/newsfirstlive-kannada/media/post_attachments/wp-content/uploads/2024/09/BJP-MLA-Munirathana-2.jpg)
ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಮುನಿರತ್ನ ಬಿಡುಗಡೆಯಾಗಿದ್ದು, ಜಾಮೀನಿನ ಮೂಲಕ ಹೊರ ಬಂದಿದ್ದಾರೆ.
ಲೈಂಗಿಕ ದೌರ್ಜನ್ಯ ಮತ್ತು ಬೆದರಿಕೆ ಕೇಸ್‌ನಲ್ಲಿ ಮುನಿರತ್ನ ಅರೆಸ್ಟ್ ಆಗಿದ್ದರು. ಸಂತ್ರಸ್ತೆಯ ದೂರಿನಿಂದ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರಿಂದ ಬಿಡುಗಡೆಗೊಂಡ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋಗಿದ್ದಾರೆ.
ಅತ್ಯಾಚಾರ ಆರೋಪದಲ್ಲಿ ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗಾಗಲೇ ಎರಡು ಕೇಸ್‌ನಲ್ಲಿ ಜಾಮೀನು ಪಡೆದಿದ್ದ ಮುನಿರತ್ನ ಅವರು ಈಗ ಅತ್ಯಾಚಾರ ಪ್ರಕರಣದಲ್ಲೂ ಷರತ್ತು ಬದ್ಧ ಜಾಮೀನು ಪಡೆದು ಹೊರ ಬಂದಿದ್ದಾರೆ.
ಅಂದು ಹೇಳಿದೆ? ಸಂತ್ರಸ್ತೆ ಹೇಳಿದ್ದೇನು?
2020ರಲ್ಲಿ ಶಾಸಕ ಮುನಿರತ್ನ ಅವರ ಪರಿಚಯ ನನಗೆ ಆಗುತ್ತೆ. ಕೋವಿಡ್ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್‌ಗೆ 5 ಸಾವಿರ ಮಾಸ್ಕ್ ಅನ್ನು ಕೊಟ್ಟಿದ್ದೆ. ಆ ಸಂದರ್ಭದಲ್ಲಿ ಮುನಿರತ್ನ ಅವರು ನನಗೆ ಪರಿಚಯ ಆಗಿದ್ದರು. ಆಗ ಮುನಿರತ್ನ ಅವರು ನನಗೆ ನಿಮ್ಮಿಂದ ಒಂದು ಸಹಾಯ ಆಗಬೇಕು. ಟೈಮ್ ಬಂದಾಗ ಕೇಳ್ತೀನಿ ಅಂತ ಹೇಳಿ ಫೋನ್ ನಂಬರ್ ತೆಗೆದುಕೊಳ್ಳುತ್ತಾರೆ. ಆಗಲೇ ಮುನಿರತ್ನ ಹಾಗೂ ನನ್ನ ಫೋನ್ ನಂಬರ್ ಎಕ್ಸ್‌ಚೇಂಜ್ ಆಗುತ್ತೆ.
ಇದನ್ನೂ ಓದಿ: ಸಲ್ಮಾನ್ ಖಾನನ್ನು ಕೊಲ್ಲುವುದೇ ಲಾರೆನ್ಸ್ ಬಿಷ್ಣೋಯ್ ಗುರಿ! ಖ್ಯಾತ ನಿರ್ದೇಶಕ ಹೀಗಂದಿದ್ಯಾಕೆ?
ಫೋನ್ ನಂಬರ್ ತೆಗೆದುಕೊಂಡ ಬಳಿಕ ಮುನಿರತ್ನ ಅವರು ಪದೇ ಪದೇ ನನಗೆ ವೀಡಿಯೋ ಕಾಲ್ ಮಾಡುತ್ತಾರೆ. ಗೋಡೌನ್‌ಗೆ ಬರೋಕೆ ಹೇಳ್ತಾರೆ. ಅಲ್ಲಿಗೆ ಹೋದ ಮೇಲೆ ನನ್ನ ತಬ್ಬಿಕೊಳ್ಳುತ್ತಾರೆ. ನೀವು ನನ್ನ ತಂದೆ ಸಮಾನ ಅಂಥ ಹೇಳಿದ್ರು ಅವರು ನನ್ನ ಬಿಡಲ್ಲ. ಅದಾದ ಬಳಿಕ ನನಗೆ ಬೆದರಿಕೆ ಹಾಕುತ್ತಾರೆ. ಈ ಹಿಂದೆ ಕಂಪ್ಲೇಂಟ್ ಮಾಡಿದಾಗ ಬೆದರಿಕೆ ಹಾಕಿದ್ದರು.
ಸ್ವಲ್ಪ ದಿನಗಳ ಬಳಿಕ ಮುನಿರತ್ನ ಅವರು ಮತ್ತೆ ನನ್ನ ಕರೀತಾರೆ. ಇನ್ನೊಬ್ಬರ ವಿಡಿಯೋ ಬೇಕು ಅಂತ ಹೇಳುತ್ತಾರೆ. ನಾನು ಆಗಲ್ಲ ಅಂದ್ರೆ ಅವರು ಕೇಳಲ್ಲ. ನೀನು ಮಾಡಿಲ್ಲ ಅಂದ್ರೆ ನಿನ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಾರೆ ಎಂದಿದ್ದರು. ಹೀಗೆ ಕ್ಯಾಮೆರಾ ಫಿಕ್ಸ್ ಮಾಡಿ ಮಾಜಿ ಸಿಎಂ ಅವರು ಸ್ಟಿಂಗ್ ಆಗಿರೋದು ನಿಜ ಎಂದು ಸಂತ್ರಸ್ತೆ ಹೇಳಿದ್ದಾರೆ.
ಇದನ್ನೂ ಓದಿ: 24/7 ಪೊಲೀಸ್ ಗಸ್ತು, AI ವ್ಯವಸ್ಥೆಯ CCTV ಕ್ಯಾಮೆರಾ; ಹೇಗಿದೆ ಸಲ್ಮಾನ್ ಖಾನ್ ನಿವಾಸಕ್ಕೆ ಭದ್ರತೆ..?
ನಿನ್ನ ಮಕ್ಕಳ ಮೇಲೆ ಲಾರಿ ಹತ್ತಿಸುತ್ತೇನೆ. ನಿನ್ನ ಗಂಡನಿಗೆ ಹೇಳ್ತೀನಿ ಅಂಥ ಭಯಪಡಿಸಿದ್ದರು. ಹಾಗಾಗಿ ನಾನು ಟ್ರ್ಯಾಪ್ ಮಾಡೋಕೆ ಒಪ್ಪಿಕೊಂಡಿದ್ದೆ. ಮಾಜಿ ಸಿಎಂಗೂ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ. ಬಹಳಷ್ಟು ಜನ ಮುಖಂಡರು, ಮಾಜಿ ಸಿಎಂಗಳ ವಿಡಿಯೋ ಇದೆ. ನಾನು ಮಾತ್ರ ಅಲ್ಲ ಬೇರೆಯವರನ್ನೂ ಬಳಸಿಕೊಂಡು ಸ್ಟಿಂಗ್ ಮಾಡಿದ್ದಾರೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.
ಸಂತ್ರಸ್ಥೆ ಪರ ವಕೀಲರು, ಇಬ್ಬರು ಮಾಜಿ ಸಿಎಂಗಳ ಹನಿಟ್ರ್ಯಾಪ್ ಆಗಿದೆ. ಅವರು ಮಿನಿಸ್ಟರ್ ಸ್ಥಾನಕ್ಕೋಸ್ಕರ ಹೀಗೆಲ್ಲಾ ಮಾಡಿದ್ದಾರೆ. ರಾಜಕೀಯ ವ್ಯಕ್ತಿಗಳು ಸೇರಿದಂತೆ ಹಲವರ ಹನಿಟ್ರ್ಯಾಪ್ ಆಗಿದೆ ಎಂದು ಹೇಳಿದ್ದರು. ಈ ಸಂಬಂಧ ಮುನಿರತ್ನ ಜೈಲು ಸೇರಿದ್ದಾರೆ. ಆದರೀಗ ಜಾಮೀನಿನ ಮೂಲಕ ಹೊರಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ