/newsfirstlive-kannada/media/post_attachments/wp-content/uploads/2025/05/Ishita-Varsha.jpg)
ಅಗ್ನಿಸಾಕ್ಷಿ ಮಾಯಾ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಇಶಿತಾ ವರ್ಷಾ ವೀಕ್ಷಕರ ಫೇವರೀಟ್. ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಪಾತ್ರ ಮಾಡ್ತಿದ್ದಾರೆ. ಪ್ರಾರಂಭದಲ್ಲಿ ನೆಗೆಟಿವ್ ಪಾತ್ರ ಆಗಿದ್ದ ಮಹಿಮಾ ಈಗ ಬದಲಾಗಿದ್ದಾಳೆ. ದಾರಿ ತಪ್ಪಿರೋ ಗಂಡ ಜೀವನ ಸರಿದಾರಿಗೆ ತರೋ ಪ್ರಯತ್ನದಲ್ಲಿದ್ದಾಳೆ ಮಹಿಮಾ.
ಇದನ್ನೂ ಓದಿ: ತಂದೆಯ ‘ಸುಪಾರಿ’ ಆರೋಪಕ್ಕೆ ಸಖತ್ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ.. ಏನಂದ್ರು?
ಇನ್ನೂ, ಇಶಿತಾ ಅಭಿನಯದ ಜೊತೆಗೆ ಫೋಟೋಗ್ರಾಫಿಯಲ್ಲೂ ಆಸಕ್ತಿ ಹೊಂದಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ನಾವು ಮಾಹಿತಿ ನೀಡಿದ್ದೀವಿ. ವೈಲ್ಡ್ ಲೈಫ್ ಫೋಟೋಗ್ರಾಫಿ ಅಂದ್ರೇ ಇಶಿತಾಗೆ ಸಿಕ್ಕಾಪಟ್ಟೆ ಇಷ್ಟ. ಕ್ಯಾಮೆರಾ ಕಣ್ಣಲ್ಲಿ ಅದ್ಭುತವಾದ ದೃಶ್ಯಗಳನ್ನ ಸೇರೆ ಹಿಡಿಯೋದರ ಜೊತೆಗೆ ಕ್ಯಾಮರಾಗೆ ಪೋಸ್ ಕೊಡೋದನ್ನ ಮರೆಯೋದಿಲ್ಲ ನಟಿ. ವಿಭಿನ್ನ ಕಾನ್ಸೆಪ್ಟ್ನಲ್ಲಿ ಫೋಟೋಶೂಟ್ ಮಾಡಿಸ್ತಿರ್ತಾರೆ.
View this post on Instagram
ಬೋಲ್ಡ್ ಲುಕ್ಸ್ ಮೂಲಕ ಗಮನ ಸೇಳಿತಿರೋ ಇಶಿತಾ ಮತ್ತೊಂದು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಸೀರೆಯನ್ನೇ ವಿಭಿನ್ನವಾಗಿ ಸ್ಟೈಲ್ ಮಾಡಿದ್ದು, ಫ್ರೆಂಚ್ ಶೈಲಿಯಲ್ಲಿ ಹೇರ್ ಸ್ಟೈಲ್ ಮಾಡಿಸಿದ್ದಾರೆ. ಹಳೆಯ ಪಾರಂಪರಿಕ ನೋಟಕ್ಕೆ ಹೊಸ ರೂಪ ಕೊಟ್ರೇ ಹೆಂಗಿರುತ್ತೋ ಆ ರೀತಿ ಹೊಳಿತಿದ್ದಾರೆ ಇಶಿತಾ ವರ್ಷಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ