ಆಕೆ ನನಗೆ ಚೆನ್ನಾಗಿ ಪರಿಚಯ- ಮಹಿಳೆಯ ಗಂಭೀರ ಆರೋಪಕ್ಕೆ ಟ್ವಿಸ್ಟ್ ಕೊಟ್ಟ ಮುನಿರತ್ನ

author-image
Ganesh
Updated On
BREAKING: ಬಿಜೆಪಿ ಶಾಸಕ ಮುನಿರತ್ನ ಬಂಧನ; ಕಾರಣವೇನು?
Advertisment
  • ಪೊಲೀಸರ ತನಿಖೆ ವೇಳೆ ಮುನಿರತ್ನ ಅಚ್ಚರಿಯ ಹೇಳಿಕೆ
  • ಗಂಭೀರ ಪ್ರಕರಣದಲ್ಲಿ ಮತ್ತೆ ಅರೆಸ್ಟ್ ಆಗಿರುವ ಮುನಿರತ್ನ
  • ಜಾತಿ ನಿಂದನೆ, ಜೀವ ಬೆದರಿಕೆ ಕೇಸ್​ನಲ್ಲಿ ಮುನಿರತ್ನಗೆ ಜಾಮೀನು

ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಕೇಸ್​ನಲ್ಲಿ ಜಾಮೀನು ಪಡೆದಿದ್ದ ಶಾಸಕ ಮುನಿರತ್ನ ನಾಯ್ಡುರನ್ನು ಪೊಲೀಸರು ಮತ್ತೆ ನಿನ್ನೆ ಬಂಧಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.

ಮುನಿರತ್ನ ವಿರುದ್ಧ ಮಹಿಳೆ ಓರ್ವಳು ಗಂಭೀರ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರ ತನಿಖೆ ವೇಳೆ ಮುನಿರತ್ನ ಅವರು ಏನೆಲ್ಲಾ ಹೇಳಿಕೆ ನೀಡಿದ್ದಾರೆ ಅನ್ನೋ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಆಕೆಯೇ ಹನಿಟ್ರ್ಯಾಪ್ ಮಾಡ್ತಿದ್ಳು. ಅವಳೇ ವಿಡಿಯೋ ಮಾಡಿ ನನಗೆ ತೋರಿಸ್ತಿದ್ದಳು. ದೂರುದಾರೆ ನನಗೆ ತುಂಬಾ ಚೆನ್ನಾಗಿ ಪರಿಚಯ ಇದೆ. ಆಕೆಯ ವೃತ್ತಿಯೇ ಹನಿಟ್ರ್ಯಾಪ್ ಮಾಡೋದು, ಹಣ ಮಾಡೋದು. ಆಕೆ ಸಾಕಷ್ಟು ವಿಡಿಯೋ ಮಾಡಿ‌ ನನಗೆ ತೋರಿಸುತ್ತಿದ್ದಳು. ನಿಮಗೆ ಯಾರ ವಿಡಿಯೋ ಬೇಕು ಹೇಳಿ, ನಿಮ್ಮ ದುಷ್ಮನ್ ಯಾರಿದ್ದಾರೆ ಹೇಳಿ ವಿಡಿಯೋ ಮಾಡಿಕೊಡ್ತೀನಿ ಎಂದು ನನಗೆ ಆಫರ್ ಕೊಟ್ಟಿದ್ದಳು. ಆದರೆ ನಾನು ಇದಕ್ಕೆ ಒಪ್ಪಿರಲಿಲ್ಲ. ನನಗೆ ಅಧಿಕಾರದ ಆಸೆ ಇಲ್ಲ. ಹಣ ಮಾಡುವ ಆಸೆಯೂ ಇಲ್ಲ. ನಾನ್ಯಾಕೆ ವಿಡಿಯೋ ಮಾಡಿಸಲಿ ಎಂದು ಹೇಳಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಬೂಮ್ರಾ ಔಟ್, ಕಿಶನ್ ಇನ್! KL ರಾಹುಲ್​​ಗೆ ಇಲ್ಲ ಸ್ಥಾನ? 2ನೇ ಟೆಸ್ಟ್​ಗೆ ಸಂಭಾವ್ಯ ತಂಡ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment