newsfirstkannada.com

‘ಸ್ವರ್ಗದಲ್ಲಿದ್ದೇನೆ, ಎಂಜಾಯ್​ ಮಾಡುತ್ತಿದ್ದೇನೆ’ ಜೈಲಿನಲ್ಲಿ ಕುಳಿತು ಲೈವ್​ ವಿಡಿಯೋ ಹಂಚಿಕೊಂಡ ಕೊಲೆಗಾರ!

Share :

Published March 15, 2024 at 1:15pm

    ಕಾರಾಗೃಹದಲ್ಲಿ ಕುಳಿತು 2 ನಿಮಿಷಗಳ ಲೈವ್​ ವಿಡಿಯೋ ಮಾಡಿದ ಆರೋಪಿ

    ಶೀಘ್ರದಲ್ಲೇ ಜೈಲಿನಿಂದ ಹೊರ ಬರುತ್ತೇನೆ ಎಂದು ಹೇಳಿದ ವಿಡಿಯೋ ವೈರಲ್​

    ಕೊಲೆ ಮಾಡಿದ್ದ ಆರೋಪಿಗೆ ಜೈಲಿನಲ್ಲಿ ಇಷ್ಟೊಂದು ಸೌಕರ್ಯವಿದೆಯಾ?

ಉತ್ತರ ಪ್ರದೇಶ: ಕೊಲೆ ಆರೋಪಿಯೋರ್ವ ಜೈಲಿನಲ್ಲಿ ಕುಳಿತುಕೊಂಡು ಲೈವ್​ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಘಟನೆಯೊಂದು ಮುನ್ನೆಲೆಗೆ ಬಂದಿದೆ. ವಿಡಿಯೋದಲ್ಲಿ ಆತ ‘ಸ್ವರ್ಗ’ದಲ್ಲಿ ಜೀವನವನ್ನು ‘ಎಂಜಾಯ್​’ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.

ಉತ್ತರ ಪ್ರದೇಶದ ಬರೇಲಿ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ಆಸಿಫ್​ 2 ನಿಮಿಷಗಳ ಲೈವ್​ ವಿಡಿಯೋ ಹಂಚಿಕೊಂಡಿದ್ದು, ಶೀಘ್ರದಲ್ಲೇ ಜೈಲಿನಿಂದ ಹೊರಬಲಿದ್ದೇನೆ ಎಂದು ಹೇಳಿದ್ದಾನೆ.

ಸದ್ಯ ಈ ವಿಡಿಯೋ ಡೆಪ್ಯುಟಿ ಇನ್ಸ್​​ಪೆಕ್ಟರ್​ ಜನರಲ್​​ ಕುಂತಲ್​ ಕಿಶೋರ್​ಗೆ ಸಿಕ್ಕಿದ್ದು, ಈ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರಿದ್ದರು ಸಹ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಆಸಿಫ್​ ವಿಡಿಯೋದಲ್ಲಿ ‘ನಾನು ಸ್ವರ್ಗದಲ್ಲಿದ್ದೇನೆ ಮತ್ತು ಎಂಜಾಯ್​ ಮಾಡುತ್ತಿದ್ದೇನೆ. ಶೀಘ್ರದಲ್ಲೇ ಜೈಲಿನಿಂದ ಹೊರಬರುತ್ತೇನೆ’ ಎಂದು ಲೈವ್​ ವಿಡಿಯೋದಲ್ಲಿ ಹೇಳಿದ್ದಾನೆ.

ಕೊಲೆ ಮಾಡಿ ಜೈಲು ಸೇರಿದ್ದ

ಆಸಿಫ್​ 2019 ಡಿಸೆಂಬರ್​ 2ರಂದು ದೆಹಲಿಯ ಶಹಜಹಾನ್​ಪುರದ ಸದರ್​ ಬಜಾರ್​ ಪೊಲೀಸ್​ಠಾಣೆ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ರಾಕೇಶ್​​ ಯಾದವ್​ (34) ಅವರನ್ನು ಗುಂಡಿಕ್ಕಿ ಕೊಂದಿದ್ದನು. ಹಾಡುಹಗಲೇ ಕೊಲೆ ಮಾಡಿದ್ದನು. ಈ ಪ್ರಕರಣದಲ್ಲಿ ಬರೇಲಿ ಜೈಲು ಸೇರಿದ್ದನು.

ಆಸಿಫ್​ ಜೊತೆಗೆ ಮತ್ತೊಬ್ಬ ಆರೋಪಿ ರಾಹುಲ್​ ಚೌಧರಿ ಕೂಡ ಕೊಂದ ಆರೋಪವನ್ನು ಹೊತ್ತುಕೊಂಡಿದ್ದನು. ಸದ್ಯ ಇಬ್ಬರು ಬರೇಲಿ ಕೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಸದ್ಯ ಆಸಿಪ್​ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಇದನ್ನು ಕಂಡು ರಾಕೇಶ್​ ಯಾದವ್​ ಸಹೋದರ ಜಿಲ್ಲಾಧಿಕಾರಿ ಉಮೇಶ್​ ಪ್ರತಾಪ್​ ಸಿಂಗ್​ರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. ಕೊಲೆ ಆರೋಪಿ ಜೈಲಿನಲ್ಲಿ ವಿಶೇಷ ಸೌಲಭ್ಯ ತೆಗೆದುಕೊಳ್ಳುತ್ತಿದ್ದಾನೆ ಎಮದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸ್ವರ್ಗದಲ್ಲಿದ್ದೇನೆ, ಎಂಜಾಯ್​ ಮಾಡುತ್ತಿದ್ದೇನೆ’ ಜೈಲಿನಲ್ಲಿ ಕುಳಿತು ಲೈವ್​ ವಿಡಿಯೋ ಹಂಚಿಕೊಂಡ ಕೊಲೆಗಾರ!

https://newsfirstlive.com/wp-content/uploads/2024/03/Asif.jpg

Load More