Advertisment

ಶಾಸಕ ಮುನಿರತ್ನ ವಿರುದ್ಧದ ಪ್ರಕರಣ ತನಿಖೆಗೆ SIT ರಚನೆ.. ತನಿಖೆ ಹೇಗೆಲ್ಲಾ ನಡೆಯುತ್ತೆ ಗೊತ್ತಾ?

author-image
AS Harshith
Updated On
BJP ಶಾಸಕ ಮುನಿರತ್ನಗೆ ಬಿಗ್ ಶಾಕ್‌.. ಒಕ್ಕಲಿಗ ಸಮುದಾಯಕ್ಕೆ ಮಣಿದ ಸರ್ಕಾರ ಮಹತ್ವದ ಆದೇಶ; ಏನದು?
Advertisment
  • ಅತ್ಯಾಚಾರ ಪ್ರಕರಣದ ಆರೋಪದಲ್ಲಿ ಮತ್ತೆ ಅರೆಸ್ಟ್​​
  • ಮುನಿರತ್ನ ವಿಚಾರಣೆಗೆ ವಿಶೇಷ ತನಿಖಾ ತಂಡ ರಚನೆ
  • ಬಾಡೀವಾರೆಂಟ್ ಮೇಲೆ ತನಿಖೆ ನಡೆಯುತ್ತಾ?

ಬಿಜೆಪಿ ಶಾಸಕ ಮುನಿರತ್ನ ಕೇಸ್‌ ತನಿಖೆಗೆ ಎಸ್‌ಐಟಿ ರಚನೆಯಾಗಿದೆ. ಎಸ್‌ಐಟಿ ರಚನೆ ಮಾಡಿ ಸರ್ಕಾರದ ಆದೇಶ ಕೂಡ ಹೊರಡಿಸಿದೆ. ಮುಂದಿನ ತನಿಖೆ ಹೇಗಿರಲಿದೆ ಅನ್ನೋದರ ಬಗ್ಗೆ ಕಂಪ್ಲೀಟ್​ ಡೀಟೇಲ್ಸ್​ ಇಲ್ಲಿದೆ.

Advertisment

ಕುರುಕ್ಷೇತ್ರದ ಸಿನಿಮಾ ಹೀರೋ ಕೊಲೆ ಕೇಸ್​ನಲ್ಲಿ ಬಳ್ಳಾರಿ ಜೈಲ್ಲಿನಲ್ಲಿದ್ರೆ. ಪ್ರೊಡ್ಯೂಸರ್ ಆರ್​ಆರ್​ ನಗರದ ಸ್ಟೇಷನ್​ನಿಂದ ​ಬೆಂಗಳೂರು ಜೈಲಿಗೆ ಪರಪ್ಪನ ಅಗ್ರಹಾರದಿಂದ ಕಗ್ಗಲಿಪುರ ಸ್ಟೇಷನ್​ ಅಂತಾ ಪೊಲೀಸ್ ಠಾಣೆಯಲ್ಲಿ ಒದ್ದಾಡುವಂತಾಗಿದೆ. ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ಅಖಾಡಕ್ಕೆ ಎಂಟ್ರಿಕೊಟ್ಟಿದೆ.

ಬಿ.ಕೆ ಸಿಂಗ್‌ ನೇತೃತ್ವದಲ್ಲಿ ತಂಡ ರಚನೆ ಮಾಡಿ ಸರ್ಕಾರ ಆದೇಶ

ಮುನಿರತ್ನ ವಿರುದ್ಧ ಜಾತಿನಿಂದನೆ, ಜೀವಬೆದರಿಕೆ, ಅತ್ಯಾಚಾರ ಕೇಸ್ ದಾಖಲಾಗಿದೆ. ಇದೀಗ ಈ ಎಲ್ಲಾ ಕೇಸ್‌ಗಳ ತನಿಖೆ ನಡೆಸಲು ಸಿಐಡಿ ಅಪರ ಪೋಲಿಸ್ ಮಹಾನಿರ್ದೇಶಕ ಬಿ.ಕೆ ಸಿಂಗ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆಯಾಗಿದೆ. ಈ ತಂಡದಲ್ಲಿ ಸದಸ್ಯರಾಗಿರುವ ಕೇಂದ್ರ ವಲಯ ಪೋಲಿಸ್ ಮಹಾನಿರೀಕ್ಷಕ ಲಭೂರಾಮ್, ರೈಲ್ವೇಸ್ ಪೋಲಿಸ್ ಅಧೀಕ್ಷಕಿ ಸೌಮ್ಯಲತಾ ಹಾಗೂ ಪೋಲಿಸ್ ಅಧೀಕ್ಷಕ ಸೈಮನ್ ಕೂಡ ಇದ್ದಾರೆ.

ಹೇಗೆ ನಡೆಯುತ್ತೆ SIT ತನಿಖೆ?

ಶಾಸಕ ಮುನಿರತ್ನ ವಿರುದದ್ಧ ಪ್ರಕರಣಗಳನ್ನ ಎಸ್ಐಟಿಯಿಂದ ತನಿಖೆ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬಾಡೀವಾರೆಂಟ್ ಮೇಲೆ ಮುನಿರತ್ನರನ್ನ ಪಡೆದು ತನಿಖೆ ನಡೆಸುವ ಸಾಧ್ಯತೆ ಇದೆ. ಮೊದಲಿಗೆ ಕಗ್ಗಲಿಪುರ ಪೊಲೀಸರು ನಡೆಸಿರುವ ತನಿಖೆಯ ಮಾಹಿತಿಯನ್ನ ಎಸ್ಐಟಿ ತಂಡ ಪಡೆಯಲಿದೆ. ಸಂತ್ರಸ್ತೆಯಿಂದ ಮತ್ತೊಮ್ಮೆ ಹೇಳಿಕೆಯನ್ನ ದಾಖಲಿಸಿಕೊಂಡು, ಅತ್ಯಾಚಾರ ಹಾಗೂ ಹನಿಟ್ರ್ಯಾಪ್ ಸಂಬಂಧ ತನಿಖೆ ನಡೆಸಲಿದೆ.

Advertisment

ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳ ತನಿಖೆಯನ್ನ ಕೈಗೆತ್ತಿಕೊಳ್ಳಲಿದೆ. ಎಫ್​ಐಆರ್​ನಲ್ಲಿ ಸಂತ್ರಸ್ತೆ ನೀಡಿರುವ ಮಾಹಿತಿಯ ಆಧಾರದ ಮೇಲೆ ಮತ್ತೆ ಮುನಿರತ್ನ ವಿಚಾರಣೆ ಮುಂದುವರೆಯಲಿದ್ದು, ಎಸ್ಐಟಿ ಅಧಿಕಾರಿಗಳು ಟೆಕ್ನಿಕಲ್ ಎವಿಡೆನ್ಸ್ ಕೂಡ ಕಲೆಕ್ಟ್ ಮಾಡಲಿದ್ದಾರೆ.

ಇನ್ನೂ ಮುನಿರತ್ನ ಕೇಸ್​ ಸಂಬಂಧ ಸಚಿವ ಪ್ರಿಯಾಂಕ್​ ಖರ್ಗೆ ‘ಎಕ್ಸ್​’ನಲ್ಲಿ ಬಿಜೆಪಿಗರ ಕಾಲೆಳೆದಿದ್ದಾರೆ. ಬಿಜೆಪಿಯಲ್ಲಿ ಎರಡು ರೀತಿಯ ರತ್ನಗಳಿದ್ದಾರೆ. ಮೌನ ರತ್ನಗಳು ಹಾಗೂ ಮುನಿ ರತ್ನಗಳು ಎಂದು ಟೀಕೆ ಮಾಡಿದ್ದಾರೆ.

Advertisment


">September 21, 2024

ಒಟ್ಟಾರೆ, ಜಾತಿ ನಿಂದನೆ ಸೇರಿದಂತೆ ಯಾವೆಲ್ಲ ಪ್ರಕರಣಗಳು ಮುನಿರತ್ನ ವಿರುದ್ಧ ದಾಖಲಾಗಿವೆಯೋ ಆ ಎಲ್ಲ ಪ್ರಕರಣಗಳ ಕುರಿತು ಎಸ್​ಐಟಿ ತನಿಖೆ ಇವತ್ತಿನಿಂದ ಶುರು ಆಗಲಿದೆ. ಇನ್ನೂ ಮುನಿರತ್ನಗೆ ಎಸ್​ಐಟಿ ಕೊಡೋ ಟ್ವಿಸ್ಟ್​ ಅಂಡ್​ ಟರ್ನ್ ಹೇಗಿರುತ್ತೋ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment