newsfirstkannada.com

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌.. ಮತ್ತೆ ಜೈಲು ಪಾಲಾದ ಮುರುಘಾ ಶ್ರೀಗಳು; ಎಷ್ಟು ದಿನ ಬಂಧನ?

Share :

Published April 29, 2024 at 6:07pm

  ಚಿತ್ರದುರ್ಗದ ಮುರುಘಾ ಶರಣರು ಮತ್ತೊಮ್ಮೆ ಕಾರಾಗೃಹದ ಪಾಲು

  ಎರಡು ತಿಂಗಳು ಹೆಚ್ಚುವರಿ ಆದ್ರೂ ವಿಚಾರಣೆ ಮುಗಿಸಿ - ಕೋರ್ಟ್‌

  ಸುಪ್ರೀಂಕೋರ್ಟ್‌ ಆದೇಶದಂತೆ 7 ದಿನಗಳ ಒಳಗೆ ನ್ಯಾಯಾಲಯಕ್ಕೆ ಹಾಜರು

ಚಿತ್ರದುರ್ಗ: ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (ಪೋಕ್ಸೋ) ಪ್ರಕರಣದಲ್ಲಿ ಬಂಧನದಲ್ಲಿದ್ದ ಮುರುಘಾ ಶ್ರೀಗಳು ಮತ್ತೆ ಜೈಲು ಪಾಲಾಗಿದ್ದಾರೆ. ಹೈಕೋರ್ಟ್‌ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದ ಹಿನ್ನೆಲೆಯಲ್ಲಿ ಮುರುಘಾ ಶರಣರು ಮತ್ತೆ ಚಿತ್ರದುರ್ಗದ ಕಾರಾಗೃಹದ ಪಾಲಾಗಿದ್ದಾರೆ.

ಪೋಕ್ಸೋ ಪ್ರಕರಣದಲ್ಲಿ ಬಂಧನದಲ್ಲಿದ್ದ ಮುರುಘಾ ಶ್ರೀಗಳಿಗೆ ಹೈಕೋರ್ಟ್‌ ಬೇಲ್ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಪುರಸ್ಕೃತವಾಗಿತ್ತು. ನಾಲ್ಕು ತಿಂಗಳಲ್ಲಿ ಸಾಕ್ಷ್ಯ ಪೂರ್ಣ ಮಾಡಲು ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಎರಡು ತಿಂಗಳು ಹೆಚ್ಚುವರಿ ಆದ್ರೂ ವಿಚಾರಣೆ ಮುಗಿಸಿ ಅಂತ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.

ಇದನ್ನೂ ಓದಿ: ‘1 ಲಕ್ಷ ಪೆನ್‌ಡ್ರೈವ್‌ ಗಲ್ಲಿ, ಗಲ್ಲಿಗೆ ಹಂಚಿದ್ದಾರೆ’- ಹಾಸನ ಅಶ್ಲೀಲ ವಿಡಿಯೋ ಕೇಸ್‌ಗೆ HDK ಸ್ಫೋಟಕ ಹೇಳಿಕೆ 

ಸುಪ್ರೀಂಕೋರ್ಟ್‌ ಆದೇಶದಂತೆ 7 ದಿನಗಳ ಒಳಗೆ ಮುರುಘಾ ಶರಣರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಜಿಲ್ಲಾ ನ್ಯಾಯಾಲಯದ ಮುಂದೆ ಮುರುಘಾ ಶರಣರು ಸರೆಂಡರ್ ಆಗಿದ್ದು, ನ್ಯಾಯಾಲಯ ಮೇ 27 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಸರ್ವೋಚ್ಛ ನ್ಯಾಯಾಲಯ ನೀಡಿದ ಆದೇಶವನ್ನು ನಾವೂ ಕೂಡ ಗೌರವದಿಂದ ಸ್ವೀಕರಿಸುತ್ತೇವೆ ಎಂದ ನ್ಯಾಯಾಧೀಶರು ಮೇ 27ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದ್ದಾರೆ. ಕೋರ್ಟ್ ಆದೇಶದಂತೆ ವೈದ್ಯಕೀಯ ಪರೀಕ್ಷೆ ನಡೆಸಿದ ಪೊಲೀಸರು ಮುರುಘಾ ಶರಣರನ್ನು ಜೈಲು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌.. ಮತ್ತೆ ಜೈಲು ಪಾಲಾದ ಮುರುಘಾ ಶ್ರೀಗಳು; ಎಷ್ಟು ದಿನ ಬಂಧನ?

https://newsfirstlive.com/wp-content/uploads/2023/11/Murugha-Swamiji-Arrest.jpg

Load More