ಫೈನಲ್​ನಲ್ಲಿ ಹ್ಯಾಟ್ರಿಕ್ ಸೋಲು​.. ಮುಂಬೈ ಬೌಲಿಂಗ್ ಪರಾಕ್ರಮ, ಟ್ರೋಫಿ ಕೈ ಚೆಲ್ಲಿದ ಡೆಲ್ಲಿ ಕ್ಯಾಪಿಟಲ್ಸ್ ​

author-image
Bheemappa
Updated On
ಫೈನಲ್​ನಲ್ಲಿ ಹ್ಯಾಟ್ರಿಕ್ ಸೋಲು​.. ಮುಂಬೈ ಬೌಲಿಂಗ್ ಪರಾಕ್ರಮ, ಟ್ರೋಫಿ ಕೈ ಚೆಲ್ಲಿದ ಡೆಲ್ಲಿ ಕ್ಯಾಪಿಟಲ್ಸ್ ​
Advertisment
  • ಪ್ಲೇಯರ್ ಆಫ್​ ದೀ ಸೀರಿಸ್ ಪ್ರಶಸ್ತಿ ಪಡೆದ ಆಟಗಾರ್ತಿ ಯಾರು?
  • ಮುಂಬೈ ಇಂಡಿಯನ್ಸ್​ ಟೀಮ್ ಗೆಲುವಿಗೆ ಕಾರಣವಾದ್ರಾ ಬೌಲರ್ಸ್​?
  • ಡೆಲ್ಲಿ ತಂಡದಲ್ಲಿ ಬ್ಯಾಟಿಂಗ್ ಬಲ ಕಾಯ್ದುಕೊಳ್ಳುವಲ್ಲಿ ವಿಫಲ

ಮಹಿಳಾ ಪ್ರೀಮಿಯರ್ ಲೀಗ್ (WPL) ಫೈನಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮಹಿಳಾ ಟೀಮ್ ವಿರುದ್ಧ ಮುಂಬೈ ಇಂಡಿಯನ್ಸ್​ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಡಬ್ಲುಪಿಎಲ್​ನಲ್ಲಿ 2ನೇ ಬಾರಿಗೆ ಟ್ರೋಫಿಯನ್ನು ಮುಂಬೈ ಯುವತಿಯರು ಮುಡಿಗೇರಿಸಿಕೊಂಡಿದ್ದಾರೆ. ಫೈನಲ್​ನಲ್ಲಿ ಡೆಲ್ಲಿ ಹ್ಯಾಟ್ರಿಕ್ ಸೋಲು ಕಾಣುವ ಮೂಲಕ ನಿರಾಸೆಗೆ ಒಳಗಾಗಿದ್ದಾರೆ.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಡೆಲ್ಲಿ ಕ್ಯಾಪ್ಟನ್ ಮೆಗ್​ ಲ್ಯಾನಿಂಗ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಒಳ್ಳೆಯದ್ದೇ ಆಗಿತ್ತು. ಏಕೆಂದ್ರೆ ಮೊದಲ ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್​ ಆಟಗಾರ್ತಿಯರ ಮೇಲೆ ಒತ್ತಡ ತಂದಿದ್ದರು. ಹೀಗಾಗಿಯೇ ಹರ್ಮನ್​ ಪ್ರೀತ್ ಕೌರ್ 66 ಹಾಗೂ ನ್ಯಾಟ್ ಸಿವರ್-ಬ್ರಂಟ್ 30 ರನ್​ ಬಿಟ್ಟರೇ ಉಳಿದವರು ಯಾರು 14 ರನ್​ಗಳ ಗಡಿ ದಾಟಲಿಲ್ಲ. ಇದರಿಂದ ಮುಂಬೈ 20 ಓವರ್​ಗಳಲ್ಲಿ 7 ವಿಕೆಟ್​ಗೆ ಕೇವಲ 149 ರನ್​ಗಳನ್ನು ಮಾತ್ರ ಗಳಿಸಿತ್ತು.

ಈ ಸುಲಭ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲಿ ದೊಡ್ಡ ಆಘಾತಕ್ಕೆ ಒಳಗಾಯಿತು. ಶಫಾಲಿ ವರ್ಮಾ 4 ರನ್​ಗೆ ಔಟ್ ಆಗುವ ಮೂಲಕ ತಂಡಕ್ಕೆ ದೊಡ್ಡ ಪಟ್ಟು ಬಿತ್ತು. ಇವರಾದ ಮೇಲೆ ವಿಕೆಟ್ ಬೀಳುತ್ತ ಹೋದವು. ಕಡಿಮೆ ರನ್​ ಎಂದು ಗೆಲುವಿನ ಉತ್ಸಾಹದಲ್ಲಿದ್ದ ಡೆಲ್ಲಿ, ಮುಂಬೈ ಆಟಗಾರ್ತಿಯರ ಬೌಲಿಂಗ್​ ಪರಾಕ್ರಮದ ಮುಂದೆ ನಿರಾಸೆಯಡಿಗೆ ಸಾಗಿತು. ಕ್ಯಾಪ್ಟನ್ ಮೆಗ್​ ಕೂಡ 13 ರನ್​ಗೆ ವಿಕೆಟ್​ ಒಪ್ಪಿಸಿರುವುದು ಡೆಲ್ಲಿಗೆ ಹಿನ್ನಡೆ ಆಗಿತ್ತು.

ಇದನ್ನೂ ಓದಿ: ನ್ಯೂ RCB ಟೀಮ್ ಹೇಗಿದೆ.. ಬಲಿಷ್ಠ ತಂಡದ ಸ್ಟ್ರೆಂಥ್​​​- ವೀಕ್ನೆಸ್ ಏನೇನು ಇವೆ?

publive-image

ಜೆಮಿಮಾ ರೋಡ್ರಿಗಸ್ 30, ಮರಿಜಾನ್ನೆ ಕಪ್ಪ್ 40, ನಿಕಿ ಪ್ರಸಾದ್ 25 ರನ್​ಗಳನ್ನು ಬಿಟ್ಟರೇ ಉಳಿದ ಆಟಗಾರ್ತಿಯರು 14 ರನ್​ಗಳ ಸನಿಹಕ್ಕೂ ಬರಲಾಗದೇ ವಿಕೆಟ್​ ಒಪ್ಪಿಸುತ್ತಿದ್ದರು. ಇದು ಮುಂಬೈ ಬೌಲಿಂಗ್​ಗೆ ಪುಷ್ಟಿ ನೀಡಿತು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್​ ಗುರಿ ಮುಟ್ಟಲಾಗದೇ 9 ವಿಕೆಟ್​ ಕಳೆದುಕೊಂಡು 141 ರನ್​ ಮಾತ್ರ ಗಳಿಸಿ, 8 ರನ್​ಗಳಿಂದ ಟ್ರೋಫಿ ಬಿಟ್ಟುಕೊಟ್ಟಿತು. ಮುಂಬೈ ಪರವಾಗಿ ಮ್ಯಾಥ್ಯೂಸ್, ಇಸ್ಮಾಯಿಲ್, ಸೈಕಾ ಇಶಾಕ್ ತಲಾ 1 ವಿಕೆಟ್​, ಅಮೆಲಿಯಾ ಕೆರ್ 2 ವಿಕೆಟ್​ ಕಬಳಿಸಿದ್ರೆ, ಆಲ್​​ರೌಂಡರ್ ನ್ಯಾಟ್ ಸಿವರ್-ಬ್ರಂಟ್ ಬ್ಯಾಟಿಂಗ್​ನಲ್ಲಿ 30 ರನ್​ ಜೊತೆಗೆ ಭರ್ಜರಿಯಾದ 3 ವಿಕೆಟ್​ ಕಬಳಿಸಿ ಪ್ಲೇಯರ್ ಆಫ್​ ದೀ ಸೀರಿಸ್ ಪ್ರಶಸ್ತಿ ಪಡೆದುಕೊಂಡರು.

ಡೆಲ್ಲಿ ಕ್ಯಾಪಿಟಲ್ಸ್​ ಸತತವಾಗಿ 3ನೇ ಬಾರಿಗೆ ಫೈನಲ್​ಗೆ ಬಂದು ಟ್ರೋಫಿ ಗೆಲ್ಲದೇ ನಿರಾಸೆಯಿಂದ ಹಿಂದಿರುಗುತ್ತಿದೆ. 2023ರ ಮೊದಲ ಡಬ್ಲುಪಿಎಲ್​ನಲ್ಲೂ ಮುಂಬೈ ವಿರುದ್ಧವೇ, ಇದೇ ಸ್ಟೇಡಿಯಂನಲ್ಲಿ ಡೆಲ್ಲಿ ನೆಲ ಕಚ್ಚಿತ್ತು. ಈಗ ಮತ್ತೆ ಅದೇ ಸ್ಟೇಡಿಯಂ ಹಾಗೂ ಅದೇ ಟೀಮ್ ವಿರುದ್ಧ ಮುಖಭಂಗ ಅನುಭವಿಸಿದೆ. 2ನೇ ಟ್ರೋಫಿಯನ್ನು ಆರ್​ಸಿಬಿ ಟೀಮ್, ಡೆಲ್ಲಿ ವಿರುದ್ಧ ಗೆದ್ದಿತ್ತು. ​

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment