ಮಾಡಲು ಶುರು ಮಾಡಿತ್ತು. ಅವನನ್ನು ಹುಡುಕಿಕೊಂಡು ಹೋದ ಕೇಂದ್ರ ಮುಂಬೈನ ಅಂಟಾಪ್ ಹಿಲ್​ಗೆ ಹೋಗಿದ್ದ ಪೊಲೀಸ್ ಪಡೆಗೆ ಶಾಕ್ ಒಂದು ಕಾಯ್ದಿತ್ತು. ಅಂದು ದೊಡ್ಡದಾಗಿ ಓಡುವ ರೈಲಿನಲ್ಲಿ ಸ್ಕೆಟಿಂಗ್ ಸ್ಟಂಟ್ ಮಾಡಿದ್ದ ಫರ್ಹಾತ್ ಅಜಂ ಒಂದು ಕೈ ಒಂದು ಕಾಲನ್ನು ಕಳೆದುಕೊಂಡು ಮನೆಯಲ್ಲಿ ಕುಳಿತಿದ್ದ.

ಇದನ್ನೂ ಓದಿ:ಚರಂಡಿ ಪ್ರವಾಹಕ್ಕೆ ಕೊಚ್ಚಿಹೋದ IAS ಕನಸು.. ಶ್ರೇಯಾ ಯಾದವ್ ಕುಟುಂಬದ ಭರವಸೆ ಛಿದ್ರ, ಛಿದ್ರ..


">July 26, 2024

ಫರ್ಹಾತ್ ಅಜಂಗೆ ಮುಳುವಾಯ್ತು ಅವನದೇ ಹುಚ್ಚು ಸಾಹಸ

ತಾನು ಮಾಡುತ್ತಿದ್ದ ಸ್ಟಂಟ್ಸ್​ ವಿಡಿಯೋಗಳ ಮೇಲೆ ಭಾರೀ ಹೆಮ್ಮಯಿದ್ದ ಫರ್ಹಾತ್ ಅಜಂ ಇದೇ ಏಪ್ರಿಲ್ 14ರಂದು ಮಸ್ಜೀದ್ ರೇಲ್ವೆ ಸ್ಟೇಷನ್​ ಬಳಿ ಮತ್ತೆ ಅದೇ ರೀತಿಯ ಸ್ಕೆಟಿಂಗ್ ಸ್ಟಂಟ್ ಮಾಡಲು ಹೋಗಿದ್ದಾನೆ. ಈ ಬಾರಿ ವಿಧಿ ಕಾಯ್ದುಕೊಂಡು ಕುಳಿತಿತ್ತು. ಪ್ರತಿ ಬಾರಿ ಕಾಪಾಡುತ್ತಿದ್ದ ಅಜಂನ ಲಕ್ ಈ ಬಾರಿ ಕೈಕೊಟ್ಟಿತ್ತು. ಓಡುವ ರೈಲಿನಲ್ಲಿ ಸ್ಟಂಟ್ ಮಾಡಲು ಹೋಗಿ ಆಯತಪ್ಪಿ ಬಿದ್ದಿದ್ದ ಫರ್ಹಾತ್​, ತನ್ನ ಒಂದು ಕೈ, ಒಂದು ಕಾಲನ್ನು ಕಳೆದುಕೊಂಡು ಮನೆಯಲ್ಲಿ ಕುಳಿತಿದ್ದಾನೆ. ಫರ್ಹಾತ್ ಅಜಂನ ಈ ವಿಡಿಯೋವನ್ನು ಸೆಂಟ್ರಲ್ ರೈಲ್ವೆ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಇಂತಹ ಹುಚ್ಚಾಟಗಳನ್ನು ಮೆರೆಯುವ ಮುಂಚೆ ಎಚ್ಚರವಿರಲಿ ಎಂದು ಹೇಳಿದೆ ಅದು ಅಲ್ಲದೇ ಈ ರೀತಿಯ ವಿಡಿಯೋ ಮಾಡುವವರು ಕಂಡು ಬಂದರೆ ಕೂಡಲೇ ರೈಲ್ವೆ ಇಲಾಖೆಯನ್ನು ಸಂಪರ್ಕಿಸುವಂತೆ ನಂಬರ್ ಶೇರ್ ಮಾಡಿದೆ.

ಇದನ್ನೂ ಓದಿ:‘ಎಲ್ಲಿ ಪಿನ್ ಇಟ್ರೆ ಏನಾಗುತ್ತೆಂದು ಗೊತ್ತು.. ಬೆಂಗಳೂರನ್ನೇ ಶಿವಾ ಅನಿಸಿಬಿಡ್ತೀನಿ..’ ಆತಂಕ ಹುಟ್ಟಿಸಿದ ಯುವಕ

ಬದುಕಿನಲ್ಲಿ ಸಾಹಸ ಇರಬೇಕು ನಿಜ, ಆದ್ರೆ ಅದು ಸಾವಿನೊಂದಿಗೆ ಸರಸವಾಡುವಂತಹ ಸಾಹಸಗಳ ಮಟ್ಟಕ್ಕೆ ಹೋಗಬಾರದು. ಹಾಗೆ ಆದಲ್ಲಿ ಕೊನೆಗೆ ಫರ್ಹಾತ್ ಅಜಂಗೆ ಆದ ಗತಿಯೇ ಎಲ್ಲರಿಗೂ ಆಗುತ್ತದೆ. ಹುಚ್ಚಾಟಗಳನ್ನು ಮೆರೆಯುವ ಮುಂಚೆ ಎಚ್ಚರವಿರಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment