newsfirstkannada.com

ದೇಶದ ಅತಿದೊಡ್ಡ ‘ಸಮುದ್ರ ಸೇತು’ ಲೋಕಾರ್ಪಣೆ; ಭಾರತದ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ ಇದು!

Share :

Published January 13, 2024 at 6:12am

    ಸುಮಾರು 18,000 ಕೋಟಿ ವೆಚ್ಚದಲ್ಲಿ ಅಟಲ್ ಸೇತುವೆ ನಿರ್ಮಾಣ

    ಸೇವ್ರಿ ಪ್ರದೇಶ ಭಾಗದ ಬಳಿ 8.5 ಕಿಮೀ ಉದ್ದ ಶಬ್ಧ ತಡೆಗೋಡೆ

    ವಾಹನ ಸವಾರರಿಗೆ ಸಮಯ ಮತ್ತು ಇಂಧನ ಉಳಿತಾಯ

ವಾಣಿಜ್ಯ ನಗರಿ ಮುಂಬೈ ಇಡೀ ದೇಶವೇ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಸಮುದ್ರದ ಮೇಲೆ ಜೆಟ್ ಸ್ಪೀಡ್‌ನಲ್ಲಿ ಪ್ರಯಾಣಿಸಬಹುದಾದ ಸಮುದ್ರ ಸೇತುವೆಯನ್ನ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದರು. ವಾಣಿಜ್ಯ ನಗರಿ ಮುಂಬೈನಲ್ಲಿ ದೇಶದ ಅತಿ ಉದ್ಧದ ಟ್ರಾನ್ಸ್ ಹಾರ್ಬರ್ ಲಿಂಕ್ ವಾಹನಗಳ ಓಡಾಟಕ್ಕೆ ಮುಕ್ತವಾಯ್ತು. ಭಾರತದ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ. ದೇಶದ ಆಧುನಿಕ ಸಂಪರ್ಕ ಸೇತುವೆಯ ರಹದಾರಿ. ಅದುವೆ ನಿನ್ನೆ ಲೋಕಾರ್ಪಣೆಗೊಂಡಿರೋ ದೇಶದ ಅತಿಉದ್ಧದ ಸಮುದ್ರ ಸೇತುವೆ ಅಟಲ್‌ ಸೇತು.

ಅಟಲ್​ ಸೇತುವೆ ಪ್ರಧಾನಿ ‘ನಮೋ’ ಲೋಕಾರ್ಪಣೆ

ದೇಶದ ಅತೀ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮುಂಬೈನ ಅಟಲ್ ಸೇತು ಲೋಕಾರ್ಪಣೆಗೊಂಡಿದೆ. ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್​ ಅ‍ನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಅಟಲ್ ಸೇತು ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ಮೋದಿಯನ್ನ ಮಹಾರಾಷ್ಟ್ರ ಸಿಎಂ ಏಕ್‌ನಾಥ್ ಶಿಂಧೆ ಸನ್ಮಾನಿಸಿದ್ದರು. ಶಾಲು ಹೊದಿಸಿ, ಪೇಟ ಹಾಕಿ ಅಯೋಧ್ಯೆ ರಾಮಮಂದಿರ ಮಾದರಿಯ ಪ್ರತಿಮೆಯನ್ನ ಪ್ರಧಾನಿಗೆ ನೀಡಿ ಗೌರವಿಸಿದ್ದರು. ಇನ್ನು, ಟ್ರಾನ್ಸ್‌ ಹಾರ್ಬರ್ ಲಿಂಕ್‌ನ ಮಾಡೆಲ್‌ನ ಪ್ರಧಾನಿ ಮೋದಿ ಅತ್ಯಂತ ಕುತೂಹಲದಿಂದ ವೀಕ್ಷಿಸಿದ್ದರು. ಈ ವೇಳೆ ಮೋದಿಗೆ ಮಹಾರಾಷ್ಟ್ರ ಸಿಎಂ ಏಕ್‌ನಾಥ್ ಶಿಂಧೆ, ಡಿಸಿಎಂಗಳಾದ ದೇವೇಂದ್ರ ಫಡ್ನವೀಸ್‌, ಅಜಿತ್ ಪವಾರ್ ಸಾಥ್ ನೀಡಿದ್ದರು. ಅಲ್ಲದೇ ಸೇತುವೆ ಉದ್ಘಾಟನೆಗೆ ಮುನ್ನ ಪ್ರಧಾನಿ ಮೋದಿ ಮೆಗಾ ರೋಡ್ ಶೋ ನಡೆಸಿದ್ರು.

ಸಮುದ್ರ ಸೇತುವೆ ಮೂಲಕ ಪ್ರಧಾನಿ ಮೋದಿ ಪ್ರಯಾಣ

ಅಟಲ್ ಸೇತು ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ ಬಳಿಕ ಕೊಲಾಬಾದ INS ಶಿಕಾರಾದಿಂದ ನವಿ ಮುಂಬೈಗೆ ಸಮುದ್ರ ಸೇತುವೆಯ ಮೇಲೆ ಪ್ರಯಾಣಿಸಿದ್ರು. 21.8 ಕಿಮೀ ಉದ್ದದ ಆರು ಪಥದ ಸೇತುವೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. 18,000 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಈ ಸೇತುವೆಯ ನಿರ್ಮಾಣವು ಮಹತ್ವದ ಮೂಲಸೌಕರ್ಯ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಎಂಥಹ ಗಾಳಿ ಮಳೆಗೂ ಜಗ್ಗದ ಸಮುದ್ರ ಸೇತುವೆಯನ್ನ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಒಂದಾಗಿ ನಿರ್ಮಾಣ ಮಾಡಿವೆ. ಇದೀಗ ಈ ಸೇತುವೆ ವಾಹನಗಳ ಓಡಾಟಕ್ಕೆ ಮುಕ್ತವಾಗಿದೆ.

ಅಟಲ್​ ಸೇತು ಮೇಲೆ ಬೈಕ್​, ಆಟೋಗಳಿಗೆ ನಿರ್ಬಂಧ

ಸೀ ಲಿಂಕ್ ಸೇತುವೆ ಮೇಲೆ ನಾಲ್ಕು ಚಕ್ರದ ವಾಹನಗಳ ವೇಗದ ಮಿತಿಯನ್ನು 100 ಕಿಲೋ ಮೀಟರ್‌ಗೆ ನಿಗದಿ ಮಾಡಲಾಗಿದೆ. ಹೀಗಾಗಿ ಈ ಸೇತುವೆ ಮೇಲೆ ಬೈಕ್​, ಆಟೋ, ಟ್ರ್ಯಾಕ್ಟರ್​, ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ಏಕಮುಖ ಸಂಚಾರಕ್ಕೆ 250 ರೂಪಾಯಿ, ದ್ವಿಮುಖ ಸಂಚಾರಕ್ಕೆ 375 ರೂಪಾಯಿ ಟೋಲ್‌ ದರ ನಿಗದಿ ಮಾಡಲಾಗಿದೆ. ಒಂದು ವರ್ಷದ ಬಳಿಕ ಟೋಲ್​ ದರವನ್ನು ಮರು ಪರಿಷ್ಕರಣೆ ಆಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ದೇಶದ ಅತಿ ಉದ್ಧದ ಮತ್ತು ಅತಿ ದೊಡ್ಡ ಸಮುದ್ರ ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಸುತ್ತಲು ಕಡಲು. ಅದರ ಮಧ್ಯೆ ಸೇತುವೆ. ಇನ್ನು ಸೂರ್ಯಾಸ್ತದ ವೇಳೆ ನೋಡೋಕೆ ಎರಡು ಕಣ್ಣು ಸಾಲದು. ಈ ಎಲ್ಲ ಅನುಭವ ಪಡೆದುಕೊಳ್ಳಲು ವಾಹನ ಸವಾರರು ತುದಿಗಾಲಲ್ಲಿ ನಿಂತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಶದ ಅತಿದೊಡ್ಡ ‘ಸಮುದ್ರ ಸೇತು’ ಲೋಕಾರ್ಪಣೆ; ಭಾರತದ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ ಇದು!

https://newsfirstlive.com/wp-content/uploads/2024/01/atalsetu.png

Load More