/newsfirstlive-kannada/media/post_attachments/wp-content/uploads/2024/06/DARSHAN_MOTHER.jpg)
ಚಿತ್ರದುರ್ಗ: ಮನೆಗೆ ಮಗನೇ ಆಧಾರಸ್ತಂಭವಾಗಿದ್ದ. ಅವನೇ ಇಲ್ಲವೆಂದರೆ ನಾವು ಈಗ ಏನು ಮಾಡಬೇಕು. ಮಗುವನ್ನು ನೋಡಿಲ್ಲ, ಸೊಸೆಯ ಮುಂದಿನ ಜೀವನ ಹೆಂಗೆ ಎಂದು ಕಣ್ಣೀರು ಹಾಕುತ್ತಾ ರೇಣುಕಾಸ್ವಾಮಿ ತಾಯಿ ರತ್ನಪ್ರಭ ಹೇಳಿದ್ದಾರೆ.
ಇದನ್ನೂ ಓದಿ:ತೊಟ್ಟಿಲಲ್ಲಿ ಹಾಕಿದ್ದ ಕೈ ಮಣ್ಣಲ್ಲಿಯೂ ಹಾಕ್ತಿದೆ ಎಂದ ಹೆತ್ತ ತಾಯಿ.. ಕರುಳು ಹಿಂಡುವ ಕ್ಷಣಗಳ ಕಂಡು ಕಣ್ಣೀರಿಟ್ಟ ಜನ..
ಚಿತ್ರದುರ್ಗದ ತಮ್ಮ ನಿವಾಸದಲ್ಲಿ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ರೇಣುಕಾಸ್ವಾಮಿ ತಾಯಿ ರತ್ನಪ್ರಭ ಅವರು, ದರ್ಶನ್ವೊಬ್ಬ ಕಟುಕನಾಗಿ ಈ ತರ ಮಾಡಿದ್ದಾನೆ. ನನ್ನ ಮಗ ರಿಕ್ವೆಸ್ಟ್ ಮಾಡಿಕೊಂಡಿದ್ದಾನೆ ಅಂತೆ. ಬಿಟ್ಟು ಬಿಡಣ್ಣ, ನನ್ನ ಹೆಂಡತಿ ಬಸುರಿ ಇದ್ದಾಳೆ. ತಪ್ಪು ಮಾಡಿದ್ದೀನಿ. ಬಿಟ್ಟು ಬಿಡು ಎಂದು ರೇಣುಕಾ ಕೇಳಿಕೊಂಡಿದ್ದಾನಂತೆ. ಇಷ್ಟೊಂದು ಕೇಳಿಕೊಂಡ್ರು ಬಿಟ್ಟಿಲ್ಲ ಅಂದರೆ ದರ್ಶನ್ ಎಂಥ ನೀಚ ಇರಬಹುದು. ದರ್ಶನ್ ಒಬ್ಬ ನಾಯಕನಲ್ಲ ಖಳನಾಯಕ. ಇವನಿಗೆ ಡಿ-ಬಾಸ್ ಅಂತ ಯಾರು ಹೆಸರು ಕೊಟ್ಟರೋ ಗೊತ್ತಿಲ್ಲ. ಅವನಿಗೆ ಮೆಟ್ಟು ತಗೊಂಡು ಹೊಡೆಯಬೇಕು. ದರ್ಶನ್ ಕಂಡಲ್ಲೇ ಶೂಟ್ ಮಾಡಬೇಕು. ಈ ಸಾವಿಗೆ ಮೇನ್ ಕಾರಣ ದರ್ಶನ್, ಅವಳು ಪವಿತ್ರಾಗೌಡ. ಈ ಇಬ್ಬರನ್ನ ಒಂದೇ ಸಾರಿಗೆ ಶೂಟ್ ಮಾಡಬೇಕು ಎಂದು ತಾಯಿ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಮಾಡ್ತಿದ್ದ ಮೆಸೇಜ್ ಏನಾಗಿತ್ತು..? ಪವಿತ್ರಗೌಡ ತನಿಖೆಗೆ ಟ್ವಿಸ್ಟ್ ಕೊಡಲು ಮುಂದಾದ ಪೊಲೀಸ್..!
ಪವಿತ್ರಾ ಗೌಡಗೆ ಮಸೇಜ್ ಮಾಡಿದ್ನೋ, ಬಿಟ್ಟಿದ್ನೋ ಎಂಬುದರ ಮಾಹಿತಿ ನಮಗೆ ಏನೂ ಗೊತ್ತಿಲ್ಲ. ಅಶ್ಲೀಲ ಕಮೆಂಟೆ ಎಂದ್ರೆ ಎಲ್ಲರೂ ಹಾಕಿರುತ್ತಾರೆ. ಬೇರೆ ಬೇರೆಯವರು ಕೂಡ ಕೆಟ್ಟ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ಅವರನ್ನೆಲ್ಲ ಸುಮ್ಮನೇ ಬಿಟ್ಟು ನನ್ನ ಮಗನನ್ನೇ ಹೊಡೆದು ಸಾಯಿಸಿದ್ದನಲ್ಲ. ಅವಳು ಒಂದು ಹೆಣ್ಣು ಆಗಿ ಇನ್ನೊಂದು ಹೆಣ್ಣಿನ ಜೀವನ ಹಾಳು ಮಾಡಿದ್ದಾಳಲ್ಲ. ಅವಳು ಮನುಷ್ಯಳಾ?. ಇಟ್ಕೊಂಡಳೋ ಇರೋ ತನಕ, ಕಟ್ಕೊಂಡವಳೋ ಕಡೇ ತನಕ. ಇಟ್ಕೊಂಡೋಳೆ ಇಷ್ಟೊಂದು ಸೊಕ್ಕಿನಿಂದ ಇದ್ದಾಳೆ. ಈಗ ನನ್ನ ಮಗನನ್ನ ಸಾಯಿಸಿದ್ದಾರಲ್ಲ. ಯಾರು ವಾಪಸ್ ಕೊಡ್ತಾರೆ. ಅವನು ಹೋದವನು ವಾಪಸ್ ಬರ್ತಾನಾ ಎಂದು ಕಣ್ಣೀರು ಹಾಕಿದರು.
ಇದನ್ನೂ ಓದಿ: ತವರಿನಲ್ಲೇ ರೇಣುಕಾಸ್ವಾಮಿ ಅಂತ್ಯಕ್ರಿಯೆ.. ಬಿಕ್ಕಿ ಬಿಕ್ಕಿ ಅತ್ತ ಕುಟುಂಬಸ್ಥರು!
ಆರೋಪಿ ಪ್ರಭಾವಿ ಆಗಿದ್ದರೆ ಅವನ ಪಾಡಿಗೆ ಅಷ್ಟೇ. ಹೊರಗಿನ ನೋಟಕ್ಕೆ ಅವನು ಪ್ರಭಾವಿ ಅಲ್ಲ. ಸಿನಿಮಾದಲ್ಲಿ ಮೇರು ನಟ ಅಷ್ಟೇ, ಇವನ ಒಳಗಿನ ಉಳುಕು ಯಾರಿಗೂ ಗೊತ್ತಿಲ್ಲ. ಕಾನೂನು ಇತ್ತು. ಮಗನ ಕರೆದು ವಾರ್ನ್ ಮಾಡಿ ಬಿಡಬಹುದಿತ್ತು. ಬೇಡಿಕೊಂಡ್ರು ಬಿಟ್ಟಿಲ್ಲ ಅಂದರೆ ಎಂತಹ ಮನುಷ್ಯ ಅವನು. ಸರ್ಕಾರದಿಂದ ನ್ಯಾಯಯುತವಾಗಿ ತನಿಖೆ ನಡೆಯಲೇಬೇಕು. ಸೊಸೆಗೆ ಒಂದು ಪರಿಹಾರ ಕೊಡಲೇಬೇಕು. ತಪ್ಪಿಸ್ಥಸ್ತರಿಗೆ ಕಠಿಣ ಶಿಕ್ಷೆ ಆಗಲೇಬೇಕು. ನನ್ನ ಮಗನ ಯಾವ ರೀತಿ ಸಾಯಿಸಿದ್ದರೋ ಅದಕ್ಕಿಂತ ಡಬಲ್ ಆಗಿ ಸಾಯಿಸಬೇಕು. ಅವನ ವಂಶವನ್ನೇ ನಿರ್ವಂಶ ಮಾಡಬೇಕು ಎಂದು ತಾಯಿ ರತ್ನಪ್ರಭ ಗದ್ಗದಿತ ಧ್ವನಿಯಲ್ಲಿ ನೋವು ಹೊರ ಹಾಕಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ