ಮುಂಬೈನಿಂದ ದುಬೈಗೆ ಜಸ್ಟ್​ 2 ಗಂಟೆಯ ಪ್ರಯಾಣ.. ಏನಿದು ಅಂಡರ್​ ವಾಟರ್ ಪ್ರಾಜೆಕ್ಟ್? ಓದಲೇಬೇಕಾದ ಸ್ಟೋರಿ!

author-image
Gopal Kulkarni
Updated On
ಮುಂಬೈನಿಂದ ದುಬೈಗೆ ಜಸ್ಟ್​ 2 ಗಂಟೆಯ ಪ್ರಯಾಣ.. ಏನಿದು ಅಂಡರ್​ ವಾಟರ್ ಪ್ರಾಜೆಕ್ಟ್? ಓದಲೇಬೇಕಾದ ಸ್ಟೋರಿ!
Advertisment
  • ಮುಂಬೈನಿಂದ ದುಬೈ ತಲುಪಲು ಮುಂದೆ ಕೇವಲ 2 ಗಂಟೆ ಪ್ರಯಾಣ
  • ಯುಎಇ ಭಾರತದ ನಡುವಿನ ಒಪ್ಪಂದ ಸಾಕಾರವಾದಲ್ಲಿ ಹೊಸ ಕ್ರಾಂತಿ
  • ಅಂಡರ್​ ವಾಟರ್ ರೈಲ್​ ಲಿಂಕ್​, ಏನಿದು ಉಭಯ ರಾಷ್ಟ್ರಗಳ ಒಪ್ಪಂದ

ಮುಂಬೈ ಮತ್ತು ದುಬೈ ನಡುವಿನ ದೂರವನ್ನು ಕಡಿಮೆ ಅವಧಿಯಲ್ಲಿ ತಲುಪುವ ಅಂಡರ್ ವಾಟರ್ ರೈಲ್ ನೆಟ್ವರ್ಕ್ ಎಂಬ ಮಹಾಕ್ರಾಂತಿಗೆ ಮುನ್ನುಡಿ ಬರೆಯಲು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಭಾರತ ನಡುವೆ ಒಂದು ಒಪ್ಪಂದವಾಗಿದೆ. ಇದು ವೇಗದ ಸಮಯ, ದೂರವನ್ನು ಮತ್ತಷ್ಟು ಸಮೀಪ ಮಾಡುವ ತಂತ್ರಜ್ಞಾನ ಎಲ್ಲೆಡೆ ಇರುವ ಕಾಲ. ಇದೇ ಕಾರಣಕ್ಕೆ ಒಂದು ಸಾರಿಗೆ ಕ್ಷೇತ್ರದಲ್ಲಿ ಮಹಾಕ್ರಾಂತಿಗೆ ಮುನ್ನುಡಿ ಬರೆಯಲು ಭಾರತ ಮತ್ತು ಯುಎಇ ಸಜ್ಜಾಗಿವೆ.

ಮುಂಬೈನಿಂದ ದುಬೈ ಪ್ರಯಾಣ ಸುಮಾರು 2 ಸಾವಿರ ಕಿಲೋ ಮೀಟರ್ ದೂರದ್ದು. ನಾವು ವಿಮಾನಯಾನ ಕೈಗೊಂಡರು ಕೂಡ ಮುಂಬೈನಿಂದ ದುಬೈ ತಲುಪಲು ಸುಮಾರು 3 ಗಂಟೆ 15 ನಿಮಿಷದ ಪ್ರಯಾಣ ಮಾಡಬೇಕು. ಈಗ ಯುಎಇ ಮತ್ತು ಭಾರತ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಮುಂಬೈ ನಿಂದ ದುಬೈ ತಲುಪಲು ಕೇವಲ ಎರಡು ಗಂಟೆ ಮಾತ್ರ ಸಾಕು. ಅಂತಹದೊಂದು ಸಾರಿಗೆ ವ್ಯವಸ್ಥೆಯನ್ನ ಕಲ್ಪಿಸಲು ಉಭಯ ದೇಶಗಳು ಸಜ್ಜಾಗಿವೆ.

ಇದನ್ನೂ ಓದಿ: 140 ಕಿ.ಮೀ ಪಾದಯಾತ್ರೆ ಆರಂಭಿಸಿದ ಅನಂತ್ ಅಂಬಾನಿ.. ಪ್ರತಿದಿನ ರಾತ್ರಿ ಹೊತ್ತಲ್ಲೇ ನಡಿಗೆ! ಕಾರಣವೇನು?

ಈಗೀರುವ ತಂತ್ರಜ್ಞಾನವನ್ನು ಬಳಸಿಕೊಂಡು ಸಮುದ್ರಮಾರ್ಗದ ಮೂಲಕ ಅಂಡರ್​ ವಾಟರ್​ನಲ್ಲಿ ರೈಲು ಓಡುವಂತೆ ಮಾಡಿ ಪ್ರಯಾಣದ ಸಮಯವನ್ನು ಇಳಿಸುವ ಯೋಜನೆಯಿದು. ಇದನ್ನು ಅಂಡರ್​​ ವಾಟರ್ ರೈಲ್​ ಲಿಂಕ್ ಎಂದು ಕರೆಯಲಾಗುತ್ತದೆ. ಉಭಯ ದೇಶಗಳು ಈ ಒಂದು ಯೋಜನೆಯನ್ನು ಮುಂಬರುವ ದಿನಗಳಲ್ಲಿ ಕೈಗೆತ್ತಿಕೊಳ್ಳಲಿವೆ. ಅಂಡರ್​ವಾಟರ್​​ನಲ್ಲಿ ಹೈಸ್ಪೀಡ್ ರೈಲು ಓಡುವ ಕಾಲ ಸದ್ಯದಲ್ಲಿಯೇ ಬರಲಿದೆ.

ಇದನ್ನೂ ಓದಿ: ಟ್ರಾಫಿಕ್​ ಸಿಗ್ನಲ್​ನಲ್ಲಿ ಹೆಂಡತಿ ಮಾಡಿದ ರೀಲ್ಸ್​ನಿಂದ ಪೊಲೀಸಪ್ಪನ ಉದ್ಯೋಗವೇ ಹೋಯಿತು!

ಇನ್ನು ಅಂಡರ್​ ವಾಟರ್​ ರೈಲ್​ ಲಿಂಕ್​ ಪ್ರಾಜೆಕ್ಟ್​ನಲ್ಲಿ ಓಡುವ ರೈಲು ವೇಗ ಗಂಟೆಗೆ ಸುಮಾರು 600ಕಿಲೋ ಮೀಟರ್​​ನಿಂದ 1 ಸಾವಿರ ಕಿಲೋ ಮೀಟರ್​​ ಇರುತ್ತದೆ ಎಂದು ಹೇಳಲಾಗಿದೆ. ಈ ಮೂಲಕ ಮುಂಬೈನಿಂದ ದುಬೈ ನಡುವಿನ ಪ್ರಯಾಣದ ಅವಧಿಯನ್ನ ಕೇವಲ 2 ಗಂಟೆಗೆ ಇಳಿಸುವ ಯೋಜನೆ ಇದಾಗಿದೆ ಎಂದು ಟ್ರಾವೆಲ್ ಆ್ಯಂಡ್ ವರ್ಲ್ಡ್​ ವರದಿ ಮಾಡಿದೆ

ಈಗಾಗಲೇ ಎರಡು ದೇಶಗಳು ಈ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದು. ಒಂದು ವೇಳೆ ಈ ಯೋಜನೆಗಗೆ ಅಪ್ರೂವಲ್ ಸಿಕ್ಕಿದ್ದೇ ಆದಲ್ಲಿ. 2030ರಷ್ಟೊತ್ತಿಗೆ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ಮೂಲಕ ಉಭಯ ದೇಶಗಳ ನಡುವಿನ ಪ್ರಯಾಣ ಹಾಗೂ ವ್ಯಾಪಾರಕ್ಕೆ ಹೊಸ ಆಕಾರ ನೀಡುವ ಉದ್ದೇಶವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment