/newsfirstlive-kannada/media/post_attachments/wp-content/uploads/2025/05/Varli_Metro.jpg)
ಮುಂಬೈ: ಮಹಾರಾಷ್ಟ್ರದ ಬಹುತೇಕ ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದ್ದು ಓರ್ವ ಜೀವ ಕಳೆದುಕೊಂಡಿದ್ದು 48 ಜನರನ್ನು ರಕ್ಷಣೆ ಮಾಡಲಾಗಿದೆ. ಇದರ ಜೊತೆ ಮುಂಬೈ ನಗರದಲ್ಲೂ ಭಾರೀ ಮಳೆ ಸುರಿಯುತ್ತಿದ್ದು ಮೊನ್ನೆ ಮೊನ್ನೆ ಉದ್ಘಾಟನೆ ಮಾಡಿದ್ದ ಮೆಟ್ರೋ ನಿಲ್ದಾಣದ ಅಂಡರ್ಗ್ರೌಂಡ್ವೊಂದು ಮಳೆನೀರಿಂದ ತುಂಬಿದ್ದು ಭಾಗಶಃ ಕಾರ್ಯನಿರ್ವಹಿಸಲಿಲ್ಲ ಎಂದು ಹೇಳಲಾಗಿದೆ.
ಮುಂಬೈಯ ಅಕ್ವಾ ಲೈನ್ (ಮೆಟ್ರೋ ಲೈನ್- 3) ವರ್ಲಿ ಪ್ರದೇಶದಲ್ಲಿರುವ ಮೆಟ್ರೋ ನಿಲ್ದಾಣದ ಅಂಡರ್ಗ್ರೌಂಡ್ ಅನ್ನು ಇತ್ತೀಚೆಗಷ್ಟೇ ಉದ್ಘಾಟನೆ ಮಾಡಲಾಗಿತ್ತು. ಆದರೆ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವರ್ಲಿಯ ಮೆಟ್ರೋ ನಿಲ್ದಾಣದ ಅಂಡರ್ಗ್ರೌಂಡ್ ಎಲ್ಲಾ ನೀರೋ ನೀರಾಗಿದೆ. ಎಲ್ಲಿ ನೋಡಿದರೂ ನೀರು ನಿಂತಿದ್ದು ಜನರು ಓಡಾಡದಂತೆ ಪರಿಸ್ಥಿತಿ ಎದುರಾಗಿದೆ.
ಇದರಿಂದ ಎಚ್ಚರಗೊಂಡ ಮೆಟ್ರೋ ಸಿಬ್ಬಂದಿ ಯಾವುದೇ ಕಹಿ ಘಟನೆ ನಡೆಯದಂತೆ ಮೊದಲೇ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಿದ್ದರು. ನಿಲ್ದಾಣದಲ್ಲಿರುವ ಸ್ಜೈ ವಾಕ್ ಮೇಲೆಯೂ ನೀರು ಹರಿದು ಬಂದಿದ್ದರಿಂದ ಸ್ಕೈವಾಕ್ ಅನ್ನು ಮೊದಲೇ ನಿಲ್ಲಿಸಲಾಗಿತ್ತು. ಆದರೂ ಕೆಲವರು ಇದರ ಮೇಲೆ ಭಯವಿಲ್ಲದೇ ನಡೆದು ಹೋದರು. ವಾಣಿಜ್ಯ ನಗರಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ:RCBಗೆ ಗುಡ್ನ್ಯೂಸ್; ವಾಪಸ್ ಬಂದ ಬಲಿಷ್ಠ ಪ್ಲೇಯರ್.. ತಂಡಕ್ಕೆ ಬಂತು ಆನೆಬಲ
ಮೆಟ್ರೋ ನಿಲ್ದಾಣ ಮಾಡುವಾಗ ಒಳಗೆ ಮಳೆ ನೀರು ಹರಿದು ಹೋಗದಂತೆ ಯಾವುದೇ ಕಾಮಗಾರಿ ಮಾಡದ ಹಿನ್ನೆಲೆಯಲ್ಲಿ ಈ ರೀತಿ ಆಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೆಟ್ರೋ ನಿಲ್ದಾಣದ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿದ್ದು ನೆಟ್ಟಿಗರು ಸರ್ಕಾರದ ಕೆಲಸಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಮುಂಬೈ ನಗರಕ್ಕೆ ನೈಋತ್ಯ ಮಾನ್ಸೂನ್ 16 ದಿನಗಳ ಮುಂಚಿತವಾಗಿಯೇ ಆಗಮಿಸಿ ಅವಾಂತರಗಳು ಸೃಷ್ಟಿ ಮಾಡಿದೆ. ನಗರದ ಕೊಲಾಬಾ ವೀಕ್ಷಣಾಲಯವು 295 ಮಿಮೀ ಮಳೆ ದಾಖಲಿಸುವುದರೊಂದಿಗೆ, ಮುಂಬೈ 107 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. 75 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಇಂತಹ ದೊಡ್ಡ ಮಳೆಯಾಗಿದೆ. ಈ ಹಿಂದೆ 1918 ಮೇನಲ್ಲಿ 279.4 ಮಿಲಿ ಮೀಟರ್ ಮಳೆಯಾಗಿತ್ತು. ಈಗ 295 ಮಿಲಿ ಮೀಟರ್ ಮಳೆ ಆಗಿದೆ.
#BREAKING: Inaugurated on 9th May, inundated on 26th May. Worli metro station in Mumbai. #Rainspic.twitter.com/G3eTfZmbH9
— Justin J. Thomas (@Just_insync)
#BREAKING: Inaugurated on 9th May, inundated on 26th May. Worli metro station in Mumbai. #Rainspic.twitter.com/G3eTfZmbH9
— Justin J. Thomas (@Just_insync) May 26, 2025
">May 26, 2025
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ